ಒಂದೇ ಪುಟದಲ್ಲಿ ಕ್ರಿಸ್ತಪೂರ್ವ, ಕ್ರಿಸ್ತಶಕದ ಕ್ಯಾಲೆಂಡರ್
ಲಿಂಗಸುಗೂರು, ಜನವರಿ 05: ನೀವು ವರ್ಷದ ಕ್ಯಾಲೆಂಡರ್ ಮಾತ್ರ ನೋಡಿರ್ತಿರಿ. ಆದ್ರೆ ಇಲ್ಲೊಬ್ರು ಸಹಸ್ರ ವರ್ಷಗಳ ಕ್ಯಾಲೆಂಡರ್ ರಚಿಸಿದ್ದಾರೆ. ಒಂದೇ ಪುಟದಲ್ಲಿ ಕ್ರಿಸ್ತಪೂರ್ವ, ಕ್ರಿಸ್ತಶಕದ ಕ್ಯಾಲೆಂಡರ್ ನೋಡಬಹುದು. ಹೊಸ ವರ್ಷದ ಸಂದರ್ಭದಲ್ಲಿ ವಿಭಿನ್ನವಾದ ಕ್ಯಾಲೆಂಡರ್ವೊಂದನ್ನು ನೀವಿಲ್ಲಿ ನೋಡಬಹುದು.
ಎ4 ಅಳತೆಯ ಪುಟ.. ಆ ಪುಟದ ತುಂಬಾ ಅಂಕಿ-ಸಂಖ್ಯೆಗಳು.. ಒಂದೇ ಪುಟದಲ್ಲಿ ಅಡಗಿದೆ ಕ್ರಿಸ್ತಪೂರ್ವ, ಕ್ರಿಸ್ತಶಕ ಕ್ಯಾಲೆಂಡರ್.. ಇದು ಸಾಮಾನ್ಯ ಕ್ಯಾಲೆಂಡರ್ ಅಲ್ಲ.

ಅನಂತಮಾನ ಕ್ಯಾಲೆಂಡರ್. ಕೈಯಲ್ಲೊಂದು ನೋಟ್ ಬುಕ್, ಮೊಬೈಲ್ ಹಿಡಿದು ನಿಂತಿರೋ ಇವ್ರು ಶಿವಕೃಷ್ಣಮೂರ್ತಿ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಗ್ರಾಮದ ನಿವಾಸಿ ಶಿವಕೃಷ್ಣಮೂರ್ತಿ ಅವರು ಸತತ ಪ್ರಯತ್ನದಿಂದ ವಿಶೇಷವಾದ ಕ್ಯಾಲೆಂಡರ್ ವೊಂದನ್ನ ರಚಿಸಿದ್ದಾರೆ. ಒಂದೇ ಪುಟದಲ್ಲಿರೋ ಕ್ಯಾಲೆಂಡರ್ನಲ್ಲಿ ಕ್ರಿಸ್ತಪೂರ್ವ, ಕ್ರಿಸ್ತಶಕ ಕಾಲಘಟ್ಟವನ್ನ ನೋಡಬಹುದು.

1956ರ 12 ತಿಂಗಳುಗಳ ಕ್ಯಾಲೆಂಡರ್ ನೋಡಬೇಕಾದರೆ. 1956ರನ್ನು 28ರಿಂದ ಭಾಗಿಸಬೇಕು. 1956 % 28=69.85714286. ಭಾಗಶಃದ ಮೊತ್ತದಲ್ಲಿ ಮೊದಲ ಎರಡಂಕಿ ಅಂದ್ರೆ 69ನ್ನು ಕಳೆಯಬೇಕು. 69.85714286 - 69=0.85714286 ಬರುತ್ತದೆ. ಉಳಿದ ಮೊತ್ತವನ್ನು 28ರಿಂದ ಗುಣಿಸಬೇಕು. 0.85714286 X 28=24.00000008 ಬರುತ್ತದೆ.

ಒಂದು ವೇಳೆ .99 ಬಂದರೆ 24ರ ಬದಲು 25 ಎಂದು ಪರಿಗಣಿಸಬೇಕು. ಗುಣಿಸಿದಾಗ ಬಂದ 24ರ ಸಂಖ್ಯೆಯನ್ನ ಕ್ಯಾಲೆಂಡರ್ ಪುಟದ ಬಲ ಭಾಗದಲ್ಲಿರುವ 12 ತಿಂಗಳುಗಳ ಕೋಡ್ನ್ನ ಎಡಭಾಗದಲ್ಲಿರೋ ಕೋಡ್ನಲ್ಲಿ ಗಮನಿಸಿದಾಗ ಆ ವರ್ಷದ ಎಲ್ಲಾ ತಿಂಗಳು ಅಥವಾ ಯಾವುದಾದರೂ ತಿಂಗಳ ಕ್ಯಾಲೆಂಡರ್ ಗೊತ್ತಾಗುತ್ತದೆ.

ಇಷ್ಟು ದಿನ ವರ್ಷದ ಕ್ಯಾಲೆಂಡರ್ ನೋಡುತ್ತಿದ್ದ ಜನರಿಗೆ ಒಂದೇ ಪುಟದಲ್ಲಿ ಸಹಸ್ರರಾರು ವರ್ಷಗಳ ಕ್ಯಾಲೆಂಡರ್ ನೋಡುವಂತಾಗಿದೆ. ತುಂಬಾ ಕುತೂಹಲದಿಂದ ನೋಡುವ ಜನರು ಅನಂತಮಾನ ಎಂದು ಹೆಸರಿಟ್ಟಿರೋ ಕ್ಯಾಲೆಂಡರ್ ಬಗ್ಗೆ ಖುಷಿ ಪಡುತ್ತಾರೆ.
ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡಿರೋ ಹಟ್ಟಿ ಗ್ರಾಮದ ಶಿವಕೃಷ್ಣಮೂರ್ತಿ, 3ನೇ ತರಗತಿಯಲ್ಲಿದ್ದಾಗಲೇ 1986ರ ವರ್ಷದ ಕ್ಯಾಲೆಂಡರ್ ರಚಿಸಿದ್ದರಂತೆ.

ಅಂದಿನಿಂದ ಅಂಕಿ-ಸಂಖ್ಯೆಗಳು ಇವರಿಗೆ ಬಿಡಿಸಲಾಗದ ನಂಟು ಬೆಳೆದಿದೆ. ಸದ್ಯ ರಚಿಸಿರೋ ಅನಂತಮಾನ ಕ್ಯಾಲೆಂಡರ್ ವಿಶೇಷವಾಗಿ ಕಾಣಿಸುತ್ತಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications