ಕರ್ನಾಟಕ ಚುನಾವಣೆ: ದೇವಸೂಗೂರಿನಲ್ಲಿ ವಿಕಲಚೇತನ ಸ್ನೇಹಿ ಮತಗಟ್ಟೆ

ರಾಯಚೂರು, ಮೇ,08: ಗ್ರಾಮೀಣ ವಿಧಾನಸಭಾ ಕ್ಷೇತ್ರದ ದೇವಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ 18 ಸಂಖ್ಯೆಯ ಬೂತ್‌ನಲ್ಲಿ ವಿಕಲಚೇತನ ಸ್ನೇಹಿ ಮತಗಟ್ಟೆ ಕೇಂದ್ರ ತೆರೆಯಲಾಗಿದೆ. ಇವು ಚಿತ್ತಾಕರ್ಷಕದಿಂದ ಗಮನ ಸೆಳೆಯುತ್ತಿದೆ.

ವಿಧಾನಸಭೆ ಚುನಾವಣೆಗೆ ಬಿರುಸಿನ ಸಿದ್ಧತೆ ನಡೆಯುತ್ತಿದ್ದು ಮೇ.10ರಂದು ನಡೆಯುವ ಮತದಾನಕ್ಕೆ ವಿಕಲಚೇತನರ ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗ ಕಸರತ್ತು ನಡೆಸುತ್ತಿದೆ. ಈ ನಿಟ್ಟನಲ್ಲಿ ವಿಕಲಚೇತನರಲ್ಲಿ ಮತದಾನ ಜಾಗೃತಿ ಮತ್ತು ವಿಕಲಚೇತನರ ಮತದಾನ ಪ್ರಮಾಣ ಹೆಚ್ಚಿಸಲು ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ದೇವಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ 18 ಸಂಖ್ಯೆಯ ಬೂತ್‌ನಲ್ಲಿ ವಿಕಲಚೇತನ ಸ್ನೇಹಿ ಮತಗಟ್ಟೆ ಕೇಂದ್ರ ತೆರೆಯಲಾಗಿದೆ. ಇವು ಚಿತ್ತಾಕರ್ಷಕದಿಂದ ಗಮನ ಸೆಳೆಯುತ್ತಿದೆ.

Karnataka Election 2023: Disabled Friendly Polling Stations In Devasugur

ಚುನಾವಣೆಗಳಲ್ಲಿ ವಿಕಲಚೇತನರು ಕೆಲವು ಅನಿವಾರ್ಯ ಕಾರಣಗಳಿಂದ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯುತ್ತಿದ್ದರು. ಇದನ್ನು ಮನಗಂಡಿರುವ ಚುನಾವಣಾ ಆಯೋಗ, ಈ ಬಾರಿಯ ಚುನಾವಣೆಯಲ್ಲಿ ವಿಕಲಚೇತನರನ್ನು ಚುನಾವಣಾ ಮುಖ್ಯವಾಹಿನಿಗೆ ತರಲು ಅನೇಕ ಕ್ರಮ ಕೈ ಗೊಂಡಿದೆ. ಎಲ್ಲ ಮತಗಟ್ಟೆಗಳಿಗೂ ರ್ಯಾಂಚ್ ಅಳವಡಿಸಲಾಗುವುದು.

ವಿಕಲಚೇತನರು ಸರದಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ. ಅಂಗವಿಕಲರ ಮತದಾನಕ್ಕೆ ಸಹಾಯಕ ಮಾಡಲು ಸಿಬ್ಬಂದಿ ನೇಮಕ, ಕುಡಿಯುವ ನೀರು , ಹೆಚ್ಚು ಅಂಗವಿಕಲ ಮತದಾರರಿರುವ ಮತಗಟ್ಟೆಯಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ತಾಲೂಕಿನ ನೋಡಲ್ ಅಧಿಕಾರಿ ಅಮರೇಶ ಯಾದವ್ ಹೇಳಿದರು.

ಚುನಾವಣೆ ಆಯೋಗದ ಆದೇಶದಂತೆ ವಿಧಾನಸಭಾ ಕ್ಷೇತ್ರಕ್ಕೆ ಒಂದು ವಿಶೇಷ ಚೇತನರ ಸ್ನೇಹಿ ಮತಗಟ್ಟೆಯನ್ನು ತಾಲೂಕಿನ ದೇವಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ -18 ವಿಶೇಷಚೇತನರ ಸ್ನೇಹಿ ಮತಗಟ್ಟೆ ಎಂದು ಜಿಲ್ಲಾ ಸ್ಪಿಪ್ ಸಮಿತಿ ಆಯ್ಕೆ ಮಾಡಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು-70 ಜನ ವಿಕಲಚೇತನ ಮತದಾರರ ಇರುತ್ತಾರೆ. ಸದರಿ ಮತಗಟ್ಟೆಗೆ ಗ್ರಾಮ ಪಂಚಾಯಿತಿಯ ಶೇ. 5% ರಷ್ಟು ಅನುದಾನದಲ್ಲಿ ವಿಶೇಷಚೇತನರ ಮಾದರಿ ಮತಗಟ್ಟೆಗೆ ಮತದಾನ ಜಾಗೃತಿ ಸಂಬಂಧಿಸಿದಂತೆ ಪೇಂಟಿಂಗ್ ಪ್ರಕ್ರಿಯೆ ಮುಗಿದಿದ್ದು, ಇಂದು ಮತಗಟ್ಟೆ ಕೇಂದ್ರಕ್ಕೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ್ ಭೇಟಿ ನೀಡಿ ಪರಿಶೀಲನೆ ಮಾಡಿದರು.

Karnataka Election 2023: Disabled Friendly Polling Stations In Devasugur

ಶೇಕಡಾ 100ರಷ್ಟು ಮತದಾನ ಆಗಬೇಕು ಎನ್ನುವುದು ನಮ್ಮ ಆಶಯ. ವಿಕಲಚೇತನರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಇಂತಹ ಕ್ರಮ ಕೈಗೊಳ್ಳಲಾಗಿದೆ. ವಿಕಲಚೇತನರ ಸ್ನೇಹಿ ಚುನಾವಣೆ ಹಾಗೂ ಮತದಾರರ ಜಾಗೃತಿಯನ್ನು ದೃಷ್ಟಿ ಯಲ್ಲಿಟ್ಟುಕೊಂಡು ಈ ಬಾರಿ ವಿಕಲಚೇತನರ ಸ್ನೇಹಿ ಮತಗಟ್ಟೆ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+