ಹಂದಿ ಮರಿಗೆ ಹಾಲುಣಿಸೋ ಕರುಣಾಮಯಿ ನಾಯಿ!

ರಾಯಚೂರು, ಮಾರ್ಚ್ 24 ​: ಅದು ತಾಯಿಯಿಂದ ದೂರವಾದ ಹಂದಿ ಮರಿ. ನಾಯಿ ಮರಿಗಳ ಜೊತೆ ಸೇರಿ ಜೀವನ ಸಾಗಿಸುತ್ತಿದೆ. ಹದಿನೈದು ದಿನಗಳ ಹಿಂದೆ ಜನಿಸಿರಬಹುದಾದ ಹಂದಿ ಮರಿಗೆ ನಾಯಿ ಹಾಲೇ ಆಸರೆ. ಆ ದೃಶ್ಯ ಮಾತ್ರ ನೋಡುಗರ ಮನ ಕಲಕುವಂತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನಾನು ಪುಟಾಣಿ ವರಹಾ(ಹಂದಿ). ನನ್ನ ತಂದೆ-ತಾಯಿ, ಬಂಧು-ಬಳಗ ಯಾರೂ ಗೊತ್ತಿಲ್ಲ. ಅವರ್ಯಾರು ನನ್ನ ಜೊತೆ ಇಲ್ಲ. ಸದ್ಯ ನನ್ನನ್ನ ಸಾಕಿ ಸಲಹುತ್ತಿರೋದು ಶ್ವಾನ. ಮೂರೊತ್ತು ಹಾಲುಣಿಸೋ ಮೂಲಕ ತನ್ನ ಮಕ್ಕಳಂತೆ ನನ್ನನ್ನೂ ನೋಡಿಕೊಳ್ಳುತ್ತಿದ್ದಾಳೆ ನನ್ನವ್ವ. ಹೆತ್ತವ್ವ ಯಾರಾದರೇನು, ಇವಳೇ ನನ್ನ ಸಾಕವ್ವ. ನಾನಿರೋದು ರಾಯಚೂರು ನಗರದ ಡ್ಯಾಡಿ ಕಾಲೋನಿಯಲ್ಲಿ ಎಂದು ಹಂದಿ ಮರಿಯೇ ತನ್ನ ಹೇಳುತ್ತಿರುವಂತಿದೆ.

Dog mothers baby pig in Raichur

ಹದಿನೈದು ದಿನಗಳ ಹಿಂದೆ ನಾಯಿಯೊಂದು ಮರಿಗಳಿಗೆ ಜನ್ಮ ನೀಡಿದೆ. ಇದೇ ವೇಳೆ ಹಂದಿಯೊಂದು ಕೂಡ ಮರಿಗಳಿಗೆ ಜನ್ಮ ನೀಡಿದೆ. ಆದ್ರೆ ಹಂದಿ ಮರಿ ತಾಯಿಯಿಂದ ದೂರಾಗಿ ನಾಯಿ ಬಳಗವನ್ನ ಸೇರಿಕೊಂಡಿದೆ. ದಿನಾಲೂ ನಾಯಿ ಮರಿಗಳ ಜೊತೆಯೇ ಹಂದಿ ಮರಿ ಸುತ್ತಾಟ ಮಾಡುತ್ತೆ. ಅವುಗಳ ಜೊತೆಯೇ ವಾಸ ಮಾಡುತ್ತದೆ. ಇದು ನೋಡುಗರಿಗೆ ಕುತೂಹಲ ಮೂಡಿಸಿದೆ.

Dog mothers baby pig in Raichur

ನಾಯಿ ಮತ್ತು ಹಂದಿ ತದ್ವಿರುದ್ಧ ಪ್ರಾಣಿಗಳು. ಅವುಗಳು ಜೊತೆಯಾಗಿ ಬಾಳೋದು ಭಾಂದವ್ಯ, ಮಾನವೀಯತೆಯನ್ನ ತೋರಿಸುತ್ತದೆ. ಇಂಥ ಸೋಜಿಗ ನೋಡಲು ಸಿಗುವುದು ಕೂಡ ಅಪರೂಪ. ಜಾತಿ-ಧರ್ಮದ ಸಂಘರ್ಷದಲ್ಲಿ ಬೇಯುತ್ತಿರೋ ಇಂದಿನ ದಿನಮಾನಗಳಲ್ಲಿ ಇಂಥ ಮೂಕ ಪ್ರಾಣಿಗಳು ಮಾದರಿಯಾಗಿ ಕಾಣುತ್ತವೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+