'ಇದು ನಾವು ಭಯಪಡುವ ರೋಗವೇ ಅಲ್ಲ' - 2ನೇ ಬಾರಿ ಕೋವಿಡ್‌ ಗೆದ್ದ ರಾಯಚೂರಿನ 90 ರ ವೃದ್ಧೆ

ರಾಯಚೂರು, ಮೇ 27: ದೇಶದಾದ್ಯಂತ ಈಗಾಗಲೇ ಎರಡನೇ ಕೊರೊನಾ ಅಲೆ ಆರಂಭವಾಗಿದ್ದು ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಲಿದೆ. ಕೊರೊನಾ ಸಾವು ಪ್ರಕರಣಗಳು ಕೂಡಾ ಗಣನೀಯ ಪ್ರಮಾಣದಲ್ಲಿದೆ. ಈ ನಡುವೆ ಬ್ಲ್ಯಾಕ್‌ ಫಂಗಸ್‌, ವೈಟ್‌ ಫಂಗಸ್‌, ಎಲ್ಲೋ ಫಂಗಸ್‌ ಸೋಂಕಿನ ಆತಂಕವೂ ಮನೆ ಮಾಡಿದೆ. ಈ ನಡುವೆ ಜಿಲ್ಲೆಯ ಲಿಂಗಸುಗೂರಿನ 90 ವರ್ಷದ ವೃದ್ದೆಯೊಬ್ಬರು ಎರಡನೇ ಬಾರಿ ಕೊರೊನಾ ಗೆದ್ದು ಬಂದಿದ್ದಾರೆ.

ಅಜ್ಜಿ ಈಶ್ಮರಮ್ಮಗೆ ಫೆಬ್ರವರಿ ತಿಂಗಳಲ್ಲಿ ಮೊದಲ ಬಾರಿ ಕೊರೊನಾ ಸೋಂಕು ದೃಢಪಟ್ಟಿತ್ತು. ಆ ಸಂದರ್ಭದಲ್ಲಿ ಲಿಂಗಸುಗೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ವಾಪಾಸ್‌ ಬಂದಿದ್ದರು. ಆದರೆ 10 ದಿನಗಳ ಹಿಂದೆ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ತನಗೆ ಎರಡನೇ ಬಾರಿಗೆ ಕೊರೊನಾ ಸೋಂಕು ದೃಢಪಟ್ಟರೂ ಆತಂಕಕ್ಕೆ ಒಳಗಾಗದ 90 ವರ್ಷದ ಅಜ್ಜಿ, ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂಧಿಸಿರುವ ಅಜ್ಜಿ ಈಶ್ವರಮ್ಮ, ಕೋವಿಡ್‌ ಸೋಂಕಿನಿಂದ ಗುಣಮುಖರಾಗಿ ಮನೆಗೆ ವಾಪಾಸ್‌ ಬಂದಿದ್ದಾರೆ.

Raichur: 90 years old Woman recovers from covid-19 for the second time

ಇನ್ನು ಅಜ್ಜಿ ಆಸ್ಪತ್ರೆಯಲ್ಲಿದ್ದ ಸಂದರ್ಭ ಆತಂಕಕ್ಕೆ ಒಳಗಾಗಿದ್ದ ಮಕ್ಕಳು, ಮೊಮ್ಮಕ್ಕಳು ಆಂತಕಕ್ಕೆ ಒಳಗಾಗಿದ್ದು ಈ ವೇಳೆ ಅಜ್ಜಿಯೇ ಮಕ್ಕಳು, ಮೊಮ್ಮಕ್ಕಳ ಬಳಿ ಭಯಪಡದಂತೆ ಧೈರ್ಯ ಹೇಳಿದ್ದಾರೆ. ಹಾಗೆಯೇ ಕೋವಿಡ್‌ ಸೋಂಕು ನಾವು ಭಯಪಡುವ ರೋಗವೇ ಅಲ್ಲ ಎಂದು ಹೇಳುವ ಅಜ್ಜಿ, ಯಾವುದೇ ರೋಗದ ವಿರುದ್ದ ಹೋರಾಡಲು ಔಷಧಿ ಮಾತ್ರವಲ್ಲ ಆತ್ಮವಿಶ್ವಾಸವೂ ಮುಖ್ಯ. ನಾವು ವೈದ್ಯರು ಹೇಳಿದಂತೆ ಕೇಳಬೇಕು, ಜೊತೆಗೆ ವ್ಯಾಯಾಮವನ್ನು ಮಾಡಬೇಕು ಎಂದು ಹೇಳಿದ್ದಾರೆ.

ಇತ್ತೀಚೆಗೆ ರಾಯಚೂರಿನ ಮಹಾವೀರ ವೃತ್ತದ ಸಮೀಪದ ನಿವಾಸಿ ಸಜಿನಿಬಾಯಿ ಎಂಬ 97 ರ ವೃದ್ದೆ ಕೊರೊನಾ ಸೋಂಕಿನಿಂದ ಗುಣಮುಖರಾಗುವ ಮೂಲಕ ಸುದ್ದಿಯಾಗಿದ್ದರು.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+