ರಾಹುಲ್ ಗಾಂಧಿ ಬಯೋಪಿಕ್ ಗೆ ಹೀರೋಯಿನ್ ಯಾರು? ಉತ್ತರ ಕೇಳಿ...
Recommended Video

ಪುಣೆ, ಏಪ್ರಿಲ್ 05: 'ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಯೋಪಿಕ್ ಗೆ ಹೀರೋಯಿನ್ ಯಾರು?' ಹಾಗಂತ ರಾಹುಲ್ ಗಾಂಧಿ ಅವರನ್ನೇ ಸಂವಾದವೊಂದರಲ್ಲಿ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಸಂದರ್ಭದಲ್ಲಿ ಗಾಂಧಿ ಅವರನ್ನು ವಿದ್ಯಾರ್ಥಿಯೊಬ್ಬರು ಈ ರೀತಿ ಪ್ರಶ್ನಿಸಿದರು.
ಈ ಪ್ರಶ್ನೆಗೆ ಉತ್ತರ ನೀಡಿದ ರಾಹುಲ್ ಗಾಂಧಿ, "ನಾನು ಕೆಲಸವನ್ನೇ ಮದುವೆಯಾಗಿದ್ದೇನೆ" ಎಂದು ಉತ್ತರಿಸಿ ಸುಮ್ಮನಾದರು! 'ನಿಮ್ಮ ಬಯೋಪಿಕ್ ನಲ್ಲಿ ಯಾವ ನಟಿ ಹೀರೋಯಿನ್ ಆಗಿ ನಟಿಸುತ್ತಾರೆ ?' ಎಂಬ ಪ್ರಶ್ನೆಗೂ, 'ನಾನು ಕೆಲಸವನ್ನೇ ಮದುವೆಯಾಗಿದ್ದೇನೆ' ಎಂಬ ಉತ್ತರಕ್ಕೂ ಸಂಬಂಧ ಕಲ್ಪಿಸುವುದಕ್ಕೆ ಹೋದರೆ, ರಾಹುಲ್ ಗಾಂಧಿ ಅವರ ಚಿತ್ರದಲ್ಲಿ ಹೀರೋಯಿನ್ ಇರುವುದಿಲ್ಲವೇನೋ ಎಂಬ ಉತ್ತರ ಸಿಗುತ್ತದೆ!

ರಾಹುಲ್ ಗಾಂಧಿ ಅವರನ್ನು ಮದುವೆಯ ಬಗ್ಗೆ ಹಲವರು ಈಗಾಗಲೇ ಪ್ರಶ್ನಿಸಿದ್ದಾರೆ. ಕಳೆದ ವರ್ಷವೂ ಹೈದರಾಬಾದಿನಲ್ಲಿ ಪತ್ರಕರ್ತರೊಬ್ಬರು ಕೇಳಿದ ಈ ಪ್ರಶ್ನೆಗೆ ಉತ್ತರಿಸಿದ ಗಾಂಧಿ, 'ನಾನು ಕಾಂಗ್ರೆಸ್ ಪಕ್ಷವನ್ನೇ ಮದುವೆಯಾಗಿದ್ದೇನೆ' ಎಂದಿದ್ದರು.












Click it and Unblock the Notifications