ನಾಯಿ ಜೊತೆ ರತಿಕ್ರೀಡೆ : ವಿಕೃತ ಕಾಮಿಯ ಬಂಧನ

ಪುಣೆ, ನ. 27 : ಬೀದಿ ನಾಯಿ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಕರ್ನಾಟಕದ ಮೂಲದ 52 ವರ್ಷದ ವ್ಯಕ್ತಿಯನ್ನು ಪುಣೆಯ ವಿಶ್ರಮ್ ಭಾಗ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತನನ್ನು ನಾರಾಯಣ ಪೇಟ್ ನಿವಾಸಿಯಾದ ಹನುಮಂತ್ ದತ್ತಪ್ಪ ಮಾನೆ ಎಂದು ಗುರುತಿಸಲಾಗಿದೆ.

ಕುಡಿತದ ದಾಸನಾಗಿರುವ ಮಾನೆ ಸೋಮವಾರ ರಾತ್ರಿ ಬೀದಿ ನಾಯಿಯನ್ನು ದರದರನೆ ಮನೆಯೊಳಗೆ ಎಳೆದೊಯ್ದು ಅದರ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ನೆರೆಯ ನಿವಾಸಿ ಸಂದೀಪ್ ನಾಮದೇವ್ ರೌತ್ (32) ಎಂಬುವವರು ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಮಾನೆಯನ್ನು ಪೊಲೀಸರು ಬಂಧಿಸಿ ಕೇಸು ಜಡಿದಿದ್ದಾರೆ.

ಕರ್ನಾಟಕದ ಮೂಲದ ಹನುಮಂತ್ ಮಾನೆ 1988ರಿಂದಲೂ ಪುಣೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾನೆ. ಆತನಿಗೆ ಮದುವೆಯಾಗಿದ್ದು, ಮೂವರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಈತನ ಕುಡಿತದ ದಾಸ್ಯದಿಂದ ಬೇಸತ್ತ ಅವರೆಲ್ಲರೂ ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಮಾನೆ ಮಾತ್ರ ಪುಣೆಯಲ್ಲಿಯೇ ಉಳಿದಿದ್ದು, ಸ್ಥಳೀಯ ಮ್ಯೂಸಿಕ್ ಬ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

Unnatural intercourse with dog : Karnataka man arrested

ಸೋಮವಾರ ರಾತ್ರಿ ನಡೆದಿದ್ದೇನು? : ಸಂದೀಪ್ ಅವರು ರಾತ್ರಿ 10 ಗಂಟೆಯ ಸುಮಾರಿಗೆ ತರಕಾರಿ ಮಾರುಕಟ್ಟೆಯಿಂದ ವಾಪಸಾಗಿ, ಊಟ ಮುಗಿಸಿದ ನಂತರ 11.30ರ ಸುಮಾರಿಗೆ ಬಾಲ್ಕನಿಯಲ್ಲಿ ಗಾಳಿ ಸೇವನೆ ಮಾಡುತ್ತಿದ್ದರು. ಆಗ, ಹನುಮಂತ್ ಮಾನೆ ಬೀದಿ ನಾಯಿಯನ್ನು ತನ್ನ ಮನೆಯೊಳಗೆ ಎಳೆದುಕೊಂಡು ಹೋಗುತ್ತಿದ್ದುದನ್ನು ನೋಡಿದ್ದಾರೆ.

ರೌತ್ ಅವರಿಗೆ ಸಂದೇಹ ಬಂದಿದೆ. ನಾಯಿಯನ್ಯಾಕೆ ಎಳೆದೊಯ್ತಿದ್ದಾನೆ ಅಂತ ಕುತೂಹಲದಿಂದ ಮಾನೆ ಮನೆಗೆ ಹೋಗಿ ಕಿಟಕಿಯಿಂದ ಇಣುಕಿ ನೋಡಿದಾಗ ಆಘಾತಕಾರಿ ದೃಶ್ಯ ಕಣ್ಣಿಗೆ ಬಿದ್ದಿದೆ. ಮಾನೆ ಬೀದಿ ನಾಯಿಯೊಡನೆ ಕಾಮಕೇಳಿ ನಡೆಸುತ್ತಿದ್ದ ಅಮಾನವೀಯ ಘಟನೆಯನ್ನು ಕೂಡಲೆ ಸಂದೀಪ್ ಅವರು ವಿಶ್ರಮ್‌ಭಾಗ್ ಪೊಲೀಸರಿಗೆ ತಿಳಿಸಿದ್ದಾರೆ.

ಮಾನೆಯನ್ನು ಬಂಧಿಸಿರುವ ಪೊಲೀಸರು ಭಾರತೀಯ ದಂಡ ಸಂಹಿತೆಯ 377 ಸೆಕ್ಷನ್ (ಅಸಹಜ ಲೈಂಕಿಕತೆ - ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ಪ್ರಾಣಿಯೊಡನೆ ಅಸಹಜ ಲೈಂಗಿಕ ಕ್ರಿಯೆ ನಡೆಸುವುದು) ಅಡಿಯಲ್ಲಿ ಮೊಕದ್ದಮೆ ಹೂಡಿದ್ದಾರೆ. ಮಾನೆ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆಯ ಸೆಕ್ಷನ್ 11ರ ಅಡಿಯೂ ಕೇಸ್ ದಾಖಲಿಸಲಾಗಿದೆ. ಈ ಕೃತ್ಯವನ್ನು ವಿರೋಧಿಸಿ ಪ್ರಾಣಿದಯಾ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ, ಮಾನೆಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+