ನೌಕಾದಳದ ಅಧಿಕಾರಿಗೆ ಪೋಲಿ ಚಿತ್ರ ವೀಕ್ಷಣೆ ವ್ಯಸನ, ಪತ್ನಿಯ ಆಕ್ಷೇಪಾರ್ಹ ಚಿತ್ರಗಳು ಅಪ್ ಲೋಡ್

ಪುಣೆ, ನವೆಂಬರ್ 29: ಪತ್ನಿಯ ಆಕ್ಷೇಪಾರ್ಹ ಹಾಗೂ ಮಾರ್ಫ್ ಮಾಡಿದ ಫೋಟೋಗಳನ್ನು ಆನ್ ಲೈನ್ ಫೋಟೋ ಅಪ್ಲಿಕೇಷನ್ ನಲ್ಲಿ ಅಪ್ ಲೋಡ್ ಮಾಡಿದ ಆರೋಪದ ಮೇಲೆ 39 ವರ್ಷದ ಭಾರತೀಯ ನೌಕಾ ಸೇನೆಯ ಕಮ್ಯಾಂಡರ್ ವಿರುದ್ಧ ಪುಣೆ ಪೊಲೀಸರು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ದೂರು ನೀಡಿದ ಮಹಿಳೆ, ಸದ್ಯಕ್ಕೆ ನನ್ನ ಪತಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪೋಲಿ ಚಿತ್ರ ವೀಕ್ಷಣೆಯ ವ್ಯಸನ ಇದೆ ಎಂದು ತಿಳಿಸಿದ್ದಾರೆ. ಆ ಮಹಿಳೆ ಕೂಡ ಮಾಜಿ ಸೇನಾಧಿಕಾರಿ. ತನ್ನ ಗಂಡನ ವ್ಯಸನದಿಂದ ಬೇಸತ್ತು, ಈಚೆಗೆ ಮಕ್ಕಳನ್ನೂ ಕರೆದುಕೊಂಡು ಪೋಷಕರ ಮನೆಗೆ ಬಂದಿದ್ದಾರೆ.

ಪತಿಯ ನಡವಳಿಕೆಯಿಂದ ರೋಸತ್ತು, ಪುಣೆಗೆ ಬಂದು ನೆಲೆಸಿರುವ ಆ ಮಹಿಳೆ, ವಿವಾಹ ವಿಚ್ಛೇದನಕ್ಕಾಗಿ ಕಳೆದ ತಿಂಗಳು ಅರ್ಜಿ ಕೂಡ ಹಾಕಿದ್ದಾರೆ. ದೆಹಲಿಯಿಂದ ಪುಣೆಗೆ ಬರುವ ವೇಳೆಯಲ್ಲಿ ಆ ಮಹಿಳೆಯು ಪತಿಯ ಮೊಬೈಲ್ ಫೋನ್ ತಂದಿದ್ದರು. ಅದರಲ್ಲಿ ನೋಡಿದಾಗ ಆಕ್ಷೇಪಾರ್ಹ ಫೋಟೋಗಳನ್ನು ಫೋಟೋ ಅಪ್ಲಿಕೇಷನ್ ನಲ್ಲಿ ಅಪ್ ಲೋಡ್ ಮಾಡಿರುವುದು ಗೊತ್ತಾಗಿದೆ.

Navy officer booked for uploading objectionable pics of wife online

ಜತೆಗೆ ತನ್ನ ಸಹೋದ್ಯೋಗಿಗಳ ಪತ್ನಿಯರದು ಹಾಗೂ ಇತರ ಮಹಿಳೆಯರ ಆಕ್ಷೇಪಾರ್ಹ ಫೋಟೋಗಳನ್ನು ಸಹ ಅಪ್ಲಿಕೇಷನ್ ಗೆ ಅಪ್ ಲೋಡ್ ಮಾಡಿರುವುದಾಗಿ ಆರೋಪಿಸಲಾಗಿದೆ. ಆರೋಪಿಗೆ ತನ್ನ ಸಹೋದ್ಯೋಗಿಗಳ ಪತ್ನಿಯರ ಜತೆಗೆ ಅಕ್ರಮ ಸಂಬಂಧ ಇರುವ ಬಗ್ಗೆ ದೂರು ನೀಡಲಾಗಿದೆ. ಆದರೆ ಇತರ ಯಾವ ಮಹಿಳೆಯರೂ ಆರೋಪಿ ವಿರುದ್ಧ ದೂರು ನೀಡಿಲ್ಲ.

"ಆರೋಪಿಯ ವಿಚಾರಣೆ ನಡೆಸುವುದಕ್ಕೆ ಅನುಮತಿ ನೀಡಬೇಕು ಎಂದು ನೌಕಾ ದಳದ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ" ಎಂದು ಪುಣೆ ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+