Get Updates
Get notified of breaking news, exclusive insights, and must-see stories!

ಪನ್ನೀರ್ ಬಟರ್ ಬದಲು ಚಿಕನ್ ಬಟರ್ ನೀಡಿದ್ದಕ್ಕೆ ದಂಡ ವಿಧಿಸಿದ ಕೋರ್ಟ್

ಪುಣೆ, ಜುಲೈ 8: ಸಸ್ಯಾಹಾರಿ ಖಾದ್ಯವನ್ನು ಆರ್ಡರ್ ಮಾಡಿದ್ದ ವಕೀಲರೊಬ್ಬರಿಗೆ ಮಾಂಸಾಹಾರಿ ಖಾದ್ಯವನ್ನು ಡೆಲಿವರಿ ಮಾಡಿದ್ದಕ್ಕಾಗಿ ಆಹಾರ ಸರಬರಾಜು ಮಾಡುವ ಝೊಮ್ಯಾಟೋ ಹಾಗೂ ಆ ಮಾಂಸಾಹಾರಿ ಖಾದ್ಯವನ್ನು ನೀಡಿದ ಹೋಟೆಲ್ ಗೆ ಪುಣೆಯ ಗ್ರಾಹಕ ನ್ಯಾಯಾಲಯವು 55 ಸಾವಿರ ರುಪಾಯಿ ದಂಡ ವಿಧಿಸಿದೆ.

ಮಾಧ್ಯಮದ ವರದಿ ಪ್ರಕಾರ, ಇನ್ನು ನಲವತ್ತೈದು ದಿನದೊಳಗೆ ವಕೀಲ ಷಣ್ಮುಖ್ ದೇಶ್ ಮುಖ್ ಗೆ ದಂಡದ ಮೊತ್ತ ಪಾವತಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಅಂದ ಹಾಗೆ ಅವರಿಗೆ ಹೀಗೆ ಸಸ್ಯಾಹಾರದ ಬದಲಿಗೆ ಮಾಂಸಾಹಾರ ಖಾದ್ಯವನ್ನು ಡೆಲಿವರಿ ಮಾಡಿದ್ದು ಎರಡು ಬಾರಿಯಂತೆ.

ಪನ್ನೀರ್ ಬಟರ್ ಮಸಾಲವನ್ನು ಆರ್ಡರ್ ಮಾಡಿದ್ದ ವಕೀಲರಿಗೆ ಅದರ ಬದಲಿಗೆ ಬಟರ್ ಚಿಕನ್ ಡೆಲಿವರಿ ಮಾಡಲಾಗಿದೆ. ಎರಡಕ್ಕೂ ಬಳಸುವ ಸಂಬಾರು ಪದಾರ್ಥಗಳು ಬಹುತೇಕ ಒಂದೇ ಥರ ಇರುವುದರಿಂದ ವಕೀಲರಿಗೆ ವ್ಯತ್ಯಾಸ ಗೊತ್ತಾಗದೆ ಚಿಕನ್ ಅನ್ನೇ ತಿಂದಿದ್ದರು.

Consumer court fined Zomato for delivering non veg instead of veg food

ಈ ತಪ್ಪಾಗಿರುವುದು ಹೋಟೆಲ್ ನಿಂದ, ನಮ್ಮ ಕಡೆಯಿಂದ ಅಲ್ಲ ಎಂದು ಝೊಮ್ಯಾಟೊ ಹೇಳಿಕೊಂಡಿದೆ. ಇನ್ನು ತಮ್ಮ ಕಡೆಯಿಂದ ತಪ್ಪಾಗಿದೆ ಎಂದು ಹೋಟೆಲ್ ನವರು ಒಪ್ಪಿಕೊಂಡಿದ್ದಾರೆ. ಸರಿಯಾದ ಸೇವೆ ಒದಗಿಸದ ಕಾರಣಕ್ಕೆ ಹೋಟೆಲ್ ಹಾಗೂ ಝೊಮ್ಯಾಟೊದವರಿಗೆ ಐವತ್ತು ಸಾವಿರ ದಂಡ ವಿಧಿಸಿದ್ದು, ಬಾಕಿ ಮೊತ್ತವನ್ನು ಮಾನಸಿಕ ಹಿಂಸೆ ನೀಡಿದ್ದಕ್ಕಾಗಿ ವಿಧಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+