ಪುಣೆಯಲ್ಲಿ ಬೆಂಗಳೂರು ಟೆಕ್ಕಿ ರೇಪ್; ಪೊಲೀಸರಿಂದ ಅಪಮಾನ

ಕೊನೆಗೂ ಛಲದಂಕಮಲ್ಲಳಾದ ಯುವತಿ ವೈದ್ಯಕೀಯ ಪರೀಕ್ಷೆಗೊಳಗಾಗಿ ಕಳೆದ ಶುಕ್ರವಾರ ಕೋರ್ಟ್ ಮೆಟ್ಟಿಲು ಹತ್ತಿ ಆರೋಪಿಯ ವಿರುದ್ಧ ಕೇಸು ದಾಖಲಾಗುವಂತೆ ನೋಡಿಕೊಂಡಿದ್ದಾಳೆ. ಆರೋಪಿ 40 ವರ್ಷದ ನೆವಲ್ ಮಾಣಿಕ್ ಪಟೇಲ್ ಉದ್ಯೋಗ ಕೊಡಿಸುವ ನೆಪದಲ್ಲಿ ಬೆಂಗಳೂರಿನ ಟೆಕ್ಕಿಯನ್ನು ಹೋಟೆಲ್ ರೂಮಿಗೆ ಕರೆಸಿಕೊಂಡಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಫೇಬ್ರವರಿ 12ರಂದು ಬುಂದ್ ಗಾರ್ಡನ್ ತ್ರಿ ಸ್ಟಾರ್ ಹೋಟೆಲಿನಲ್ಲಿ ಈ ದುರ್ಘಟನೆ ನಡೆದಿದೆ. ಪೊಲೀಸ್ ಇಲಾಖೆಯು ಈಗ ರೇಪಿಸ್ಟ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದರ ಜತೆಗೆ ಇನ್ಸ್ ಪೆಕ್ಟರ್ ವಿರುದ್ಧವೂ ಇಲಾಖಾ ವಿಚಾರಣೆಗೆ ಆದೇಶಿಸಿದೆ. ಆದರೆ ಇದುವರೆಗೆ ಪ್ರಕರಣ ಸಂಬಂಧ ಯಾರನ್ನೂ ಬಂಧಿಸಿಲ್ಲ.
ತಾನು ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ MSc ಮಾಡಿದ್ದು, ಉದ್ಯೋಗವನ್ನರಸಿ ಪುಣೆಗೆ ಬಂದಿದ್ದಾಗ ಫೆಬ್ರವರಿ ತಿಂಗಳಲ್ಲಿ ತನ್ನ ಮೇಲೆ ಇಂತಹ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬಾಧಿತ ಯುವತಿ ತಿಳಿಸಿದ್ದಾರೆ. ಅದಕ್ಕೂ ಮುನ್ನ ಆಕೆ 6 ತಿಂಗಳ ಕಾಲ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಅನುಭವ ಪಡೆದಿದ್ದರು.
ಪುಣೆ ವಿಮಾನನಗರದಲ್ಲಿ ಸಾಫ್ಟ್ ವೇರ್ ಕಂಪನಿ ಹೊಂದಿರುವ ಪಟೇಲ್, ಆಕೆಯನ್ನು ಸಂದರ್ಶನಕ್ಕೆಂದು ಪುಣೆಗೆ ಕರೆಯಿಸಿಕೊಡಿದ್ದ. ಸಂದರ್ಶನದ ವೇಳೆ ಆಕೆಯ ಜತೆ ಅಸಭ್ಯವಾಗಿ ವರ್ತಿಸತೊಡಗಿದ್ದಾನೆ. ಬಾಧಿತ ಯುವತಿ ಕಿರುಚಾಡತೊಡಗಿದಾಗ ಪಟೇಲ್, ಆಕೆಯನ್ನು ಹೊಡೆದು ಬಡಿದು ಮಾಡಿ, ಕೊನೆಗೆ ಆಕೆಯ ಮೇಲೆ ಅತ್ಯಾಚಾರ ಸಹ ಮಾಡಿದ್ದಾನೆ.
ಎಲ್ಲಾ ಆದಮೇಲೆ ಕೆಲಸ ಕೊಡಿಸುವ ಭರವಸೆ ನೀಡಿದ್ದಾನೆ. ಪ್ರಕರಣವನ್ನು ಮುಚ್ಚಿಹಾಕಲು ಆಕೆಯ ಮೇಲೆ ಒತ್ತಡ ಹೇರಿ, ಒಳ್ಳೆಯ ಪೋಸ್ಟ್ ಕೊಡುವುದಾಗಿ ಆಸೆ ಹುಟ್ಟಿಸಿದ್ದಾನೆ. ಆದರೆ ಆಕೆ ಅದಕ್ಕೆ ಸೊಪ್ಪು ಹಾಕದೇ ಹೋದಾಗ ಬಾಧಿತಳ ಅಶ್ಲೀಲ ಚಿತ್ರಗಳನ್ನು ತೋರಿಸಿ, ಮಾನ ಮರ್ಯಾದೆ ಹರಾಜು ಹಾಕುವುದಾಗಿ ಬೆದರಿಸಿದ್ದಾನೆ. ಅಷ್ಟೇ ಆಲ್ಲ, ಸಂದರ್ಶನದ ವೇಳೆ ಆಕೆಯಿಂದ ಪಡೆದಿದ್ದ ಶೈಕ್ಷಣಿಕ ದಾಖಲೆ ಪತ್ರಗಳನ್ನು ವಾಪಸ್ ಮಾಡದೆ ಸತಾಯಿಸಿದ್ದಾನೆ.












Click it and Unblock the Notifications