Get Updates
Get notified of breaking news, exclusive insights, and must-see stories!

ಕೇಂದ್ರ ಸರ್ಕಾರ ಕೊಟ್ಟ ಹುದ್ದೆಯನ್ನು ತ್ಯಜಿಸಿದ ಅನುಪಮ್ ಖೇರ್

ಪುಣೆ, ಅಕ್ಟೋಬರ್ 31 : ಪ್ರಧಾನಿ ಮೋದಿ ಅವರನ್ನು ಮೆಚ್ಚಿ ಅವರ ಯೋಜನೆಗಳ ಪರ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದ ನಟ ಅನುಪಮ್ ಖೇರ್ ಅವರಿಗೆ ಪ್ರತಿಷ್ಠಿತ ಸಿನಿಮಾ ತರಬೇತಿ ಕೇಂದ್ರವಾದ ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ ಟಿಐಐ)ನ ಚೇರ್ಮನ್ ಆಗುವ ಅವಕಾಶ ದಕ್ಕಿತ್ತು.

ಆದರೆ, ಈಗ ವೈಯಕ್ತಿಕ ಕಾರಣಗಳಿಂದ ಈ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಅನುಪಮ್ ಖೇರ್ ಹೇಳಿದ್ದಾರೆ.

ವಾರ್ತಾ ಹಾಗೂ ಪ್ರಸಾರ ಇಲಾಖೆಗೆ ಕಳಿಸಿರುವ ತಮ್ಮ ರಾಜೀನಾಮೆ ಪತ್ರದಲ್ಲಿ ರಾಜೀನಾಮೆ ಕಾರಣವನ್ನು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಟೆಲಿವಿಷನ್ ಶೋನಲ್ಲಿ ಪಾಲ್ಗೊಳ್ಳಬೇಕಿದೆ. ಇದಕ್ಕಾಗಿ 9 ತಿಂಗಳು ಯುಎಸ್ ನಲ್ಲಿರಬೇಕಾಗುತ್ತದೆ. ಹೀಗಾಗಿ, ನಾನು ಈ ಹುದ್ದೆಯನ್ನು ತೊರೆಯುತ್ತಿದ್ದೇನೆ ಎಂದಿದ್ದಾರೆ.

Anupam Kher resigns as FTII chairman, cites busy schedule

ವಾರ್ತಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಅವರು ರಾಜೀನಾಮೆಯನ್ನು ಅಂಗೀಕರಿಸಿ, ಅನುಪಮ್ ಖೇರ್ ಅವರಿಗೆ ಶುಭಹಾರೈಸಿದ್ದಾರೆ.

ದೇಶದ ಪ್ರತಿಷ್ಠಿತ ಕೇಂದ್ರಕ್ಕೆ ಅಕ್ಟೋಬರ್ 11, 2017ರಂದು ಚೇರ್ಮನ್ ಆಗಿ ಖೇರ್ ಅವರು ಅಧಿಕಾರಕ್ಕೆ ಬಂದರು. ಪುಣೆಯ ಈ ಇನ್ಸ್ಟಿಟ್ಯೂಟ್ ನಲ್ಲಿ ಈ ಮುಂಚೆ ಇದ್ದ ಚೇರ್ಮನ್, ಮಹಾಭಾರತ ಧಾರಾವಾಹಿ ಖ್ಯಾತಿಯ ನಟ ಗಜೇಂದ್ರ ಚೌಹಾಣ್ ಅವರು ವಿವಾದದ ಕೇಂದ್ರ ಬಿಂದುವಾಗಿದ್ದರು.

ಅನುಪಮ್ ಖೇರ್ ಅವರು ಸದ್ಯ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೀವನ ಆಧಾರಿತ ಚಿತ್ರ ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ನಲ್ಲಿ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದು, ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+