ಈ ವ್ಯಕ್ತಿ ಧರಿಸಿರುವ ಮಾಸ್ಕ್‌ಗೆ 3 ಲಕ್ಷ: ಇದ್ರಿಂದ ವೈರಸ್ ಬರಲ್ವಾ?
ಪುಣೆ, ಜುಲೈ 4: ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಮಾಸ್ಕ್, ಕೈಗವಸು ಎಲ್ಲವೂ ನಮ್ಮದೊಂದು ಅಂಗವೆಂಬಂತಾಗಿದೆ.
Recommended Video
ಪುಣೆಯ ಈ ವ್ಯಕ್ತಿ ಧರಿಸಿರುವ ಮಾಸ್ಕ್‌ಗೆ ಬರೋಬ್ಬರಿ ಮೂರು ಲಕ್ಷ ರೂ, ಈ ಮಾಸ್ಕ್ ಧರಿಸಿದರೆ ಕೊರೊನಾ ಸೋಂಕು ಬರಲ್ವಾ?, ಅಂಥ ವಿಶೇಷತೆ ಈ ಮಾಸ್ಕ್‌ನಲ್ಲಿ ಏನಿದೆ ಎಂದು ನೀವು ಕೇಳಬಹುದು.
ಇದನ್ನು ಧರಿಸಿದರೆ ಕೊರೊನಾ ಬರುವುದಿಲ್ಲ ಎಂದೇನಿಲ್ಲ, ಈ ಮಾಸ್ಕ್‌ನ್ನು ಚಿನ್ನದಿಂದ ತಯಾರಿಸಿಲಾಗಿದೆ. ಇದಕ್ಕೆ ಬರೋಬ್ಬರು 2.98 ಲಕ್ಷ ರೂ ವೆಚ್ಚವಾಗಿದೆ. ಈಮಾಸ್ಕ್‌ನಲ್ಲಿ ಚಿಕ್ಕಚಿಕ್ಕ ರಂಧ್ರಗಳಿದ್ದು, ಉಸಿರಾಟಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

ಈ ಮಾಸ್ಕ್ ಮಾಡಿಸಿಕೊಂಡವರು ಪುಣೆ ಜಿಲ್ಲೆಯ ಪಿಂಪ್ರಿ ಛಿಂಚ್ವಾಡದಲ್ಲಿರುವ ಶಂಕರ್ ಕುರಡೆ. ಅವರಿಗೆ ಚಿನ್ನದ ಆಭರಣಗಳನ್ನು ಧರಿಸುವುದಂದರೆ ಪ್ರೀತಿ. ಅವರ ಕೈಬೆರಳುಗಳು, ಕುತ್ತಿಗೆಯಲ್ಲಿ ಸಾಕಷ್ಟು ಆಭರಣಗಳನ್ನು ಧರಿಸಿರುತ್ತಾರೆ.
ಕೊಲ್ಹಾಪುರದಲ್ಲಿ ವ್ಯಕ್ತಿಯೊಬ್ಬರು ಬೆಳ್ಳಿಯ ಮಾಸ್ಕ್ ಧರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ನೋಡಿ ನಾನೂ ಯಾಕೆ ಚಿನ್ನದ ಮಾಸ್ಕ್ ಮಾಡಿಸಿಕೊಳ್ಳಬಾರದು ಎಂದು ಆಲೋಚಿಸಿದೆ ಬಳಿಕ ನಿರ್ಧರಿಸಿದೆ.
ಮನೆಯಲ್ಲಿ ಕೂಡ ಎಲ್ಲರಿಗೂ ಚಿನ್ನವೆಂದರೆ ಇಷ್ಟ ಅವರೂ ಕೂಡ ತಮಗೆ ಬಂಗಾರದ ಮಾಸ್ಕ್ ಮಾಡಿಸಿಕೊಡಿ ಎಂದು ಬೇಡಿಕೆ ಇಟ್ಟಿರುವುದಾಗಿ ತಿಳಿಸಿದ್ದಾರೆ.












Click it and Unblock the Notifications