ವಿಡಿಯೋ: ಬಾರ್ ಗರ್ಲ್‌ನೊಂದಿಗೆ ನೃತ್ಯ ಮಾಡಿದ ಜೆಡಿಯು ಶಾಸಕ ಗೋಪಾಲ್ ಮಂಡಲ್
ಭಾಗಲ್ಪುರ್ ಮೇ 16: ಜೆಡಿಯು ಶಾಸಕ ಗೋಪಾಲ್ ಮಂಡಲ್ ಅವರು ನರ್ತಕಿಯೊಂದಿಗೆ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಅವರು ಭಾರೀ ಸುದ್ದಿಯಲ್ಲಿದ್ದಾರೆ. ಮಂಡಲ್ ಬಾರ್ ಗರ್ಲ್‌ನೊಂದಿಗೆ ಭೋಜ್‌ಪುರಿ ಹಾಡಿಗೆ ನೃತ್ಯ ಮಾಡಿದ್ದು ಇದನ್ನು ಸಬೂರ್‌ನ ಫತೇಪುರ್ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮದುವೆಯ ಆರತಕ್ಷತೆ ಕಾರ್ಯಕ್ರಮಕ್ಕೆ ಗೋಪಾಲ್ ಮಂಡಲ್ ಆಗಮಿಸಿದ್ದರು. ಅಲ್ಲಿ ಈ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಬಾರ್ ಗರ್ಲ್ಸ್ ತಮ್ಮದೇ ಶೈಲಿಯಲ್ಲಿ ನೃತ್ಯ ಮಾಡುತ್ತಿರುವಾಗ ಶಾಸಕರು ತಮ್ಮ ಸಾಥ್ ನೀಡಿದ್ದಾರೆ. ತಾವು ಕೂಡ ಸ್ಟೆಪ್ಸ್ ಹಾಕಿದ್ದಾರೆ.
ವರದಿಗಳ ಪ್ರಕಾರ, ಶಾಸಕರು ಬಾರ್-ಗರ್ಲ್ ಕೈಗಳನ್ನು ಹಿಡಿದು ಅವರಿಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ನೃತ್ಯ ಮಾಡಲು ಪ್ರಾರಂಭಿಸಿದರು. ಅವರ ವಿಚಿತ್ರ ಶೈಲಿಯನ್ನು ಕಂಡ ಗೋಪಾಲ್ ಮಂಡಲ್ ನಗುಮುಖದಿಂದ ನೃತ್ಯ ಮಾಡಿದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಶಾಸಕರು ಬಾರ್ ಗರ್ಲ್‌ಗಳೊಂದಿಗೆ 'ದಿಲ್ಬರ್-ದಿಲ್ಬರ್' ಮತ್ತು 'ಬುಲೆಟ್ ಪರ್ ಜೀಜಾ' ಹಾಡುಗಳಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಮತ್ತೊಂದು ವೈರಲ್ ವೀಡಿಯೊದಲ್ಲಿ, ಅವರು ಬಾರ್ ಬಾಲಾಗೆ ಹಣವನ್ನು ಎಸೆಯುತ್ತಿದ್ದಾರೆ.
जदयू विधायक गोपाल मंडल का मिजाज बिहार के एक विवाह समारोह में रंगीन हो गया. उन्होंने वहां डांस कर रहीं भोजपुरी बार बालाओं के साथ ठुमके लगाना शुरू कर दिया. pic.twitter.com/vYmk91E7ly
— Ganpat Sahu (@GanapatGautam) May 15, 2022
ಗೋಪಾಲ್ ಮಂಡಲ್ ಮದುವೆಯಲ್ಲಿ ಡ್ಯಾನ್ಸ್ ಮಾಡಿದ್ದು ಮಾತ್ರವಲ್ಲದೆ, ಕೈಯಲ್ಲಿ ಮೈಕ್ ಹಿಡಿದು ಕೆಲವು ಕುತೂಹಲಕಾರಿ ರಾಜಕೀಯ ಕಥೆಗಳನ್ನೂ ಹೇಳಿದ್ದಾರೆ. ಈ ಹಿಂದೆ ನಮ್ಮ ಮುಖ್ಯಮಂತ್ರಿ 'ನಿತೀಶ್ ಕುಮಾರ್' ಅವರು ಯಾಕೆ ಡ್ಯಾನ್ಸ್ ಮಾಡುತ್ತಿದ್ದೀರಿ ಎಂದು ಕೇಳಿದ್ದರು ಎಂದು ಹೇಳಿದರು. ಹಾಗಾಗಿ ನಾನು ಹೇಳಿದೆ, ಸಂಗೀತ ಪ್ಲೇ ಆಗುವಾಗ, ನಾನು ನಿಯಂತ್ರಿಸಲಾಗದೆ ನಡುಗಲು ಪ್ರಾರಂಭಿಸುತ್ತೇನೆ. ಕಲಾವಿದನ ನೃತ್ಯವನ್ನು ಯಾರೂ ತಡೆಯಲು ಸಾಧ್ಯವಿಲ್ಲ.

ಮಂಡಲ್ ಯಾವುದೇ ಮದುವೆ ಅಥವಾ ಸಮಾರಂಭದಲ್ಲಿ ಮೊದಲ ಬಾರಿಗೆ ನೃತ್ಯ ಮಾಡಿಲ್ಲ, ಅವರು ಈಗಾಗಲೇ ತಮ್ಮ ಈ ಶೈಲಿಯನ್ನು ಪರಿಚಯಿಸಿದ್ದಾರೆ.












Click it and Unblock the Notifications