ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರ್ಸರಿಯ ಇಂಗ್ಲಿಷ್ ಪದ್ಯ ಬಳಸಿ ಮೋದಿ ಸರಕಾರಕ್ಕೆ ಆರ್ ಜೆಡಿ ಟಾಂಗ್

|
Google Oneindia Kannada News

Recommended Video

ನರ್ಸರಿ ಮಕ್ಕಳಿಗೆ ಬಂತು ಹೊಸ ಪದ್ಯ..! | Oneindia kannada

ಪಾಟ್ನಾ(ಬಿಹಾರ), ಮೇ 8: ಲಾಲೂ ಪ್ರಸಾದ್ ಯಾದವ್ ರ ಮಗ ತೇಜಸ್ವಿ ಮುನ್ನಡೆಸುತ್ತಿರುವ ರಾಷ್ಟ್ರೀಯ ಜನತಾ ದಳವು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಕ್ಕಾಪಟ್ಟೆ ಕಾಲೆಳೆದಿದೆ. ಈ ದೇಶದ ನರ್ಸರಿ ಓದುವ ಬಹಳಷ್ಟು ಮಕ್ಕಳಿಗೆ ಗೊತ್ತಿರುವ ಇಂಗ್ಲಿಷ್ ಪದ್ಯವೊಂದರ ಮೂಲಕ ಗೇಲಿ ಮಾಡಲಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

"ಭವಿಷ್ಯದಲ್ಲಿ, ಮೋದಿಯ ಭಕ್ತರಾಗಿರುವವರ ಮಕ್ಕಳು ಇದೇ ಪದ್ಯವನ್ನು ಕಲಿಯಬಹುದು.

ಮೋದಿ ಮೋದಿ ಯೆಸ್ ಪಾಪ

ಎನಿ ಡೆವಲಪ್ ಮೆಂಟ್?

ನೋ ಪಾಪ

ಫಾರ್ಮರ್ ಹ್ಯಾಪಿ?

ನೋ ಪಾಪ

ವುಮನ್ ಸೇಫ್?

ನೋ ಪಾಪ

10 ಕ್ರೋರ್ ಜಾಬ್?

ನೋ ಪಾಪ

15 ಲ್ಯಾಕ್ಸ್??

ನೋ ಪಾಪ

ಓನ್ಲಿ ಜುಮ್ಲಾ?

ಹ್ಹ ಹ್ಹ ಹ್ಹ"

- ಹೀಗೆ ಆರ್ ಜೆಡಿ ಟ್ವೀಟ್ ಮಾಡಿದೆ. ಅಭಿವೃದ್ಧಿ ಆಗಿಲ್ಲ, ರೈತರು ಖುಷಿಯಾಗಿಲ್ಲ, ಮಹಿಳೆಯರು ಸುರಕ್ಷಿತವಾಗಿಲ್ಲ, ಹತ್ತು ಕೋಟಿ ಉದ್ಯೋಗ ಇಲ್ಲ, ಹದಿನೈದು ಲಕ್ಷ ಇಲ್ಲ, ಬರೀ ಸುಳ್ಳು ಎಂದು ಹೀಗಳೆಯಲಾಗಿದೆ.

RJD uses nursery English poem to criticise Modi government

ಕಳೆದ ವಾರ ಮಾತನಾಡಿದ್ದ ತೇಜಸ್ವಿ ಯಾದವ್, ಐದು ವರ್ಷದಲ್ಲಿ ಏನು ಕೆಲಸ ಮಾಡಿದ್ದೀರಿ? ಭರವಸೆಯಂತೆ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ನೀಡಿದರಾ? ರೈತರ ಆದಾಯ ದ್ವಿಗುಣ ಆಯಿತಾ? ಯುವ ಜನಕ್ಕೆ ಕೆಲಸ ಸಿಕ್ಕಿತಾ? ಹಣದುಬ್ಬರ ಇಳಿಕೆಯಾಯಿತಾ? ಇದು ಮೋದಿ ಅವರ ವಿಭಜನೆ ರಾಜಕಾರಣ. ಬಿಹಾರದ ಜನ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಾರೆ ಎಂದಿದ್ದರು.

ಬಿಹಾರದಲ್ಲಿ ಒಟ್ಟು ನಲವತ್ತು ಲೋಕಸಭಾ ಕ್ಷೇತ್ರಗಳಿವೆ. ಅಲ್ಲಿ ಏಳು ಹಂತದಲ್ಲೂ ಮತದಾನ ನಡೆಯಲಿದ್ದು, ಮೇ ಇಪ್ಪತ್ಮೂರಕ್ಕೆ ಫಲಿತಾಂಶ ಬರಲಿದೆ.

English summary
Lok Sabha Elections 2019: Lalu Prasad Yadav party RJD uses nursery English poem in the twitter account to criticise Modi government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X