ಮುನ್ನಡೆ, ಶೇಕಡವಾರು ಮತ ಗಳಿಕೆ: ಬಿಜೆಪಿ ಹಿಂದಿಕ್ಕಿದ ಆರ್‌ಜೆಡಿ
ಪಾಟ್ನಾ, ನ.10: ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿಗಾಗಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿದ್ದು, ನವೆಂಬರ್ 10ರಂದು ಅಂತಿಮ ಫಲಿತಾಂಶ ಹೊರಬರಲಿದೆ. ಸಂಜೆ ವೇಳೆಗೆ ಮತ ಎಣಿಕೆಯಂತೆ ಆರ್ ಜೆ ಡಿ-ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿರುವುದು ಜೆಡಿಯು -ಬಿಜೆಪಿಗೆ ಆಘಾತ ತಂದಿದೆ.
Recommended Video
ಬಿಹಾರದ 38 ಜಿಲ್ಲೆಗಳಲ್ಲಿ 55 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ. 3755 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಚುನಾವಣಾ ಆಯೋಗದ ಅಧಿಕೃತ ಮಾಹಿತಿಯಂತೆ ಟ್ರೆಂಡ್ ನಂತೆ ಮುನ್ನಡೆ
ಸಮಯ 7.15; 243 ಸ್ಥಾನ, 122 ಮ್ಯಾಜಿಕ್ ನಂಬರ್
ಎನ್ಡಿಎ: 120
ಮಹಾಘಟಬಂಧನ್: 115
ಶೇಕಡಾವಾರು ಮತಗಳಿಕೆ
ಎನ್ಡಿಎ: 37.14%
ಮಹಾಘಟಬಂಧನ್: 37.04%
ಪಕ್ಷವಾರು ಮುನ್ನಡೆ
ಆರ್‌ಜೆಡಿ: 77, 23.44%
ಬಿಜೆಪಿ: 73, 19.41%
ಕಾಂಗ್ರೆಸ್: 20, 9.20%
ಜೆಡಿಯು: 39, 15.18%
ಸಿಪಿಐ(ಎಂಎಲ್): 12
ಸಿಪಿಐ: 3
ಸಿಪಿಐ(ಎಂ): 3
ಬಿಎಸ್ಪಿ:1
ಎಐಎಂಐಎಂ: 5
ವಿಐಪಿ: 5
ಎಚ್ಎಎಂ(ಎಸ್): 3
ಫಲಿತಾಂಶ; 33 ಘೋಷಿತ ಗೆಲುವು
ಬಿಜೆಪಿ: 11,
ಆರ್‌ಜೆಡಿ: 8
ಜೆಡಿಯು: 6
ಕಾಂಗ್ರೆಸ್: 2
ಎಐಎಂಐಎಂ: 1
ಸಿಪಿಐ(ಎಂಎಲ್): 1
ಸಿಪಿಐ: 1
ಸಿಪಿಐ(ಎಂ): 1
ವಿಐಪಿ: 2

ಪ್ರತಿಕ್ಷಣ ಟ್ರೆಂಡ್ ಬದಲಾಗುತ್ತಿದ್ದು, ರೋಚಕ ಕ್ಲೈಮ್ಯಾಕ್ಸ್ ನಂಥ ಸಾಗುತ್ತಿದೆ. ಆದರೆ, ಎನ್ಡಿಎಗೆ ವಿಐಪಿ ಬಲ ಇದ್ದರೆ, ಮಹಾಘಟಬಂಧನ್ ಅವರಿಗೆ ಎಡಪಕ್ಷಗಳ ಬಲ ಸಿಕ್ಕಿದೆ.
ಎಕ್ಸಿಟ್ ಪೋಲ್ ಗಳ ಸಮೀಕ್ಷೆಗಳ ಸಮೀಕ್ಷೆಯಲ್ಲಿ ತೇಜಸ್ವಿ ಬಣಕ್ಕೆ ಗೆಲುವು ಸಾಧಿಸಲಿದ್ದು, ಆರ್ ಜೆ ಡಿ-ಕಾಂಗ್ರೆಸ್ ಬಣ 133 ಸ್ಥಾನ ಪಡೆಯಲಿದ್ದು, ಎನ್ಡಿಎ 100 ಸ್ಥಾನ ಹಾಗೂ ಇತರೆ 11 ಪಡೆಯಲಿದೆ ಎಂದು ಫಲಿತಾಂಶ ಬಂದಿದೆ.
2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ ಗಳಿಸಿದ್ದವು. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.












Click it and Unblock the Notifications