ಮತದಾರರ ಪಟ್ಟಿಯಲ್ಲಿ ತೇಜಸ್ವಿ ಯಾದವ್ ಫೋಟೊ ಮಿಸ್ಸಿಂಗ್
ನವದೆಹಲಿ, ಮೇ 19: ಮತದಾರರ ಪಟ್ಟಿಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಫೋಟೊ ನಾಪತ್ತೆಯಾಗಿರುವುದು ಶಾಕ್ ತಂದಿದೆ.
ಬಿಹಾರದ ಪಾಟ್ನಾದಲ್ಲಿ ಇಂದು ಕೊನೆಯ ಹಂತದ ಮತದಾನ ನಡೆಯುತ್ತಿದ್ದು, ಮತಪಟ್ಟಿಯಲ್ಲಿ ತಮ್ಮ ಭಾವಚಿತ್ರವಿಲ್ಲದಿರುವುದು ತೇಜಸ್ವಿಯವರೆಗೆ ತೀವ್ರ ಅಸಮಾಧಾನ ಉಂಟು ಮಾಡಿತ್ತು.
ಆರ್ಜಿಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರ ಫೋಟೋ ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ. ಅದಷ್ಟಲ್ಲದೆ ಅವರ ಹೆಸರಿರುವಲ್ಲಿ ಬೇರೆಯೊಬ್ಬರ ಫೋಟೋ ಇದೆ. ಜತೆಗೆ ಸ್ಥಳೀಯ ಚುನಾವಣಾ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಸಮಾಧಾನಗೊಂಡಿದ್ದಾರೆ.

ಬಿಹಾರದ ಒಟ್ಟು ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಒಟ್ಟು 15,811 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಎಲ್ಲ ಕೇಂದ್ರಗಳಲ್ಲೂ ಭದ್ರತಾ ಪಡೆಗಳ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಮತದಾನ ಆರಂಭವಾದ ಬಳಿಕ ಈ ತಪ್ಪು ಬೆಳಕಿಗೆ ಬಂದಿದ್ದು, ತೇಜಸ್ವಿಯವರು ಯಾವುದೇ ಗುರುತಿನ ಚೀಟಿ ತೆಗೆದುಕೊಂಡು ಬಂದರೂ ಮತ ಹಾಕಲು ಅನುವು ಮಾಡಿಕೊಡುವುದಾಗಿ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ ಎನ್ನುವ ಮಾಹಿತಿ ಲಬ್ಯವಾಗಿದೆ.











Click it and Unblock the Notifications