ಕ್ಯಾಂಟೀನ್ ಆಗಿ ಬದಲಾದ ನಿರುಪಯುಕ್ತ ರೈಲು ಬೋಗಿ
ಪಾಟ್ನಾ, ಫೆಬ್ರವರಿ 05 : ಅಲ್ಲೊಂದು ರೈಲು ಬೋಗಿ ಯಾವುದೇ ಉಪಯೋಗವಿಲ್ಲದೆ ನಿಂತಿತ್ತು. ರೈಲ್ವೆ ಕೋಚ್ ಫ್ಯಾಕ್ಟರಿ ಸಮೀಪದಲ್ಲಿ ಒಳ್ಳೆಯ ಹೋಟೆಲ್ ಇಲ್ಲ ಎಂಬ ದೂರುಗಳು ಇತ್ತು. ಈಗ ರೈಲು ಬೋಗಿಯಲ್ಲಿಯೇ ಕ್ಯಾಂಟೀನ್ ತಲೆ ಎತ್ತಿ ನಿಂತಿದೆ.
ಹೌದು, ಇದು ಬಿಹಾರದ ದಾನ್ಪುರ್ ಕೋಚಿಂಗ್ ಡಿಪೋದ ಕಥೆ. ನಿರುಪಯುಕ್ತವಾಗಿ ನಿಂತಿದ್ದ ರೈಲು ಬೋಗಿಯನ್ನು ನವೀಕರಣ ಮಾಡಿ ಕ್ಯಾಂಟೀನ್ ಆಗಿ ಬದಲಾವಣೆ ಮಾಡಲಾಗಿದೆ. ಉದ್ಯೋಗಿಗಳು ಬೋಗಿಯಲ್ಲಿ ಕುಳಿತು ಟೀ, ಉಪಹಾರ ಸವಿಯುತ್ತಿದ್ದಾರೆ.
ಕೋಚಿಂಗ್ ಡಿಪೋದ ಅಧಿಕಾರಿ ಅನಿಲ್ ಕುಮಾರ್ ಅವರು ಆಲೋಚನೆಯ ಫಲ ಉದ್ಯೋಗಿಗಳಿಗೆ ಕ್ಯಾಂಟೀನ್ ಸಿಕ್ಕಿದೆ. ನಿರುಪಯುಕ್ತವಾಗಿ ನಿಂತಿದ್ದ ರೈಲ್ವೆ ಬೋಗಿ ಸುಂದರವಾದ ಹೋಟೆಲ್ ಆಗಿ ಬದಲಾಗಿದೆ. ಜನರು ಸಹ ರೈಲು ಬೋಗಿಯ ಕ್ಯಾಂಟೀನ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

ಕೋಚಿಂಗ್ ಡಿಪೋದ ಸಮೀಪ ಯಾವುದೇ ಒಳ್ಳೆಯ ಹೋಟೆಲ್ ಇರಲಿಲ್ಲ. ಉದ್ಯೋಗಿಗಳು ಈ ಬಗ್ಗೆ ದೂರು ನೀಡುತ್ತಿದ್ದರು. ಆದ್ದರಿಂದ, ರೈಲ್ವೆ ಕೋಚ್ ಅನ್ನು ಹೋಟೆಲ್ ಆಗಿ ಬದಲಾಯಿಸುವ ತೀರ್ಮಾನ ಕೈಗೊಳ್ಳಲಾಯಿತು.

ಪ್ರಾಯೋಗಿಕವಾಗಿ ರೈಲು ಬೋಗಿಯಲ್ಲಿ ಕ್ಯಾಂಟೀನ್ ನಡೆಸಲಾಗುತ್ತಿದೆ. ಕೋಚ್ ಫ್ಯಾಕ್ಟರಿ ಉದ್ಯೋಗಿಗಳು ಮತ್ತು ಜನರು ಬೋಗಿ ಕ್ಯಾಂಟೀನ್‌ಗೆ ಭೇಟಿ ನೀಡಿ, ಉಪಹಾರ, ಟೀ ಸವಿಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications