ಇದೇ ಮೊದಲ ಬಾರಿಗೆ, ಅಕ್ಕ-ಪಕ್ಕ ಕೂರಲಿದ್ದಾರೆ ಪ್ರಧಾನಿ ಮೋದಿ-ನಿತೀಶ್!
ಪಾಟ್ನಾ, ಜನವರಿ 21: ಎನ್ ಡಿಎ ಜೊತೆ ಮೈತ್ರಿ ಮುರಿದುಕೊಂಡಿದ್ದ ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ನಂತರ ಮತ್ತೆ ಬಿಜೆಪಿಯೊಂದಿಗೇ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದು ಹಳೇ ವಿಷಯ.
ಆದರೆ 2013 ರಲ್ಲಿ ಎನ್ ಡಿಎ ಜೊತೆ ಮುನಿಸಿಕೊಂಡು ಹೊರಬಂದ ಮೇಲೆ ನಿತೀಶ್ ಕುಮಾರ ಮತ್ತು ನರೇಂದ್ರ ಮೋದಿ ಒಮ್ಮೆಯೂ ವೇದಿಕೆ ಹಂಚಿಕೊಂಡಿರಲಿಲ್ಲ. ಮೋದಿ ಪ್ರಧಾನಿಯಾದ ಮೇಲೆ ಇದೇ ಮೊದಲ ಬಾರಿಗೆ ಉಭಯ ನಾಯಕರೂ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಲೋಕಸಭಾ ಚುನಾವಣೆಯ ಪ್ರಚಾರ ಸಮಾವೇಶದ ನಿಮಿತ್ತ ಫೆಬ್ರವರಿ 24 ಅತವಾ ಮಾರ್ಚ್ 3 ರಂದು ಈ ಇಬ್ಬರು ದಿಗ್ಗಜರೂ ಭಾಗವಹಿಸಲಿದ್ದು, ಎಲ್ ಜೆಪಿ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಸಹ ಈ ಸಮಾವೇಶದ ಭಾಗವಾಗಲಿದ್ದಾರೆ.

ಬಿಹಾರದಲ್ಲಿರುವ 40 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 17, ಜನತಾ ದಳ (ಯುನೈಟೆಡ್) 17, ಲೋಕ ಜನಶಕ್ತಿ ಪಾರ್ಟಿ 6 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.












Click it and Unblock the Notifications