ನಿತೀಶ್ ಯಾವುದೇ ಕಾರಣಕ್ಕೂ ಸಿಎಂ ಆಗಲ್ಲ ಎಂದ ಚಿರಾಗ್ ಪಾಸ್ವಾನ್

ಪಾಟ್ನಾ, ನವೆಂಬರ್.07: "ಬಿಹಾರ ಮೊದಲು, ಬಿಹಾರಿ ಮೊದಲು" ಎಂಬ ನಮ್ಮ ಧ್ಯೇಯಘೋಷವು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಹಾರದ ಮೂರನೇ ಹಂತದ 78 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಹಿನ್ನೆಲೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಎಲ್ ಜೆಪಿಯು ಪ್ರಚಾರ ಹಂತದಲ್ಲಿ ಜನರನ್ನು ಸಂಪರ್ಕಿಸುವಲ್ಲಿ ಸಫಲವಾಗಿದೆ ಎಂದು ಭಾವಿಸುತ್ತೇವೆ ಎಂದರು.

ಒಂದು ವಿಚಾರವಂತೂ ಬಹುತೇಕ ಸ್ಪಷ್ಟವಾಗಿದೆ. ನಿತೀಶ್ ಕುಮಾರ್ ಮಾತ್ರ ಯಾವುದೇ ಕಾರಣಕ್ಕೂ ಮತ್ತೊಮ್ಮೆ ಬಿಹಾರದ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಚಿರಾಗ್ ಪಾಸ್ವಾನ್ ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಎರಡು ಹಂತಗಳಲ್ಲಿ ವಿಧಾನಸಭೆಗೆ ಚುನಾವಣಾ ಮತದಾನ ಪೂರ್ಣಗೊಂಡಿದೆ. ಎರಡೂ ಹಂತಗಳಲ್ಲಿ ಶೇ.50ಕ್ಕಿಂತ ಹೆಚ್ಚು ಪ್ರಮಾಣದ ಮತದಾನ ನಡೆದಿದೆ. ನವೆಂಬರ್.10ರಂದು 243 ವಿಧಾನಸಭಾ ಕ್ಷೇತ್ರಗಳ ಫಲಿತಾಂಶವು ಹೊರ ಬೀಳಲಿದೆ.

 Nitish Kumar Ji Will Never Become The CM: Chirag Paswan

ಮೂರನೇ ಹಂತದಲ್ಲಿ 78 ಕ್ಷೇತ್ರಕ್ಕೆ ಮತದಾನ:

ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರನೇ ಹಾಗೂ ಅಂತಿಮ ಹಂತದಲ್ಲಿ 16 ಜಿಲ್ಲೆಗಳ 78 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಬಾರಿ 2.35 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೂರನೇ ಹಂತದ ಕಣದಲ್ಲಿ 382 ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ 1204 ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಪೈಕಿ 1094 ಪುರುಷ ಅಭ್ಯರ್ಥಿಗಳಾಗಿದ್ದರೆ, 110 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3ನೇ ಹಂತದಲ್ಲಿ ಒಟ್ಟು 2,35 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಈ ಪೈಕಿ 1.23 ಕೋಟಿ ಪುರುಷ ಹಾಗೂ 1.12ರಷ್ಟು ಮಹಿಳಾ ಮತದಾರರಿದ್ದಾರೆ.

ಯಾವ ಪಕ್ಷದ ಎಷ್ಟು ಅಭ್ಯರ್ಥಿಗಳು?:

ಬಿಹಾರದಲ್ಲಿ ಅಂತಿಮ ಹಂತದ ಚುನಾವಣಾ ಕಣದಲ್ಲಿ ರಾಷ್ಟ್ರೀಯ ಜನತಾ ದಳದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. 78 ಕ್ಷೇತ್ರಗಳ ಪೈಕಿ ಆರ್ ಜೆಡಿ 46 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, 42 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಲೋಕಜನಶಕ್ತಿ ಪಕ್ಷವು 2ನೇ ಸ್ಥಾನದಲ್ಲಿದೆ. ಜೆಡಿಯು 37, ಬಿಜೆಪಿ 35, ಎನ್ ಸಿಪಿ 31, ಕಾಂಗ್ರೆಸ್ 25, ರಾಷ್ಟ್ರೀಯ ಲೋಕ ಸಮತಾ ಪಕ್ಷ 23, ಬಹುಜನ ಸಮಾಜವಾದಿ ಪಕ್ಷ 19 ಹಾಗೂ ಸಿಪಿಐ ಪಕ್ಷದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+