ಬಿಹಾರ: ಮೋದಿ, ನಿತೀಶ್ ಅಲೆಗೆ ಬಿಲ ಸೇರಿಕೊಂಡ ಕಾಂಗ್ರೆಸ್ ಮೈತ್ರಿಕೂಟ
ಪಾಟ್ನಾ, ಮೇ 23: ರಾಜ್ಯದಲ್ಲಿ ನರೇಂದ್ರ ಮೋದಿ - ನಿತೀಶ್ ಕುಮಾರ್ ಜೋಡಿ ಅಭೂತಪೂರ್ವ ಜಯದತ್ತ ದಾಪುಗಾಲು ಹಾಕುತ್ತಿದ್ದು, ಇದುವರೆಗಿನ ಟ್ರೆಂಡಿಂಗ್ ಪ್ರಕಾರ, ಎನ್ಡಿಎ ಮೈತ್ರಿಕೂಟ 38 ಸೀಟುಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ.
ಕಾಂಗ್ರೆಸ್ ಮೈತ್ರಿಕೂಟ ಬರೀ ಎರಡು ಸೀಟಿನಲ್ಲಿ ಮುನ್ನಡೆಯನ್ನು ಸಾಧಿಸಿದ್ದು, ಹಲವು ಮುಖಂಡರು ಎನ್ಡಿಎ ಅಭ್ಯರ್ಥಿ ವಿರುದ್ದ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ.
ಒಟ್ಟು ನಲವತ್ತು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ ಹದಿನೇಳು ಕ್ಷೇತ್ರಗಳಲ್ಲಿ ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿ ಆರು ಸೀಟುಗಳಲ್ಲಿ ಸ್ಪರ್ಧಿಸಿದ್ದವು.

ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಪುತ್ರಿ ಮಿಸಾ ಭಾರತಿ ಪಾಟಲಿಪುತ್ರ, ಕನ್ಹಯ್ಯ ಕುಮಾರ್ ಬೇಗುಸರಾಯಿ ಕ್ಷೇತ್ರದಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ.
ಇನ್ನು ಗಿರಿರಾಜ್ ಸಿಂಗ್, ರವಿಶಂಕರ್ ಪ್ರಸಾದ್ ಪಾಟ್ನಾ ಸಾಹೇಬ್ ಕ್ಷೇತ್ರದಲ್ಲಿ ಶತ್ರುಘ್ನ ಸಿನ್ಹಾ ವಿರುದ್ದ ಮುನ್ನಡೆಯನ್ನು ಸಾಧಿಸಿದ್ದಾರೆ.












Click it and Unblock the Notifications