ಲಂಡನ್ ನಿವಾಸಿ ಬಿಹಾರದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಾಗಿ ಘೋಷಣೆ

ಪಾಟ್ನಾ, ಮಾರ್ಚ್ 10: ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಅವರಿಗೆ ಈ ಬಾರಿ ಯುವತಿಯೊಬ್ಬಳು ಸವಾಲು ಹಾಕಿದ್ದಾರೆ. ಲಂಡನ್ ನಿವಾಸಿಯಾಗಿರುವ ಪುಷ್ಪಂ ಪ್ರಿಯಂ ಚೌಧರಿ ಈಗ ಟಾಕ್ ಆಫ್ ದಿ ಟೌನ್ ಎನಿಸಿಕೊಂಡಿದ್ದಾರೆ. ಜೆಡಿಯು ನಾಯಕ ಬಿನೋದ್​ ಚೌಧರಿ ಪುತ್ರಿ ಪುಷ್ಪಂ ಪ್ರಿಯಾ ತನ್ನದೇ ಹೊಸ ಪಕ್ಷ ಕಟ್ಟಿಕೊಂಡು, ಬಿಹಾರದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯನ್ನು ತನ್ನನ್ನು ತಾನು ಘೋಷಿಸಿಕೊಂಡಿದ್ದಾರೆ.

2020ರಲ್ಲಿ ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೆ ನಡೆಯಲಿದ್ದು, ಇದಕ್ಕಾಗಿ ಪ್ರಚಾರ ಆರಂಭಿಸಿರುವ ಪುಷ್ಪಂ ಪ್ರಿಯಾ, ತಾನು ಸಿಎಂ ಅಭ್ಯರ್ಥಿ ಎಂದು ದೊಡ್ಡ ಹೋರ್ಡಿಂಗ್ ಹಾಕಿಸಿದ್ದಾರೆ. ಈ ಮೂಲಕ ಸಿಎಂ ನಿತೀಶ್ ಕುಮಾರ್​, ಪ್ರತಿಪಕ್ಷ ಆರ್​ಜೆಡಿಗೆ ಸವಾಲು ಹಾಕಿದ್ದಾರೆ.

JDU leader daughter CM candidate for Bihar 2020

ಪುಷ್ಪಂ ಪ್ರಿಯಂ ತಮ್ಮ ಟ್ವಿಟರ್​ ಖಾತೆ ಮೂಲಕ ಹೊಸ ಪಕ್ಷ ರಚನೆ ವಿಷಯವನ್ನ ಟ್ವೀಟ್​ ಮಾಡಿ, ಬಿಹಾರಕ್ಕೆ ವೇಗ, ರೆಕ್ಕೆ, ಬದಲಾವಣೆ ಅಗತ್ಯ ಇದೆ. ಬಿಹಾರಕ್ಕೆ ಅತ್ಯುತ್ತಮವಾದದ್ದು ಬೇಕಾಗಿದೆ ಹಾಗೂ ಅದಕ್ಕೆ ಅದು ಅರ್ಹವೂ ಆಗಿದೆ. ಹೀಗಾಗಿ ಅಸಂಬದ್ಧ ರಾಜಕೀಯ ತಿರಸ್ಕರಿಸಿ, ಪ್ಲುರಲ್ಸ್(Plurals)​​​ ಪಕ್ಷಕ್ಕೆ ಸೇರಿ, ಸ್ವಚ್ಛಂದವಾಗಿ ಮುನ್ನಡೆಯಿರಿ.. ಎಂದು ಬರೆದುಕೊಂಡಿದ್ದಾರೆ. ಇದೇ ವಾಕ್ಯಗಳುಳ್ಳ ದೊಡ್ಡ ಹೋರ್ಡಿಂಗ್ ಪಾಟ್ನಾದಲ್ಲಿ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಲಂಡನ್​ ಸ್ಕೂಲ್​ ಆಫ್​ ಎಕಾನಾಮಿಕ್ಸ್​ ಮತ್ತು ರಾಜಕೀಯ ಶಾಸ್ತ್ರ ಅಧ್ಯಯನ ಮಾಡಿರುವ ಪುಷ್ಪಮ್ ಬಗ್ಗೆ ಆಕೆ ತಂದೆ ಕೂಡಾ ಹೆಮ್ಮೆಯಿಂದ ಪ್ರತಿಕ್ರಿಯಿಸಿ, ಆಕೆ ವಿದ್ಯಾವಂತೆ ಸ್ವಂತ ನಿರ್ಧಾರ ಕೈಗೊಳ್ಳಲು ಅರ್ಹರಾಗಿದ್ದಾಳೆ, ಆದರೆ, ಪಕ್ಷದ ಹಿರಿಯ ಮುಖಂಡರಿಗೆ ಸವಾಲು ಹಾಕುವುದನ್ನು ಬೆಂಬಲಿಸಲಾರೆ. ಪಕ್ಷ ಈ ಬಗ್ಗೆ ನಿರ್ಧರಿಸಲಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+