ಬಿಹಾರದ ಬಂಕಾ ಕ್ಷೇತ್ರದಲ್ಲಿ ಶೇ.59.58ರಷ್ಟು ದಾಖಲೆಯ ಮತದಾನ

ಪಾಟ್ನಾ, ಅಕ್ಟೋಬರ್.29: ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ 16 ಜಿಲ್ಲೆಗಳ 71 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಈ ಬಾರಿ ಶೇ.55.69ರಷ್ಟು ಮತದಾನ ನಡೆದಿದ್ದು, ಹೊಸ ದಾಖಲೆಯಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಮಾಹಿತಿ ನೀಡಿದೆ.

ಮೊದಲ ಹಂತದ ಚುನಾವಣೆ ನಡೆದ 16 ಜಿಲ್ಲೆಗಳಲ್ಲೇ ಅತಿಹಚ್ಚು ಮತದಾನವು ಬಂಕಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವುದು ಗೊತ್ತಾಗಿದೆ. ಈ ಬಾರಿ ಬಂಕಾದಲ್ಲಿ ಶೇ.59.58ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

ಗಯಾ ವಿಧಾನಸಭಾ ಕ್ಷೇತ್ರದಲ್ಲಿ ಶೇ.58.21ರಷ್ಟು ಮತದಾನ ನಡೆದಿದ್ದರೆ, ಭಗಲ್ಪುರ್ ನಲ್ಲಿ ಶೇ.57.04ರಷ್ಟು ಮತದಾನವಾಗಿದೆ. ಅರ್ವಾಲಾ ಕ್ಷೇತ್ರದಲ್ಲಿ ಶೇ.55.63ರಷ್ಟು ಮತದಾನ ನಡೆದಿದ್ದರೆ, ಔರಂಗಾಬಾದ್ ನಲ್ಲಿ ಶೇ.55.58ರಷ್ಟು ಮತದಾನ ನಡೆದಿದೆ. ಬಕ್ಸಾರ್ ನಲ್ಲಿ ಶೇ.55.50 ಹಾಗೂ ಜೆಹನಾಬಾದ್ ನಲ್ಲಿ ಶೇ.55.28ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.

 First phase Bihar Election: Record Highest Voting In Banka Assembly Constituency

ಕಳದೆ ಚುನಾವಣೆಗಿಂತ ದಾಖಲೆ ಮತದಾನ:

ಬಿಹಾರದ 71 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶೇ.55.69ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮೊದಲ ಹಂತದಲ್ಲಿ ನಡೆದ ಶೇಕಡಾವಾರು ಮತದಾನವು ಈ ಹಿಂದೆ ನಡೆದ ಎರಡು ಚುನಾವಣೆಗಿಂತಲೂ ಹೆಚ್ಚಾಗಿದೆ. ಕಳೆದ 2015ರಲ್ಲಿ ನಡೆದ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ 54.94ರಷ್ಟು ಮತದಾನ ನಡೆದಿತ್ತು. ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಈ ಕ್ಷೇತ್ರಗಳಲ್ಲಿ ಶೇ.53.54ರಷ್ಟು ಮತದಾನ ನಡೆದಿತ್ತು. ಅಕ್ಟೋಬರ್.28ರಂದು ನಡೆದ 71 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನದ ಶೇಕಡಾವಾರ ಪ್ರಮಾಣವು ಹೊಸ ದಾಖಲೆ ಬರೆದಿದೆ. ಈ ಬಾರಿ ಶೇ.55.69ರಷ್ಟು ಮತದಾನ ನಡೆದಿದೆ ಎಂದು ಭಾರತೀಯ ಚುನಾವಣಾ ಆಯೋಗವು ಮಾಹಿತಿ ನೀಡಿದೆ.

1066 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ:

ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಬುಧವಾರ ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಸಲಾಯಿತು. ಆರ್ ಜೆಡಿಯ 42 ಅಭ್ಯರ್ಥಿಗಳು ಕಣದಲ್ಲಿದ್ದರೆ ಕಾಂಗ್ರೆಸ್ 20 ಕಡೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಅದೃಷ್ಟ ಪರೀಕ್ಷೆಗೆ ಇಳಿಸಿದೆ. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷವು ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಸಿರುವ 35 ಕ್ಷೇತ್ರಗಳೂ ಸೇರಿದಂತೆ ಒಟ್ಟು 41 ಕಡೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಒಟ್ಟು 1066 ಅಭ್ಯರ್ಥಿಗಳ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಿದೆ. ನವೆಂಬರ್.03ರಂದು ಎರಡನೇ ಹಂತ ಮತ್ತು ನವೆಂಬರ್.07ರಂದು ಮೂರನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+