ಬಿಹಾರದಲ್ಲಿ ಬಿಸಿ ಗಾಳಿಗೆ 12 ಮಂದಿ ಬಲಿ

ಪಟ್ನಾ, ಜೂನ್ 16: ಮುಂಗಾರು ಮಳೆ ಪ್ರವೇಶದ ಬಳಿಕವೂ ಬಿಸಿ ಗಾಳಿ ಜನರ ಜೀವವನ್ನು ಹಿಂಡುತ್ತಿದೆ.

ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಬಿಸಿ ಗಾಳಿ ಮುಂದುವರೆದಿದ್ದು, ಜನರ ಜೀವ ಬಲಿ ತೆಗೆದುಕೊಳ್ಳುತ್ತಿದೆ.

ಬಿಹಾರದ ಗಯಾದಲ್ಲಿ ಒಂದೇ ದಿನ 12ಮಂದಿ ಬಿಸಿಗಾಳಿಗೆ ಬಲಿಯಾಗಿದ್ದಾರೆ.ಇನ್ನು ಗಯಾದಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ 25ಕ್ಕೂ ಅಧಿಕ ಬಿಸಿಗಾಳಿಗೆ ತುತ್ತಾಗಿರುವ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

Due to heat stroke 12 people died in Bihar
ಸತ್ತ 12ಜನರಲ್ಲಿ 7 ಮಂದಿ ಗಯಾ, ಇಬ್ಬರು ಔರಂಗಾಬಾದ್, ಛಾತ್ರಾ, ಶೇಖ್‌ಪುರ, ನಾವಡಾದಿಂದ ತಲಾ ಒಬ್ಬರು ಮೃತಪಟ್ಟಿದ್ದಾರೆ. ಪರಿಸ್ಥಿತಿ ನಿರ್ವಹಣೆಗೆ ವಿಶೇಷ ವೈದ್ಯರ ತಂಡವನ್ನು ಬಿಹಾರ ಸರ್ಕಾರ ರಚಿಸಿದ್ದು, ಎಲ್ಲಾ ತುರ್ತು ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ.

ಇದಕ್ಕಾಗಿ 6 ಹಿರಿಯ ವೈದ್ಯರು ಹಾಗೂ 10 ಕಿರಿಯ ವೈದ್ಯರ ತಂಡವನ್ನು ರಚಿಸಲಾಗಿದೆ. ಮೃತರ ಕುಟುಂಬಗಳಿಗೆ ನಾಲ್ಕು ಲಕ್ಷ ಪರಿಹಾರವನ್ನು ಸರ್ಕಾರ ಘೋಷಿಸಿದೆ.
ಮೃತರ ಅಂತ್ಯಕ್ರಿಯೆಗೆ ತಲಾ ಇಪ್ಪತ್ತು ಸಾವಿರ ನೀಡಲು ಕೂಡ ಸರ್ಕಾರ ಘೋಷಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+