ಬಿಹಾರ ನಿಗೂಢ ಜ್ವರ ಮೃತ ಮಕ್ಕಳ ಸಂಖ್ಯೆ 244ಕ್ಕೆ ಏರಿಕೆ
ಮುಜಾಫರ್‌ಪುರ್, ಜೂನ್ 25: ಬಿಹಾರದ ಜನತೆ ಬಳಲುತ್ತಿರುವ ನಿಗೂಢ ಮೆದುಳು ಜ್ವರಕ್ಕೆ ಇದುವರೆಗೆ 244 ಮಕ್ಕಳು ಮೃತಪಟ್ಟಿದ್ದಾರೆ.
ಅಕ್ಯೂಟ್ ಎನ್ಸೆಪಾಲಿಟೀಸ್ ಸಿಂಡ್ರೋಮ್‌ಗೆ ಈ ರೋಗವು ಅತಿ ಹೆಚ್ಚು ಬಿಸಿಲಿನಿಂದ ಕೂಡ ಬರುವಂಥದ್ದಾಗಿದೆ. ಬಿಹಾರದಲ್ಲಿ ಬಿಸಿ ಗಾಳಿಗೆ ಸತ್ತವರ ಸಂಖ್ಯೆ 61ಕ್ಕೇರಿದೆ. ಬಿಸಿಲು ಕೂಡ ಅನೇಕ ರೋಗಗಳನ್ನು ಹೊತ್ತು ತರುತ್ತಿದೆ. ಇದಕ್ಕೆ ಬಿಹಾರಿಗಳು 'ಚಮ್ಕಿ' ಎಂದು ಕರೆಯುತ್ತಾರೆ.
1-10 ವರ್ಷದೊಳಗಿನ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮಳೆಗಾಲ ಆರಂಭವಾಗುವವರೆಗೂ ಈ ರೋಗ ಕಡಿಮೆಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ನಾಲ್ಕು ಲಕ್ಷ ರೂ ಸಹಾಯಧನ ನೀಡುವುದಾಗಿ ಸಚಿವರು ತಿಳಿಸಿದ್ದಾರೆ.

ಮುಜಾಫರ್‌ಪುರದಲ್ಲಿ 131 ಮಂದಿ, ಎಸ್‌ಕೆಎಂಸಿಎಚ್‌ನಲ್ಲಿ 111, ಕೇಜ್ರಿವಾಲ್ ಆಸ್ಪತ್ರೆಯಲ್ಲಿ 20 ಮಕ್ಕಳು ಮೃತಪಟ್ಟಿದ್ದಾರೆ. ಹೆಚ್ಚಿನ ತಾಪಮಾನವೇ ಈ ರೋಗಕ್ಕೆ ಕಾರಣವಾಗಿದೆ. ಹಾಗಾಗಿ ಮುಂಗಾರು ಪ್ರವೇಶವಾಗುವವರೆಗೂ ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸದಿದ್ದರೆ ಒಳಿತು. ಇದೀಗ ಈ ರೋಗ ಛತ್ತೀಸ್‌ಗಢಕ್ಕೂ ಕಾಲಿಟ್ಟಿದೆ. ಶುಕ್ರವಾರ ಛತ್ತೀಸ್‌ಗಢದಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಒಂದು ಮಗುವಿನ ಸ್ಥಿತಿ ಗಂಭೀರವಾಗಿದೆ.
ಛತ್ತೀಸ್‌ಗಢದ ಜಗ್ದಲ್‌ಪುರ ಜಿಲ್ಲೆಯಲ್ಲಿ ಮೆದುಳು ಜ್ವರ ಕಾಣಿಸಿಕೊಂಡಿದೆ. ನಾಲ್ಕು ಮತ್ತು ಏಳು ವರ್ಷದ ಮೂರು ಮಕ್ಕಳು ಮೆದುಳು ಜ್ವರದಿಂದ ಬಳಲುತ್ತಿದ್ದಾರೆ.












Click it and Unblock the Notifications