ಕೊರೊನಾ ನಡುವೆ ಮದುವೆ: ವೈರಸ್‌ನಿಂದ ಮದುಮಗ ವಿಧಿವಶ

ಪಾಟ್ನ, ಜೂನ್ 30: ಕೊರೊನಾ ವೈರಸ್‌ ಸೋಂಕು ಇದ್ದರೂ, ಮದುವೆಗಳು ನಡೆಯುತ್ತಿವೆ. ಸರ್ಕಾರದ ನಿಯಮದ ಪ್ರಕಾರ ಕಡಿಮೆ ಜನರನ್ನು ಒಳಗೊಂಡು ಮದುವೆ ಕಾರ್ಯಕ್ರಮ ನಡೆಸಬಹುದಾಗಿದೆ. ಆದರೆ, ಕೊರೊನಾ ನಡುವೆ ಆದ ಮದುವೆಯಿಂದ ದೊಡ್ಡ ಆಪತ್ತು ಎದುರಾಗಿದೆ.

ಬಿಹಾರದ ಪಾಟ್ನದಲ್ಲಿ ಕೊರೊನಾ ನಡುವೆ ಮದುವೆಯೊಂದು ನಡೆದಿದ್ದು, ದುರಾದೃಷ್ಟವಶಾತ್ ಮದುಮಗನೇ ವಿಧಿವಶನಾಗಿದ್ದಾನೆ. ಗುರುಗ್ರಾಮದ ಸಾಫ್ಟ್ ವೇರ್ ಇಂಜಿನಿಯರ್ ಮದುವೆಯಾದ ಕೆಲವೇ ದಿನಗಳಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ಜೂನ್ 15 ರಂದು ಇವರ ಮದುವೆ ಕಾರ್ಯಕ್ರಮ ನಡೆದಿತ್ತು.

ಮದುಮಗನಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿತ್ತು. ಆದರೆ, ಆತನಿಗೆ ಕೊರೊನಾ ಪರೀಕ್ಷೆ ನೆಡೆಸದೆ ಅಂತ್ಯಸಂಸ್ಕಾರ ಮಾಡಲಾಗಿದೆ. ಮದುಮಗನ ಸಾವಿನ ನಂತರ ಮದುವೆಗೆ ಹೋಗಿದ್ದವರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಬರೋಬ್ಬರಿ 95 ಮಂದಿಗೆ ಪಾಸಿಟಿವ್ ವರದಿ ಬಂದಿದೆ.

Coronavirus In Patna A Man Dies Two Days After His Marriage

ಮೊದಲ ಮದುವೆ ಹೋದವರ ಪೈಕಿ ಕೆಲವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 15 ಜನರಿಗೆ ಕೋವಿಡ್ ಸೋಂಕು ಇರುವುದು ತಿಳಿದು ಬಂತು. ಆ ಬಳಿಕ ಇನ್ನೂ ಉಳಿದವರ ಪರೀಕ್ಷೆ ನಡೆದಿದ್ದು, ಪರೀಕ್ಷೆಯ ವರದಿ ಇಂದು ಬಂದಿದೆ. ಇದರಲ್ಲಿ 95 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+