ತನ್ನ ಮದುವೆಗೇ ಕುಡಿದು ಟೈಟಾಗಿ ಬಂದ ವರ, ವಧು ಮಾಡಿದ್ದೇನು?
ಬಿಹಾರ, ಮಾರ್ಚ್ 11 : ಮದುವೆ ಎಂದರೆ ವರ ಹಾಗೂ ವಧು ಸಮನಾದ ಕನಸು ಕಂಡಿರುತ್ತಾರೆ. ಮುಂದಿನ ಜೀವನ ಹೇಗೆಲ್ಲಾ ಇರಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ.
ಹಾಗಿದ್ದಾಗ ಮದುವೆ ಮಂಟಪಕ್ಕೆ ವರ ಕುಡಿದು ಟೈಟಾಗಿ ಬಂದರೆ ವಧುವಿಗೆ ಏನನ್ನಿಸಿರಬೇಕು. ಹಾಗೆ ಬಂದ ವರನನ್ನು ತಿರಸ್ಕರಿಸಿ ವಧು ಮಂಟಪದಿಂದ ಹೊರನಡೆದ ಘಟನೆ ಬಿಹಾರದ ಛಾಪ್ರಾ ಗ್ರಾಮದಲ್ಲಿ ನಡೆದಿದೆ.
ವಧು ರಿಂಕಿ ಕುಮಾರಿ ಹಾಗೂ ಬಬ್ಲು ಕುಮಾರ್ಗೆ ಮದುವೆ ನಿಶ್ಚಯವಾಗಿತ್ತು. ಈ ಬಗ್ಗೆ ಮಾತನಾಡಿರುವ ವಧುವಿನ ತಂದೆ ತ್ರಿಭುವನ್ ಷಾ, ವರ ಬಬ್ಲು ಕುಮಾರ್ ವಿಪರೀತ ಕುಡಿದು ತನ್ನ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ತಿಳಿಯದ ಸ್ಥಿತಿಯಲ್ಲಿದ್ದ. ಅಲ್ಲದೆ, ವಿವಾಹ ವೇದಿಕೆಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ. ಇದನ್ನು ನೋಡಿದ ನನ್ನ ಮಗಳು ನನಗೆ ಈ ಮದುವೆ ಬೇಡವೆಂದು ತಿರಸ್ಕರಿಸಿ ಮಂಟಪದಿಂದ ಹೊರನಡೆದಳು ಎಂದು ಹೇಳಿದ್ದಾರೆ.

ಇದೇ ವೇಳೆ ವಧುವಿನ ಕಡೆಯವರು ವರದಕ್ಷಿಣೆ ಹಣವನ್ನು ಮರಳಿಸುವವರೆಗೂ ವರನನ್ನು ಮಂಟಪದಿಂದ ಹೊರಹೋಗಲು ಬಿಡಲಿಲ್ಲ. ಹಣ ಮರಳಿಸಿದ ನಂತರ ಆತನನ್ನು ಬಿಡುಗಡೆಗೊಳಿಸಿದರು.
ವರನ ಸಂಬಂಧಿಕರ ಪ್ರಕಾರ ಬಬ್ಲು ಕುಮಾರ್ ವಿಪರೀತ ಕುಡಿದಿದ್ದರಿಂದ ಆತ ಸರಿಯಾಗಿ ನಿಂತುಕೊಳ್ಳುವ ಸ್ಥಿತಿಯಲ್ಲಿಯೂ ಇರಲಿಲ್ಲ. ಮದುವೆ ಸಂದರ್ಭದಲ್ಲಿ ಜರಗುವ ಆಚರಣೆಗಳನ್ನು ಸರಿಯಾಗಿ ನಿರ್ವಹಿಸುತ್ತಿರಲಿಲ್ಲ. ಇದರಿಂದಾಗಿ ವಧು ಅಲ್ಲಿಂದ ಎದ್ದು ಹೊರನಡೆದಳು ಎಂಬ ಮಾಹಿತಿ ಲಭ್ಯವಾಗಿದೆ.












Click it and Unblock the Notifications