• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರದಲ್ಲಿ ಕ್ವಾರಂಟೈನ್ ಅವಧಿ ಮುಗಿಸಿದವರಿಗೆ ಕಾಂಡೋಮ್ ವಿತರಣೆ

|

ಪಾಟ್ನಾ, ಜೂನ್ 2: ಕೊರೊನಾ ವೈರಸ್ ಭೀತಿಯಿಂದ ದೇಶದ ಪ್ರಮುಖ ನಗರಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು ರಾಜ್ಯಗಳಿಗೆ ಮರಳುತ್ತಿದ್ದಾರೆ. ಬಿಹಾರ್ ರಾಜ್ಯಕ್ಕೂ ಸಾವಿರಾರು ಕಾರ್ಮಿಕರು ಹಿಂತಿರುಗುತ್ತಿದ್ದು, ರಾಜ್ಯಕ್ಕೆ ಬಂದವರೆನ್ನೆಲ್ಲಾ ಕ್ವಾರಂಟೈನ್ ಮಾಡಲಾಗಿತ್ತು.

   ಯಾರಿಂದ ಅಧಿಕಾರ ಕಳೆದುಕೊಂಡೆ ಅಂತಾ ನನಗೆ ಗೊತ್ತು | HD Kumaraswamy | Oneindia Kannada

   ಇದೀಗ, ರಾಜ್ಯಕ್ಕೆ ಬರುವ ವಲಸೆ ಕಾರ್ಮಿಕರಿಗೆ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ನೀಡಲು ಬಿಹಾರ್ ಸರ್ಕಾರ ಮುಂದಾಗಿದೆ.

   ಲೈಂಗಿಕ ಕ್ರಿಯೆ ಮತ್ತು ಲಾಕ್‌ಡೌನ್: ಪ್ರಸಿದ್ದ ಕಾಂಡೋಮ್ ಕಂಪೆನಿ ಹೇಳಿದ್ದೇನು?

   ಕೊರೊನಾ ಲಾಕ್‌ಡೌನ್‌ ಬಳಿಕ ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕದಿಂದ ಬಿಹಾರ್ ಸರ್ಕಾರ ಇಂತಹ ಯೋಜನೆ ಕೈಗೊಂಡಿದೆ. ಜನಸಂಖ್ಯೆ ನಿಯಂತ್ರಣಕ್ಕಾಗಿ ಕುಟುಂಬ ಯೋಜನೆ ಅಡಿ ಹೊಸ ಅಭಿಯಾನಗಳಿಗೆ ಬಿಹಾರ್ ಸರ್ಕಾರ ಚಾಲನೆ ನೀಡಿದೆ. ಮುಂದೆ ಓದಿ.....

   ಕ್ವಾರಂಟೈನ್ ಮುಗಿಸಿದವರಿಗೆ ಕಾಂಡೋಮ್ ಕಡ್ಡಾಯ

   ಕ್ವಾರಂಟೈನ್ ಮುಗಿಸಿದವರಿಗೆ ಕಾಂಡೋಮ್ ಕಡ್ಡಾಯ

   ಬಿಹಾರ್ ರಾಜ್ಯ ಆರೋಗ್ಯ ಇಲಾಖೆ ಕುಟುಂಬಕ್ಕೆ ಯೋಜನೆಯನ್ನು ಉತ್ತೇಜಿಸುವ ಅಭಿಯಾನ ಆರಂಭಿಸಿದೆ. ಹೀಗಾಗಿ, ಹೊರರಾಜ್ಯಗಳಿಂದ ಬಿಹಾರಕ್ಕೆ ಮರಳುವ ವಲಸೆ ಕಾರ್ಮಿಕರು ಕ್ವಾರಂಟೈನ್ ಗೆ ಒಳಗಾಗಬೇಕು. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಅವರಿಗೆ ಕುಟುಂಬ ಯೋಜನೆ ಕುರಿತು ವಿವರಿಸಿ ಕಾಂಡೋಮ್ ಮತ್ತು ಗರ್ಭನಿರೋಧಕ ಕಿಟ್‌ ನೀಡುತ್ತಿದೆ.

   ಡೋರ್ ಟು ಡೋರ್ ಸ್ಕ್ರೀನಿಂಗ್ ಸಮಯದಲ್ಲೂ ವಿತರಣೆ

   ಡೋರ್ ಟು ಡೋರ್ ಸ್ಕ್ರೀನಿಂಗ್ ಸಮಯದಲ್ಲೂ ವಿತರಣೆ

   ಕೊರೊನಾ ವೈರಸ್ ಭೀತಿಯಿಂದ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಸ್ಕ್ರೀನಿಂಗ್ ಮಾಡುತ್ತಿದ್ದಾರೆ. ಈ ವೇಳೆಯೂ ಜನರಿಗೆ ಕಾಂಡೋಮ್ ಮತ್ತು ಗರ್ಭನಿರೋಧಕ ಕಿಟ್‌ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ಗೋಪಾಲ್‌ಗುಂಜ್, ಜಮುಯಿ, ಸಮಸ್ತಿಪುರ, ಸುಪಾಲ್, ಸರನ್, ರೋಹ್ತಾಸ್ ಮತ್ತು ಪೂರ್ವ ಚಂಪಾರನ್ ಮುಂತಾದ ಜಿಲ್ಲೆಗಳಲ್ಲಿ ಈಗಾಗಲೇ ವಿತರಣೆ ಆರಂಭಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

   20,000 ಕಿಟ್ ವಿತರಿಸಲಾಗಿದೆ

   20,000 ಕಿಟ್ ವಿತರಿಸಲಾಗಿದೆ

   'ಗೋಪಾಲ್‌ ಗುಂಜ್ ಜಿಲ್ಲೆಯಲ್ಲಿ ಈಗಾಗಲೇ 20,000ಕ್ಕೂ ಹೆಚ್ಚು ಗರ್ಭನಿರೋಧಕ ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ ಮತ್ತು ಉಳಿದ 7,000 ವಲಸಿಗರು ಸಹ ಕ್ವಾರಂಟೈನ್‌ನಿಂದ ಬಿಡುಗಡೆಯಾಗುವ ಸಮಯದಲ್ಲಿ ಕಿಟ್ ಪಡೆಯಲಿದ್ದಾರೆ' ಎಂದು ಗೋಪಾಲ್‌ಗುಂಜ್ ಸಿವಿಲ್ ಸರ್ಜನ್ ಟಿ.ಎನ್. ಸಿಂಗ್ ತಿಳಿಸಿದ್ದಾರೆ. ಸಮಸ್ತಿಪುರ ಜಿಲ್ಲೆಯ ಬ್ಲಾಕ್ ಮಟ್ಟದಲ್ಲೂ ಕುಟುಂಬ ಕಲ್ಯಾಣ ಅಧಿಕಾರಿಗಳು ಕ್ವಾರಂಟೈನ್ ಅವಧಿ ಮುಗಿಸಿ ಹೊರ ಹೋಗುವ ಜನರಿಗೆ ಕಾಂಡೋಮ್ ಮತ್ತು ಗರ್ಭನಿರೋಧಕಗಳನ್ನು ವಿತರಿಸುತ್ತಿದ್ದಾರೆ.

   ಬಿಹಾರ್‌ನಲ್ಲಿ ಕೊರೊನಾ ವಿವರ

   ಬಿಹಾರ್‌ನಲ್ಲಿ ಕೊರೊನಾ ವಿವರ

   ಬಿಹಾರದಲ್ಲಿ ಇದುವರೆಗೂ 4049 ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. 1741 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 2285 ಜನರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಂದ್ಹಾಗೆ, ಬಿಹಾರದಲ್ಲಿ 2011ನೇ ಜನಗಣತಿ ಪ್ರಕಾರ 10 ಕೋಟಿ ಜನಸಂಖ್ಯೆ ಹೊಂದಿದೆ. ಸುಮಾರು 14 ಲಕ್ಷ ವಲಸೆ ಕಾರ್ಮಿಕರು ಲಾಕ್‌ಡೌನ್‌ ವೇಳೆ ಬಿಹಾರ್ ರಾಜ್ಯಕ್ಕೆ ಮರಳಿದ್ದಾರೆ ಎಂಬ ಮಾಹಿತಿ ಇದೆ.

   ಕೊರೊನಾದಿಂದ ಕಾಂಡೋಮ್ ಮಾರಾಟದಲ್ಲಿ ಭಾರಿ ಏರಿಕೆ

   English summary
   Bihar govt distributing condoms, contraceptive pills to migrant workers to avoid population in the state.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X