ಬಿಹಾರ: 8 ಸುತ್ತಿನ ನಂತರ ಮ್ಯಾಜಿಕ್ ನಂಬರ್ ದಾಟಿದ ಎನ್ಡಿಎ

ಪಾಟ್ನಾ, ನ.10: ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿಗಾಗಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿದ್ದು, ನವೆಂಬರ್ 10ರಂದು ಅಂತಿಮ ಫಲಿತಾಂಶ ಹೊರಬರಲಿದೆ. ಆರಂಭಿಕ ಮತ ಎಣಿಕೆಯಂತೆ ಆರ್ ಜೆ ಡಿ-ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿರುವುದು ಜೆಡಿಯು -ಬಿಜೆಪಿಗೆ ಆಘಾತ ತಂದಿದೆ.

Recommended Video

      ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

      ಬಿಹಾರದ 38 ಜಿಲ್ಲೆಗಳಲ್ಲಿ 55 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ. 3755 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 30ಕ್ಕೂ ಅಧಿಕ ಸುತ್ತಿನ ಮತ ಎಣಿಕೆಯಾಗಲಿದೆ.

      ಟ್ರೆಂಡ್ ಏನು ಹೇಳುತ್ತಿದೆ 8 ಸುತ್ತಿನ ನಂತರ 243 ಸ್ಥಾನ, 122 ಮ್ಯಾಜಿಕ್ ನಂಬರ್

      ಸಮಯ 10:51ರ ವೇಳೆಗೆ
      ಎನ್ಡಿಎ: 128,
      ಮಹಾಘಟಬಂಧನ್ : 97,
      ಇತರೆ 17 ಬಂದಿದೆ.

      Bihar Eletions: Trends show NDA crossing majority mark of 122

      ಪ್ರತಿಕ್ಷಣ ಟ್ರೆಂಡ್ ಬದಲಾಗುತ್ತಿದ್ದು, ರೋಚಕ ಕ್ಲೈಮ್ಯಾಕ್ಸ್ ನಂಥ ಸಾಗುತ್ತಿದೆ. ಆದರೆ, ಎನ್ಡಿಎ ಭಾರಿ ಮುನ್ನಡೆ ಕಾಯ್ದುಕೊಂಡಿದ್ದು, ಚಿರಾಗ್ ಅವರ ಎಲ್ ಜೆಪಿ ಬಲ ಕೂಡಾ ಸಿಗುವುದರಿಂದ ಅಂತಿಮ ಫಲಿತಾಂಶದಲ್ಲಿ ಗೆಲುವಿನ ಮುದ್ರೆ ಒತ್ತುವ ಸಾಧ್ಯತೆ ಹೆಚ್ಚಿದೆ.

      ಅಕ್ಟೋಬರ್ 28ರ ಮೊದಲ ಹಂತದಲ್ಲಿ ಶೇ.55.69ರಷ್ಟು ಮತದಾನ ನಡೆದಿದೆ. ನವೆಂಬರ್ 03ರ ಎರಡನೇ ಹಂತದಲ್ಲಿ ಶೇ.53.51ರಷ್ಟು ಮತದಾನ ನಡೆದಿದೆ. ಶನಿವಾರ 3ನೇ ಹಂತದಲ್ಲಿ ಶೇ.51ರಷ್ಟು ಮತದಾನ ನಡೆದಿದೆ.

      ಎಕ್ಸಿಟ್ ಪೋಲ್ ಗಳ ಸಮೀಕ್ಷೆಗಳ ಸಮೀಕ್ಷೆಯಲ್ಲಿ ತೇಜಸ್ವಿ ಬಣಕ್ಕೆ ಗೆಲುವು ಸಾಧಿಸಲಿದ್ದು, ಆರ್ ಜೆ ಡಿ-ಕಾಂಗ್ರೆಸ್ ಬಣ 133 ಸ್ಥಾನ ಪಡೆಯಲಿದ್ದು, ಎನ್ಡಿಎ 100 ಸ್ಥಾನ ಹಾಗೂ ಇತರೆ 11 ಪಡೆಯಲಿದೆ ಎಂದು ಫಲಿತಾಂಶ ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+