ಅಳಿಯನಿಗೆ ಗೆಲುವಿನ ಸಿಹಿ, ಮಾವನಿಗೆ ಸೋಲಿನ ಕಹಿ: ಪತ್ನಿ ಜತೆಗಿನ ಸವಾಲಿನಲ್ಲಿ ಗೆದ್ದ ಲಾಲೂ ಮಗ

ನವದೆಹಲಿ, ನವೆಂಬರ್ 10: ಲಾಲೂ ಪ್ರಸಾದ್ ಅವರ ಮೊದಲ ಮಗ, ಆರ್‌ಜೆಡಿ ಮುಖಂಡ ತೇಜ್ ಪ್ರತಾಪ್ ಯಾದವ್ ಹಾಸನ್‌ಪುರ ವಿಧಾನಸಭೆ ಕ್ಷೇತ್ರದಿಂದ ಗೆಲುವಿನ ನಗೆ ಬೀರಿದ್ದಾರೆ. ಆದರೆ ಅವರ ಮಾವ ಮತ್ತು ಜೆಡಿಯು ಅಭ್ಯರ್ಥಿ ಚಂದ್ರಿಕಾ ರೈ ಪರ್ಸಾ ವಿಧಾನಸಭೆ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ.

ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಯುದ ರಾಜ್ ಕುಮಾರ್ ರೈ ಅವರನ್ನು ತೇಜ್ ಪ್ರತಾಪ್ 21,139 ಮತಗಳಿಂದ ಸೋಲಿಸಿದ್ದಾರೆ. ಈ ಮುಂಚ ತೇಜ್ ಪ್ರತಾಪ್ ಅವರ ಮಹುವಾ ವಿಧಾನಸಭೆ ಕ್ಷೇತ್ರದಲ್ಲಿ ಗೆದ್ದಿದ್ದರು. ನೇರ ಸ್ಪರ್ಧೆಯಲ್ಲಿ ಕಣಕ್ಕಿಳಿಯುವಂತೆ ಅವರಿಂದ ದೂರವಾಗಿರುವ ಪತ್ನಿ ಐಶ್ವರ್ಯಾ ರೈ ಸವಾಲು ಹಾಕಿದ್ದರಿಂದ ಕ್ಷೇತ್ರ ಬದಲಿಸಲು ಅವರು ನಿರ್ಧರಿಸಿದ್ದರು.

2015ರಲ್ಲಿ ಮಹುವಾ ಕ್ಷೇತ್ರದಿಂದ ಗೆದ್ದಿದ್ದ ತೇಜ್ ಪ್ರತಾಪ್, ಆಗಿನ ನಿತೀಶ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ಬಳಿಕ ಪರಿಸರ ಖಾತೆಯೂ ಅವರಿಗೆ ಸಿಕ್ಕಿತ್ತು.

Bihar Election Results 2020: Tej Pratap Wins, Father In Law Chandrika Rai Lost

ಇನ್ನೊಂದೆಡೆ ಲಾಲೂ ಕುಟುಂಬದ ವಿರುದ್ಧ ಸಿಡಿದೆದ್ದಿದ್ದ ತೇಜ್ ಪ್ರತಾಪ್ ಅವರ ಮಾವ ಚಂದ್ರಿಕಾ ರೈ ಅವರಿಗೆ ಸೋಲಿನ ಕಹಿ ಎದುರಾಗಿದೆ. ಮಗಳು ಐಶ್ವರ್ಯಾ ರೈ ಮದುವೆ ಮುರಿದುಬಿದ್ದ ಬಳಿಕ ಆರ್‌ಜೆಡಿಯಿಂದ ಹೊರಬಂದಿದ್ದ ಚಂದ್ರಿಕಾ ರೈ ಜೆಡಿಯು ಸೇರಿದ್ದರು. ಜೆಡಿಯು ಮುಖಂಡರಾಗಿದ್ದ ಛೋಟೆ ಲಾಲ್ ರೈ ಆರ್‌ಜೆಡಿಗೆ ಸೇರ್ಪಡೆಯಾಗಿದ್ದರು.

ಪರ್ಸಾ ವಿಧಾನಸಭೆ ಕ್ಷೇತ್ರವು ಚಂದ್ರಿಕಾ ರೈ ಅವರ ಪ್ರಾಬಲ್ಯ ಇರುವ ಕ್ಷೇತ್ರ. 1985ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಗಳಿಸಿದ್ದ ಅವರು, 1990, 1995, 2000, 2005 ಮತ್ತು 2015ರಲ್ಲಿ ಆರ್‌ಜೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಛೋಟೆ ಲಾಲ್ ರೈ ಅವರು ಈ ಕ್ಷೇತ್ರದಲ್ಲಿ ಚಂದ್ರಿಕಾ ರೈ ಎದುರು ಜೆಡಿಯುದಿಂದ 2005 ಮತ್ತು 2010ರಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಇಬ್ಬರೂ ಅಭ್ಯರ್ಥಿಗಳು ಈ ಬಾರಿ ಪರಸ್ಪರ ಪಕ್ಷಾಂತರಗೊಂಡಿದ್ದರು.

Recommended Video

      ಹೆಂಡತಿಯ challenge ಒಪ್ಪಿ ತೇಜ್ ಎನ್ ಮಾಡಿದ್ರು ಗೊತ್ತಾ ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+