ಬಿಹಾರ ಚುನಾವಣಾ ಫಲಿತಾಂಶ: ತೇಜಸ್ವಿ ಮನೆಗೆ ಜೀವಂತ ಮೀನು ತಂದ ಆರ್‌ಜೆಡಿ ಬೆಂಬಲಿಗರು

ಪಾಟ್ನಾ, ನವೆಂಬರ್ 10: ಬಿಹಾರದ 243 ವಿಧಾನಸಭಾ ಸ್ಥಾನಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವೆ ಸ್ಪರ್ಧೆಯು ತಾರಕಕ್ಕೇರಿದೆ.

Recommended Video

      ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

      ಬಿಹಾರದ ಮತದಾರರು ತಮ್ಮ ಆಯ್ಕೆ ಮತ್ತು ಅಭ್ಯರ್ಥಿಗಳೊಂದಿಗೆ ತಮ್ಮ ಬೆಂಬಲ ಮತ್ತು ಒಗ್ಗಟ್ಟು ಪ್ರದರ್ಶಿಸಲು ಯಾವುದೇ ಕಲ್ಲುಗಳನ್ನು ಅಥವಾ ಮೀನುಗಳನ್ನು ಬಿಡುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

      ಗೆಲುವಿನ ಸಂದರ್ಭದಲ್ಲಿ ಹೂವುಗಳು, ಉಡುಗೊರೆ ಮತ್ತು ಬೆಂಬಲದ ಇತರ ಸಾಂಪ್ರದಾಯಿಕ ಟೋಕನ್‌ಗಳ ಬದಲಾಗಿ, ರಾಷ್ಟ್ರೀಯ ಜನತಾದಳ (ಆರ್‌ಜೆಡಿ)ದ ನಾಯಕ ತೇಜಶ್ವಿ ಯಾದವ್ ಅವರ ಅಭಿಮಾನಿಗಳು ಅದೃಷ್ಟವನ್ನು ತರಲು ಅಸಾಮಾನ್ಯ ಉಡುಗೊರೆಯನ್ನು ತರುತ್ತಿದ್ದಾರೆ. ಅದು ಏನೆಂದರೆ ಜೀವಂತ ಮೀನುಗಳು.

      Bihar Election Results 2020: RJD Supporters Bringing Raw Fish To Tejashwi Yadavs Residence

      ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದು, ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ನಿಧಾನವಾಗಿ ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನೇತೃತ್ವದ ಮಹಾಘಟಬಂಧನ್ ಮೇಲೆ ಮುನ್ನಡೆ ಸಾಧಿಸುತ್ತಿದ್ದರೆ, ತೇಜಸ್ವಿ ಯಾದವ್‌ಗೆ ಬಿಹಾರದಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

      Bihar Election Results 2020: RJD Supporters Bringing Raw Fish To Tejashwi Yadavs Residence

      ವೈರಲ್ ಆಗುತ್ತಿರುವ ಫೋಟೋಗಳು ಮತ್ತು ವೀಡಿಯೊಗಳಲ್ಲಿ, ತೇಜಸ್ವಿ ಯಾದವ್ ಅವರ ಬೆಂಬಲಿಗರು ಅದೃಷ್ಟಕ್ಕಾಗಿ ಮೀನುಗಳನ್ನು ತರುವುದನ್ನು ಕಾಣಬಹುದಾಗಿದ್ದು, ವರದಿಗಳ ಪ್ರಕಾರ, ತೇಜಸ್ವಿ ಯಾದವ್ ಬೆಂಬಲಿಗರು ತಮ್ಮ ಹಾಜಿಪುರದಿಂದ ಅವರ ಪಾಟ್ನಾ ನಿವಾಸಕ್ಕೆ ಸೇರುತ್ತಿದ್ದಾರೆ. ಅಲ್ಲದೇ ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ಮನೆಯ ಮುಂದೆ ದೈತ್ಯ ಮೀನುಗಳನ್ನು ತೋರಿಸುತ್ತಿದ್ದಾರೆ.

      Bihar Election Results 2020: RJD Supporters Bringing Raw Fish To Tejashwi Yadavs Residence

      ಮಾಧ್ಯಮಗಳೊಂದಿಗೆ ಮಾತನಾಡಿದ ಮೀನು ತಂದ ಸಮಸ್ತಿಪುರ ಜಿಲ್ಲೆಯ ಆರ್‌ಜೆಡಿ ಬೆಂಬಲಿಗರು, ಈ ಮೀನು ಅದೃಷ್ಟವನ್ನು ತಂದಿದೆ ಎಂದು ಹೇಳಿದರು. ತೇಜಸ್ವಿ ಯಾದವ್ ಅವರು ಮೀನುಗಳನ್ನು ನೋಡಬೇಕು ಆಗ ಅವರ ಅದೃಷ್ಟ ಬದಲಾಗುತ್ತದೆ ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+