ದರ್ಬಾಗ್ ಗ್ರಾಮೀಣ ಕ್ಷೇತ್ರದಲ್ಲಿ ಆರ್ ಜೆಡಿಯ ಲಲಿತ್ ಯಾದವ್ ದಿಗ್ವಿಜಯ
ಪಾಟ್ನಾ, ನವೆಂಬರ್.10: ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಮೊದಲ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ದರ್ಬಾಂಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಜನತಾ ದಳ ಅಭ್ಯರ್ಥಿ ಲಲಿತ್ ಯಾದವ್ ದಿಗ್ವಿಜಯ ಸಾಧಿಸಿದ್ದಾರೆ.
ರಾಷ್ಟ್ರೀಯ ಜನತಾ ದಳ ಪಕ್ಷಕ್ಕೆ ಮೊದಲ ಗೆಲುವಿನ ಸಿಹಿ ಸಿಕ್ಕಿದೆ. ತೀವ್ರ ಕುತೂಹಲ ಕೆರಳಿಸಿದ್ದ ದರ್ಬಾಂಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನಡುವೆ ಆರ್ ಜೆಡಿ ಅಭ್ಯರ್ಥಿ ಲಲಿತ್ ಯಾದವ್ ಅಲ್ಪಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ.
ಅಭ್ಯರ್ಥಿ ಲಲಿತ್ ಯಾದವ್ ಅವರು, ಜೆಡಿಯು ಅಭ್ಯರ್ಥಿ ಫರಾಜ್ ಫತ್ಮಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಆರ್ ಜೆಡಿಯ ಲಲಿತ್ ಯಾದವ್ 2141 ಮತಗಳ ಅಂತರಿಂದ ಜಯ ಸಾಧಿಸಿರುವ ಬಗ್ಗೆ ಬಿಹಾರ ಚುನಾವಣಾ ಆಯೋಗವು ಅಧಿಕೃತವಾಗಿ ಘೋಷಿಸಿದೆ.

ಏನ್ ಹೇಳುತ್ತೆ ಟ್ರೆಂಡ್:
ಬಿಹಾರ ಚುನಾವಣಾ ಆಯೋಗದ ಟ್ರೆಂಡ್ ಪ್ರಕಾರ, ಮಹಾಘಟಬಂಧನ್ ಮೈತ್ರಿಕೂಟದ ಎದುರಿಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಮುನ್ನಡೆ ಸಾಧಿಸಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆ ಅಂಕಿ ಅಂಶಗಳ ಪ್ರಕಾರ, ಎನ್ ಡಿಎ ಮೈತ್ರಿಕೂಟ 128 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 73, ಜೆಡಿಯು 49, ವಿಐಪಿ 5 ಮತ್ತು ಹಿಂದೂಸ್ಥಾನ್ ಅವಂ ಮೋರ್ಚಾ 1 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಹಾಘಟಬಂಧನ್ 105 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಈ ಪೈಕಿ ಆರ್ ಜೆಡಿ 67, ಕಾಂಗ್ರೆಸ್ 20, ಎಡಪಕ್ಷ 18, ಬಿಎಸ್ ಪಿ 2, ಎಐಎಂಐಎಂ 2, ಎಲ್ ಜೆಪಿ 2, ಪಕ್ಷೇತರರು 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬಗ್ಗೆ ಬಿಹಾರ ಚುನಾವಣಾ ಆಯೋಗದಿಂದ ಮಾಹಿತಿ ನೀಡಿದೆ.












Click it and Unblock the Notifications