ತೀವ್ರ ಕುತೂಹಲ ಕೆರಳಿಸಿರುವ ಬಿಹಾರದ 76 ಕ್ಷೇತ್ರಗಳು!

ಪಾಟ್ನಾ, ನವೆಂಬರ್ 10: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಆರಂಭದಲ್ಲಿ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಮುನ್ನಡೆ ಸಾಧಿಸಿತ್ತು.

Recommended Video

      ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

      ಆದರೆ ಮತ ಎಣಿಕೆ ಮುಂದುವರೆದಂತೆ ಮಹಾಘಟಬಂಧನ್ ಹಿಂದಿಕ್ಕಿ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿತು. ಈಗ ಸದ್ಯದ ಪ್ರವೃತ್ತಿ ಪ್ರಕಾರ 76 ಕ್ಷೇತ್ರಗಳಲ್ಲಿ 1000 ಕ್ಕಿಂತ ಕಡಿಮೆ ಮತಗಳ ಅಂತರವಿರುವುದು ತೀವ್ರ ಕುತೂಹಲ ಮೂಡಿಸಿದೆ. ಇದರ ಅಂತಿಮ ಫಲಿತಾಂಶ ಯಾವ ಕಡೆ ಬೇಕಾದರೂ ವಾಲಬಹುದು ಅಂದಾಜಿಸಲಾಗಿದೆ.

      ಬಿಹಾರದ ಒಟ್ಟು 243 ವಿಧಾನಸಭಾ ಸ್ಥಾನಗಳಲ್ಲಿ ಎನ್‌ಡಿಎ ಮೈತ್ರಿಕೂಟ 132 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಅದರಲ್ಲಿ ಬಿಜೆಪಿ 80 ಮತ್ತು ಜೆಡಿಯು 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

      Bihar Election Results 2020: 76 Seats Of Bihar Intrigued

      ಮತ್ತೊಂದೆಡೆ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಈಗ 95 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಆರ್‌ಜೆಡಿ 70, ಕಾಂಗ್ರೆಸ್ 24 ಮತ್ತು ಎಡಪಕ್ಷಗಳು 21 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

      ಬಿಹಾರದ ಬಂಕಾ ಕ್ಷೇತ್ರದಲ್ಲಿ ಬಿಜೆಪಿಯ ರಾಮನಾರಾಯಣ್ ಮಂಡಲ 7256 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದರೆ, ಕತಿಹಾರ್ ನ ಬಲರಾಂಪುರದಲ್ಲಿ ಸಿಪಿಐ-ಎಂಎಲ್ಎಲ್‌ನ ಮೆಹಬೂಬ್ ಆಲಂ ವಿಕಾಶ್ಶಿಲ್ ಇನ್ಸಾನ್ ಪಕ್ಷ (ವಿಐಪಿ) ವಿರುದ್ಧ 4772 ಮತಗಳನ್ನು ಗಳಿಸಿ ಮುನ್ನಡೆ ಸಾಧಿಸಿದ್ದಾರೆ.

      ಸದ್ಯದ ವರದಿಯ ಪ್ರಕಾರ ಬಿಹಾರದ 76 ಕ್ಷೇತ್ರಗಳಲ್ಲಿ ಮುನ್ನಡೆ ಅಭ್ಯರ್ಥಿ ಮತ್ತು ಹಿನ್ನಡೆ ಅಭ್ಯರ್ಥಿಯ ನಡುವಿನ ಅಂತರವು 1000 ಮತಗಳಿಗಿಂತ ಕಡಿಮೆಯಿರುವು ಗಮನಾರ್ಹ ಸಂಗತಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+