ಅಪ್ರಾಪ್ತೆ ಮೇಲೆ ಅತ್ಯಾಚಾರ: ಅಶ್ಲೀಲ ಫೋಟೊ ಹರಿಬಿಟ್ಟ ಆರೋಪಿಗಳು

ಪಾಟ್ನಾ, ಮೇ 11: ಹದಿನಾರು ವರ್ಷದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಫೋಟೊಗಳನ್ನು ಹರಿಬಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಬಾಲಕಿಯ ಫೋಟೋಗಳನ್ನು ನೋಡಿದ 'ಸೈಬರ್ ಸೇನಾನಿ' ತಂಡ ಈ ಬಗ್ಗೆ ಪೊಲೀಸರಿಗೆ ದೂರು ನೀಡಿತ್ತು. ಹೀಗಾಗಿ ಏಪ್ರಿಲ್ 24ರಂದು ನಡೆದಿದ್ದ ಗ್ಯಾಂಗ್ ರೇಪ್ ಬೆಳಕಿಗೆ ಬಂದಿದ್ದು, ಐವರ ಪೈಕಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಮಾವಿನ ತೋಟದಲ್ಲಿ ಕಾಮುಕರು ಅಪ್ರಾಪ್ತೆ ಮೇಲೆ ಅಟ್ಟಹಾಸ ಮೆರೆದಿದ್ದಲ್ಲದೇ ಆಕೆಯ ಬೆತ್ತಲೆ ಫೋಟೋಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದರು. ಅಲ್ಲದೇ ಈ ಬಗ್ಗೆ ಯಾರಿಗೂ ಹೇಳಬೇಡ ಎಂದು ಹೆದರಿಸಿ, ಬಾಲಕಿ ಬಳಿ ಪ್ರಮಾಣ ಮಾಡಿಸಿಕೊಂಡಿದ್ದರು.

16 Year Old Girl Gangraped By Five Youths In Darbhanga

ಕಾಮುಕರ ದುಕೃತ್ಯಕ್ಕೆ ಹೆದರಿದ ಅಪ್ರಾಪ್ತೆ ಈ ಬಗ್ಗೆ ಯಾರಿಗೂ ಹೇಳಿರಲಿಲ್ಲ. ತಂದೆ ಅಹಮದಾಬಾದ್‍ನಲ್ಲಿ ಸಿಲುಕಿಕೊಂಡಿದ್ದ ಕಾರಣಕ್ಕೆ ಅಪ್ರಾಪ್ತೆ ತನ್ನ ತಾಯಿ, ಅಜ್ಜ, ಅಜ್ಜಿ ಜೊತೆಗೆ ವಾಸವಾಗಿದ್ದಳು. ಹೀಗಾಗಿ ಬಾಲಕಿ ಕೀಚಕರ ಬಗ್ಗೆ ಬಾಯಿಬಿಡದೆ ಸುಮ್ಮನ್ನಿದ್ದಳು.

ರಾತ್ರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಓರ್ವ ಆರೋಪಿಗಾಗಿ ಬಲೆ ಬೀಸಲಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಕೃತ್ಯವೆಸೆಗಿದ ಆರೋಪಿಗಳು ಅಪ್ರಾಪ್ತೆಯ ಬೆತ್ತಲೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಫೋಟೋಗಳನ್ನು ನೋಡಿದ 'ಸೈಬರ್ ಸೇನಾನಿ' ತಂಡ ಪೊಲೀಸರ ಗಮನಕ್ಕೆ ತಂದಿದ್ದು, ಈ ಬಗ್ಗೆ ತನಿಖೆ ನಡೆಸಿದಾಗ ಮೇಲೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನುವುದು ತಿಳಿದಿದೆ.

ಹೀಗಾಗಿ ಅಪ್ರಾಪ್ತೆಯನ್ನು ಪತ್ತೆ ಹಚ್ಚಿ ಆಕೆಯ ಹೇಳಿಕೆ ಹಾಗೂ ತಾಯಿಯ ಹೇಳಿಕೆಗಳನ್ನು ಪಡೆದು, ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+