ಹೊಸ ಭಾರತದಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ: ಫ್ರಾನ್ಸ್ ನಲ್ಲಿ ಮೋದಿ ಮಾತು

ಪ್ಯಾರಿಸ್, ಆಗಸ್ಟ್ 23: "ಹೊಸ ಭಾರತದಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ" ಎಂದು ಫ್ರಾನ್ಸ್ ನಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಪ್ರಧಾನಿ ನರೇಮದ್ರ ಮೋದಿ ಏರುದನಿಯಲ್ಲಿ ಹೇಳಿದರು.

ಫ್ರಾನ್ಸ್, ಯುಎಇ ಮತ್ತು ಬರ್ಹೇನ್ ತ್ರಿರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದರು.

Recommended Video

      ಭಾರತಕ್ಕೆ ಬಂದ ವಿಶೇಷ ಅಥಿತಿ ಬಗ್ಗೆ ಮಾತನಾಡಿದ ಮೋದಿ..! | Oneindia Kannada

      "ಹೊಸ ಭಾರತದಲ್ಲಿ ಕುಟುಂಬ ರಾಜಕಾರಣವಿಲ್ಲ, ಭ್ರಷ್ಟಾಚಾರವಿಲ್ಲ, ಕೊಳ್ಳೆಹೊಡೆಯುವವರಿಲ್ಲ. ಭಾರತ ಮುಂದುವರಿಯುತ್ತಿರುವುದು ಮೋದಿಯಿಂದಲ್ಲ. ಅದರೆ ಮೊದಿ ಸರ್ಕಾರದ ಮೇಲೆ ನಂಬಿಕೆ ಇಟ್ಟು ಮತ್ತೆ ಗೆಲ್ಲಿಸಿದ ಜನರಿಂದ" ಎಂದು ಮೋದಿ ಹೇಳಿದರು.

      In New India No Place To Corruption: PM Narendra Modi In France

      "ಫ್ರಾನ್ಸ್ ಫುಟ್ಬಾಲ್ ಪ್ರೇಮಿಗಳಲ ದೇಶ. ಫುಟ್ಬಾಲ್ ನಲ್ಲಿ ಗೋಲ್ ಎಷ್ಟು ಮುಖ್ಯವೋ, ಒಂದು ದೇಶಕ್ಕೂ ಗೋಲ್ ಅಷ್ಟೇ ಮುಖ್ಯ. ನಾವು ಭಾರತ ಐದು ವರ್ಷಗಳಲ್ಲಿ ಸಾಧಿಸಲು ಸಾಧ್ಯವೇ ಇಲ್ಲ ಎಂಬಂಥ ಗೋಲ್ ಇಟ್ಟುಕೊಂಡು, ಅದನ್ನು ಸಾಧಿಸಿದೆವು" ಎಂದು ಮೋದಿ ತಮ್ಮ ಸರ್ಕಾರದ ಸಾಧನೆಯನ್ನು ಶ್ಲಾಘಿಸಿದರು.

      ಹೊಸ ಭಾರತದಲ್ಲಿ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಭಯೋತ್ಪಾದನೆ, ಹಣ ಕೊಳ್ಳೆಹೊಡೆದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹಿಂದೆಂದೂ ಇಂಥ ಕಠಿಣ ಕ್ರಮಗಳನ್ನು ಈ ಅನಿಷ್ಟಗಳ ವಿರುದ್ಧ ತೆಗೆದುಕೊಂಡಿರಲಿಲ್ಲ. ನಮ್ಮ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ 75 ದಿನಗಳಲ್ಲೇ ನಾವು ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ" ಎಂದು ಮೋದಿ ಹೇಳಿದರು.

      ಗುರುವಾರ ಫ್ರಾನ್ಸ್ ಗೆ ತೆರಳಿದ ಮೋದಿ, ಬಾಲಾಕೋಟ್ ಏರ್ ಸ್ಟ್ರೈಕ್ ನಂತರ ಮೊದಲ ಬಾರಿಗೆ ಪಾಕ್ ವಾಯುಮಾರ್ಗವಾಗಿ ಪ್ರಯಾಣ ಬೆಳೆಸಿದ್ದರು. ಅವರು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬೆಹ್ರೇನ್ ದೇಶಗಳಿಗೂ ಭೇಟಿ ನೀಡಲಿದ್ದು, ನಂತರ ಮತ್ತೆ ಫ್ರಾನ್ಸಿಗೆ ವಾಪಸ್ಸಾಗಿ ಜಿ 7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+