Breaking: ಸೋನಾಲಿ ಫೋಗಟ್‌ರಿಂದ ಬಲವಂತದ ಡ್ರಗ್ಸ್ ಸೇವನೆ-ಪೊಲೀಸರು
ಪಣಜಿ, ಆಗಸ್ಟ್ 26: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾದ ಅವರ ಇಬ್ಬರು ಸಹಚರರು ಪಾರ್ಟಿಯಲ್ಲಿ ಮಾದಕ ದ್ರವ್ಯ ಕುಡಿಯುವಂತೆ ಮಾಡಿದ್ದಾರೆ ಎಂದು ಗೋವಾ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಗೋವಾದ ರೆಸ್ಟೊರೆಂಟ್ ಕಮ್ ನೈಟ್‌ಕ್ಲಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಅವರ ಇಬ್ಬರು ಸಹಚರರು ಬಲವಂತವಾಗಿ ನೀರಿನಲ್ಲಿ "ಕೆಲವು ಮಾದಕ ಪದಾರ್ಥ" ವನ್ನು ಬೆರೆಸಿ ಕುಡಿಯುವಂತೆ ಮಾಡಿದ್ದಾರೆ ಎಂದು ಪೊಲೀಸರು ಭದ್ರತಾ ಕ್ಯಾಮೆರಾದ ದೃಶ್ಯಗಳನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ಇಬ್ಬರೂ ಆರೋಪಿಗಳು ಅಂಜುನಾದಲ್ಲಿನ ರೆಸ್ಟೋರೆಂಟ್‌ನಲ್ಲಿ ಪಾರ್ಟಿಯಲ್ಲಿ ಅವರಿಗೆ ನೀಡಲಾದ ದ್ರವದಲ್ಲಿ "ಕೆಲವು ಮಾದಕ ಪದಾರ್ಥ" ವನ್ನು ಬೆರೆಸುತ್ತಿರುವುದು ಕಂಡುಬಂದಿದೆ ಎಂದು ಪೊಲೀಸ್ ಮಹಾನಿರೀಕ್ಷಕ ಓಂವಿರ್ ಸಿಂಗ್ ಬಿಷ್ಣೋಯ್ ಹೇಳಿದ್ದಾರೆ. ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತ ಆರೋಪಿಗಳಾದ ಸುಧೀರ್ ಸಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಅವರು ಆಗಸ್ಟ್ 22 ರಂದು ಫೋಗಟ್ ಜೊತೆಗೆ ಗೋವಾಕ್ಕೆ ಪ್ರಯಾಣ ಬೆಳೆಸಿದ್ದರು. ಆರೋಪಿಯ ತಪ್ಪೊಪ್ಪಿಗೆಯ ಪ್ರಕಾರ ಉತ್ತರ ಗೋವಾದ ಅಂಜುನಾದಲ್ಲಿರುವ ಕರ್ಲೀಸ್ ರೆಸ್ಟೋರೆಂಟ್‌ನಲ್ಲಿ ಮಾದಕ ದ್ರವ್ಯ ಸೇವನೆಯ ಘಟನೆ ನಡೆದಿದೆ ಎಂದು ಐಜಿಪಿ ತಿಳಿಸಿದ್ದಾರೆ.
ಫೋಗಟ್ ಅವರನ್ನು ಆಗಸ್ಟ್ 23 ರಂದು ಆಸ್ಪತ್ರೆಗೆ ಕರೆತರಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಆಕೆಯ ದೇಹದ ಮೇಲೆ ಅನೇಕ ಗಾಯಗಳು ಪತ್ತೆಯಾಗಿವೆ. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಧ್ಯಪ್ರವೇಶಿಸಿದ ನಂತರ, ಗೋವಾ ಪೊಲೀಸರು ಅಂತಿಮವಾಗಿ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಹರ್ಯಾಣ ಮುಖ್ಯಮಂತ್ರಿ ಖಟ್ಟರ್ ನಿನ್ನೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲು ತಾನು ಮುಕ್ತನಾಗಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ಸೋನಾಲಿ ಫೋಗಟ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆಕೆಯ ಕುಟುಂಬವು ಏನೋ ತಪ್ಪಾಗಿದೆ ಎಂದು ಸಂಪೂರ್ಣ ಸಿಬಿಐ ತನಿಖೆಗೆ ಒತ್ತಾಯಿಸಿದರು.
ಗೋವಾ ಪೊಲೀಸರು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿಗೆ ಸಂಬಂಧಿಸಿದಂತೆ ಆಕೆಯ ಕುಟುಂಬದವರು ನೀಡಿದ ದೂರಿನ ನಂತರ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಫೋಗಟ್ ಅವರ ಸಹೋದರ ರಿಂಕು ಢಾಕಾ ಅವರು ಗೋವಾ ಪೊಲೀಸರಿಗೆ ಔಪಚಾರಿಕ ದೂರು ನೀಡಿದ್ದು, ಆಕೆಯ ಇಬ್ಬರು ಸಹಚರರು ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಟಿಯ ಕುಟುಂಬವು ಅತ್ಯಾಚಾರದ ಆರೋಪಗಳನ್ನು ಮಾಡಿದೆ. ಆದರೆ ಗೋವಾದ ಪೊಲೀಸರು ಇನ್ನೂ ಆ ಆರೋಪಗಳನ್ನು ಆರೋಪಿಗಳ ಮೇಲೆ ಹೊರಿಸಿಲ್ಲ, ಕೊಲೆ ಪ್ರಕರಣ ಎಂದು ದಾಖಲಿಸಿಕೊಂಡಿದ್ದಾರೆ. ಮುಂದಿನ ತನಿಖೆ ಬಾಕಿ ಇದೆ.
2008 ರಿಂದ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಸೋನಾಲಿ ಫೋಗಟ್ 2019 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋಲು ಕಂಡಿದ್ದರು. ಸೋನಾಲಿ ಫೋಗಟ್ ಅವರು ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಅವರಿಗೆ ಹರಿಯಾಣ, ದೆಹಲಿ, ಚಂಡೀಗಢದ ನಿಗದಿತ ಪ್ರವಾಸ ವಿಭಾಗದ ಜವಾಬ್ದಾರಿಯನ್ನು ಸಹ ನೀಡಲಾಯಿತು. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಅವರು ಆಯ್ಕೆಯಾಗಿದ್ದರು. ಮಧ್ಯಪ್ರದೇಶ, ಜಾರ್ಖಂಡ್ ನಲ್ಲಿ ಆದಿವಾಸಿಗಳ ಪರ ಕೆಲಸ ಮಾಡಿದ್ದರು.
ಸೋನಾಲಿ ಕಳೆದ 15 ವರ್ಷಗಳಿಂದ ಬಿಜೆಪಿ ನಾಯಕಿಯಾಗಿದ್ದರು. ಆಕೆಗೆ ನ್ಯಾಯ ದೊರಕಿಸಿಕೊಡಲು ಸಹಾಯ ಮಾಡುವಂತೆ ನಾವು ಪ್ರಧಾನಿಯವರಲ್ಲಿ ಮನವಿ ಮಾಡುತ್ತೇವೆ ಎಂದು ಆಕೆಯ ಸಹೋದರ ಹೇಳಿದರು.












Click it and Unblock the Notifications