ಕಾನಕೋಣದಲ್ಲಿ ಕಿಡಿ ಹಚ್ಚಿಸಿತು ಪೂನಂ ಪಾಂಡೆ ಅರೆಬೆತ್ತಲೆ ವಿಡಿಯೋ ಚಿತ್ರೀಕರಣ
ಕಾರವಾರ, ನವೆಂಬರ್ 04: ಇತ್ತೀಚೆಗೆ ಗೋವಾದ ಕಾನಕೋಣದ ಚಾಪೋಲಿ ಡ್ಯಾಮ್ ಬಳಿ ಬಾಲಿವುಡ್ ಮಾದಕ ನಟಿ ಪೂನಂ ಪಾಂಡೆ ಅವರ ವಿಡಿಯೋವೊಂದನ್ನು ಶೂಟ್ ಮಾಡಲಾಗಿದ್ದು, ಇದು ರಾಜಕೀಯ ತಿರುವು ಪಡೆದುಕೊಂಡು ವಿವಾದಕ್ಕೀಡಾಗಿದೆ. ಗೋವಾ ಪೊಲೀಸರು ಬುಧವಾರ ಪೂನಂ ಪಾಂಡೆ ವಿರುದ್ಧ ಎಫ್ ಐಆರ್ ಅನ್ನೂ ದಾಖಲಿಸಿದ್ದಾರೆ.
ತನ್ನ ಮಾದಕ ವಿಡಿಯೋ, ಫೋಟೊಶೂಟ್ ಗಳಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಪೂನಂ ಪಾಂಡೆ ತಿಂಗಳ ಹಿಂದೆ ಗೋವಾದ ಕಾನಕೋಣಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಾನಕೋಣದ ವಿವಿಧ ಬೀಚ್ ಗಳಲ್ಲಿ ತಿರುಗಾಡಿ ಫೋಟೊ ಶೂಟ್ ನಡೆಸಿರುವ ಅವರು, ಫೋಟೊಗಳನ್ನು ಟ್ವಿಟರ್ ನಲ್ಲಿ ಕೂಡ ಹಂಚಿಕೊಂಡಿದ್ದಾರೆ. ಈ ನಡುವೆ ಚಾಪೋಲಿ ಡ್ಯಾಮ್ ಬಳಿ ವಿಡಿಯೋವೊಂದರ ಚಿತ್ರೀಕರಣದಲ್ಲಿ ಕೂಡ ಭಾಗಿಯಾಗಿದ್ದಾರೆ. ಮುಂದೆ ನೋಡಿ...

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ
ಈ ವಿಡಿಯೋದಲ್ಲಿ ಪೂನಂ ಪಾಂಡೆ ಅರೆಬೆತ್ತಲೆಯಾಗಿದ್ದು, ಒಂದು ನಿಮಿಷದ ಪೂನಂ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ ಸದ್ಯ ಗೋವಾ ಸರ್ಕಾರದ ವಿರುದ್ಧದ ಸ್ಥಳೀಯರು ಹಾಗೂ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ.
ಕಾನಕೋಣದ ನಿರ್ಬಂಧಿತ ಪ್ರದೇಶವಾಗಿರುವ ಹಾಗೂ ಸರ್ಕಾರಿ ಆಸ್ತಿಯಾಗಿರುವ ಚಾಪೋಲಿ ಅಣೆಕಟ್ಟಿನ ಬಳಿ ವಿಡಿಯೋವನ್ನು ಚಿತ್ರೀಕರಿಸಲಾಗಿರುವ ಕುರಿತು ಗೋವಾ ಫಾರ್ವರ್ಡ್ ಪಾರ್ಟಿ ಪೊಲೀಸ್ ದೂರನ್ನು ಕೂಡ ದಾಖಲಿಸಿದೆ.

"ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಉತ್ತೇಜನವಾಗುತ್ತದೆ"
ಈ ವಿಡಿಯೋ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಉತ್ತೇಜನ ನೀಡುವಂತಿದ್ದು, ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕಾನಕೋಣಕ್ಕೆ ಅಪಮಾನವಾಗಿದೆ. ಈ ವಿಡಿಯೋವನ್ನು ಸರ್ಕಾರಿ ಆಸ್ತಿಯಲ್ಲಿ ಹೇಗೆ ಚಿತ್ರೀಕರಿಸಲಾಗಿದೆ ಮತ್ತು ಯಾರ ಅನುಮತಿಯೊಂದಿಗೆ ಚಿತ್ರಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗೋವಾ ಫಾರ್ವರ್ಡ್ ಪಾರ್ಟಿ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.

ಪೂನಂ ಪಾಂಡೆ ವಿರುದ್ಧ ಎಫ್ ಐಆರ್ ದಾಖಲು
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಗೋವಾದ ಎಂಟರ್‌ಟೈನ್ ಮೆಂಟ್ ಸೊಸೈಟಿ ಸಾಮಾನ್ಯವಾಗಿ ಇಂಥವುಗಳಿಗೆ ಅನುಮತಿ ನೀಡುತ್ತದೆ. ಚಾಪೋಲಿ ಅಣೆಕಟ್ಟು ಸಚಿವ ಫಿಲಿಪ್ ನೆರಿ ರೊಡ್ರಿಗಸ್ ನೇತೃತ್ವದ ರಾಜ್ಯ ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಕಡಲ ತೀರಗಳಿಗೆ ಹೆಸರುವಾಸಿಯಾಗಿರುವ ರಾಜ್ಯವನ್ನು ಬಿಜೆಪಿ 'ಅಶ್ಲೀಲ ತಾಣ'ವನ್ನಾಗಿ ಪರಿವರ್ತಿಸಿದೆ. ಈ ವಿಡಿಯೋಗೆ ಸಂಬಂಧಿಸಿದಂತೆ ಗೋವಾ ಚಿತ್ರಣವನ್ನು ಕೆಡಿಸುವ ಮುಖ್ಯಮಂತ್ರಿ ಸಾವಂತ್, ಜಲಸಂಪನ್ಮೂಲ ಸಚಿವ ಫಿಲಿಪ್ ನೆರಿ ಮತ್ತು ಪೂನಂ ಪಾಂಡೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಗೋವಾ ಫಾರ್ವರ್ಡ್ ಪಕ್ಷದ ಮುಖಂಡ ದುರ್ಗದಾಸ್ ಕಾಮತ್ ಒತ್ತಾಯಿಸಿದ್ದಾರೆ.
ಗೋವಾ ಪೊಲೀಸರು ಪೂನಂ ಪಾಂಡೆ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
"ಪೋರ್ನ್ ಡೆಸ್ಟಿನೇಷನ್ ಮಾಡಲು ಹೊರಟಿದೆಯೇ?"
ಈ ಮೊದಲು ನಮ್ಮಲ್ಲಿ ಅಶ್ಲೀಲ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಓರ್ವ ಮಂತ್ರಿ ಇದ್ದರು. ಈಗ ನಮ್ಮಲ್ಲಿ ಇನ್ನೊಬ್ಬ ಮಂತ್ರಿ ಇದ್ದು, ಅವರ ಇಲಾಖೆಯು ಅಶ್ಲೀಲ ವಿಡಿಯೋ ತಯಾರಿಕೆಯಲ್ಲಿ ತೊಡಗಿದೆ. ಬಿಜೆಪಿ ನಮ್ಮ ರಾಜ್ಯವನ್ನು ಪೋರ್ನ್ ಡೆಸ್ಟಿನೇಶನ್ ಎಂದು ಪ್ರಚಾರ ಮಾಡುತ್ತಿದೆಯೇ? ಕಾಮತ್ ಕಿಡಿಕಾರಿದ್ದಾರೆ.
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ












Click it and Unblock the Notifications