ಗೋವಾದಲ್ಲಿ ಬಿಜೆಪಿ ಶಾಸಕರಿಗೆ ಕೊರೊನಾವೈರಸ್ ಸೋಂಕು

ಪಣಜಿ, ಜುಲೈ 1: ಕೊರೊನಾವೈರಸ್ ಸೋಂಕು ಹರಡದಂತೆ ವಿಧಿಸಿದ್ದ ಲಾಕ್ಡೌನ್ ಸಡಿಲಗೊಂಡು ಇದೀಗ ಅನ್ ಲಾಕ್ 2.0 ಜಾರಿಯಲ್ಲಿದೆ. ಗೋವಾದ ಬಿಜೆಪಿ ಶಾಸಕರೊಬ್ಬರಿಗೆ ಕೊರೊನಾವೈರಸ್ ಸೋಂಕು ತಗುಲಿರುವ ಸುದ್ದಿ ಬಂದಿದೆ.

ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಗೋವಾ ಜೂನ್ ತಿಂಗಳಲ್ಲೇ ಪ್ರವಾಸಿಗರಿಗೆ ಬಾಗಿಲು ತೆರೆದಿತ್ತು. ಆದರೆ, ಇತರೆ ರಾಜ್ಯಗಳಂತೆ ಗೋವಾದಲ್ಲೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಮಾರ್ಗೋವಾದ ಇಎಸ್ಐ ಆಸ್ಪತ್ರೆಯಲ್ಲಿರುವ ಕೊವಿಡ್ 19 ಕೇಂದ್ರದಲ್ಲಿ ಬಿಜೆಪಿ ಶಾಸಕರನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗೋವಾ ಆರೋಗ್ಯ ಇಲಾಖೆ ತಿಳಿಸಿದೆ. ಶಾಸಕರ ಪರೀಕ್ಷೆ ವರದಿಗಳು ಮಂಗಳವಾರ ಸಂಜೆ ಬಂದಿದ್ದು, ಕೊವಿಡ್ 19 ಪಾಸಿಟಿವ್ ಎಂದು ತಿಳಿದು ಬಂದಿದೆ.

Goa BJP MLA tests positive for coronavirus

ಕಳೆದ ತಿಂಗಳು ಮಾಜಿ ಆರೋಗ್ಯ ಸಚಿವರೊಬ್ಬರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಸದ್ಯ ಅವರಿಗೂ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗೋವಾದಲ್ಲಿ 1315 ಕೊವಿಡ್ 19 ಪ್ರಕರಣಗಳು ದಾಖಲಾಗಿದ್ದು, 478 ಮಂದಿ ಗುಣಮುಖರಾಗಿದ್ದು, 3 ಮಂದಿ ಮೃತರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+