ಗೋವಾ ಚುನಾವಣೆ ಪ್ರಚಾರದ ಕಾವು ಹೆಚ್ಚಿಸಿದ ಮೋದಿ

ಪಣಜಿ, ಫೆಬ್ರವರಿ 10; ಗೋವಾ ವಿಧಾನಸಭೆ ಚುನಾವಣೆ ಫೆಬ್ರವರಿ 14ರಂದು ನಡೆಯಲಿದೆ. ರಾಜ್ಯದಲ್ಲಿ ಚುನಾವಣಾ ಪ್ರಚಾರದ ಕಾವು ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಗುರುವಾರ ಪ್ರಚಾರ ನಡೆಸುವ ಮೂಲಕ ಪ್ರಚಾರಕ್ಕೆ ಮತ್ತಷ್ಟು ರಂಗು ತುಂಬಿದರು.

ಗೋವಾ ರಾಜ್ಯದ ಮಾಪೂಸಾದಲ್ಲಿ ಗುರುವಾರ ನರೇಂದ್ರ ಮೋದಿ ಚುನಾವಣೆ ಪ್ರಚಾರ ಸಭೆ ನಡೆಸಿದರು. "ನಾನು ಗೋವಾಕ್ಕೆ ಆಗಮಿಸಿದಾಗೆಲ್ಲ ಮನೋಹರ್ ಪರಿಕ್ಕರ್ ಅವರನ್ನು ಕಳೆದುಕೊಳ್ಳುತ್ತೇನೆ" ಎಂದು ಮೋದಿ ನೆನಪು ಮಾಡಿಕೊಂಡರು.

Recommended Video

      Narendra Modi UP Speech : ಮುಸ್ಲಿಂ ಮಹಿಳೆಯರ ಹಕ್ಕಿನ ರಕ್ಷಣೆಗೆ BJP ಸದಾ ಸಿದ್ಧ | Oneindia Kannada

      2013ರ ಚುನಾವಣೆ ಪ್ರಚಾರವನ್ನು ನೆನಪಿಸಿಕೊಂಡ ಮೋದು, "ಪ್ರಧಾನಿ ಹುದ್ದೆಗೆ ನನ್ನ ಪ್ರಯಾಣ 2013ರ ಜೂನ್‌ನಲ್ಲಿ ಗೋವಾದಿಂದಲೇ ಆರಂಭವಾಯಿತು" ಎಂದು ನೆನಪಿಸಿಕೊಂಡರು.

      For Us Goa Means Governance Opportunities And Aspirations Says Modi

      "ಒಂದು ಚುನಾವಣಾ ಪ್ರಚಾರ ಸಭೆಯಲ್ಲಿ ನಾನು ಕಾಂಗ್ರೆಸ್ ಮುಕ್ತ ಭಾರತ ಎಂಬ ಕರೆ ಕೊಟ್ಟೆ. ಇಂದು ಇದು ದೇಶದ ಜನರ ಜನರ ಪಣವಾಗಿದೆ. ನಮಗೆ ಗೋವಾ ಎಂದರೆ ಆಡಳಿತ, ಅವಕಾಶ ಮತ್ತುಆಕಾಂಕ್ಷೆಗಳು" ಎಂದು ಮೋದಿ ಹೇಳಿದರು.

      "ಬಿಜೆಪಿ ಸರ್ಕಾರ ಮಾಡಿದ ಕೆಲಸಗಳು ಬಹಳ ಹಿಂದಿನಿಂದಲೂ ಅಗತ್ಯವಿದ್ದವು. ಗೋವಾದ ಮೂಲಸೌಕರ್ಯ ಅಭಿವೃದ್ಧಿಗಾಗಿ ಬಿಜೆಪಿ ಹೊಸ ಪಥವನ್ನು ಆರಂಭಿಸಿತು. 100ಕ್ಕೂ ಹೆಚ್ಚು ಉಪ ನಗರ ವಿದ್ಯುತ್ ಚಾಲಿತ ಬಸ್‌ಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ. ಗೋವಾ ಪ್ರವಾಸೋದ್ಯಮವು ಅಭಿವೃದ್ಧಿಗೊಳ್ಳುತ್ತಾ ಭಾರತದ ಆರ್ಥಿಕತೆಗೆ ಸಹಕಾರಿಯಾಗಿದೆ" ಎಂದು ತಿಳಿಸಿದರು.

      ಪ್ರಧಾನಿ ನರೇಂದ್ರ ಮೋದಿ ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು, "ಹಿಂದಿನ ಸರ್ಕಾರಗಳು ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಲಿಲ್ಲ. ಕೇವಲ 5-6 ದಶಕಗಳ ಕಾಲ ಆಡಳಿತ ನಡೆಸಿದವು" ಎಂದು ಮೋದಿ ಆರೋಪಿಸಿದರು.

      "ಕೇಂದ್ರದಲ್ಲಿಯೂ ಸಹ ಅನೇಕ ಸರ್ಕಾರಗಳು ಅಧಿಕಾರಕ್ಕೆ ಬಂದವು. ಆದರೆ ಯಾವುದೇ ಸರ್ಕಾರವು ಗೋವಾದ ಮಹತ್ವವನ್ನು ಅರಿತುಕೊಂಡಿದೆಯೇ?. ಬಿಜೆಪಿ ಆ ಸರ್ಕಾರಗಳಿಗೆ ಗೋವಾ ನೆನಪಾಗುವುದು ಪ್ರವಾಸ ಮತ್ತು ಮೋಜು ಮಾಡಲು ಮಾತ್ರ" ಎಂದು ಟೀಕಿಸಿದರು.

      "ಬಿಜೆಪಿ ಆಡಳಿತದಲ್ಲಿ ಜಾರಿಗೊಳಿಸಿದ ಯೋಜನೆಗಳಿಂದ ರಾಜ್ಯಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ವರ್ಷದ 365 ದಿನವೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಕೇವಲ 25 ಲಕ್ಷ ಪ್ರವಾಸಿಗರು ಬರುತ್ತಿದ್ದರು. ಆದರೆ ಇಂದು ವರ್ಷಕ್ಕೆ 80 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ" ಎಂದರು.

      "ಗೋವಾದಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡದಿದ್ದರೆ, ಹೊಸ ಸೌಲಭ್ಯಗಳನ್ನು ಒದಗಿಸದಿದ್ದರೆ, ಪ್ರವಾಸಿಗರು ಇಲ್ಲಿಗೆ ಬರಲು ಇಷ್ಟಪಡುತ್ತಿರಲಿಲ್ಲ. ಅದಕ್ಕಾಗಿಯೇ ಬಿಜೆಪಿ ಸರ್ಕಾರವು ಇಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಾಡುವ ಅಭಿಯಾನವನ್ನು ಪ್ರಾರಂಭಿಸಿದೆ" ಎಂದು ಹೇಳಿದರು.

      ಚುನಾವಣಾ ಪ್ರಚಾರಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ದೇವ್ ಬೋಡ್ಗೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

      40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಗೋವಾದಲ್ಲಿ ಸದ್ಯ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿದೆ. 2017ರ ಚುನಾವಣೆಯಲ್ಲಿ ಬಿಜೆಪಿ ಕೇವಲ 13 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು.

      ರಾಜನಾಥ್ ಸಿಂಗ್, ಅಮಿತ್ ಶಾ ಸೇರಿದಂತೆ ವಿವಿಧ ನಾಯಕರು ಗೋವಾದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಕರ್ನಾಟಕದ ವಿವಿಧ ಬಿಜೆಪಿ ನಾಯಕರು ಸೇರಿದಂತೆ ಹಲವಾರು ನಾಯಕರು ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

      40 ಸದಸ್ಯ ಬಲದ ಗೋವಾ ವಿಧಾನಸಭೆ ಚುನಾವಣೆಗೆ 301 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್, ಬಿಜೆಪಿ, ಎಎಪಿ, ಟಿಎಂಸಿ, ಎನ್‌ಸಿಪಿ, ಗೋವಾದ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+