ವಿಡಿಯೋ ವೈರಲ್; ಗೋವಾದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ

ಪಣಜಿ, ಫೆಬ್ರವರಿ 25: ಗೋವಾದಲ್ಲಿ ಪದೇ ಪದೇ ಕನ್ನಡಿಗರ ಮೇಲೆ ದಬ್ಬಾಳಿಕೆ ಮುಂದುವರಿಯುತ್ತಲೇ ಇದೆ. ಪ್ರವಾಸಕ್ಕೆಂದು ತೆರಳಿದ್ದ ಕನ್ನಡಿಗರು ಬಯಲಲ್ಲಿ ಅಡುಗೆ ತಯಾರಿಸಿದ್ದಕ್ಕಾಗಿ ಅವರ ಮೇಲೆ ಗೋವಾ ಪುಂಡರು ಅವಾಚ್ಯ ಶಬ್ದಗಳಿಂದ ನಿಂದಿಸಿ‌, ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.

ಬಾಗಲಕೋಟೆ ಮೂಲದ ಯುವಕರ ತಂಡ ಗೋವಾಕ್ಕೆ ಪ್ರವಾಸಕ್ಕೆ ತೆರಳಿತ್ತು. ಈ ವೇಳೆ ಒಂದು ಬಯಲಲ್ಲಿ ಚಿಕ್ಕ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಅಡುಗೆ ಮಾಡಿಕೊಳ್ಳುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಕೆಲ ಗೋವಾದ ಪುಂಡರು, ನಿಮಗಿಲ್ಲ ಅಡುಗೆ ಮಾಡಲು ಅವಕಾಶ ಕೊಟ್ಟಿದ್ಯಾರು? ಇದೇನು ನಿಮ್ಮ ಅಪ್ಪನ ಮನೆಯಾ? ಎಂದೆಲ್ಲ ಅವಾಚ್ಯವಾಗಿ ನಿಂದಿಸಿದ್ದಾರೆ.

ಕನ್ನಡ‌ ಬಿಟ್ಟು ಬೇರೆ ಭಾಷೆ ಬರಲ್ಲ, ಈಗ ಹೊರಡುತ್ತೇವೆ ಎಂದು ಎಷ್ಟೇ ಗೋಗರೆದರೂ ಹಿಂದಿಯಲ್ಲಿ ಗೋವನ್ನರು ಬೆದರಿಸಿದ್ದಾರೆ. ಗೋವಾದಲ್ಲಿ ಹೋಟೆಲ್ ಇಲ್ಲವಾ? ಇಲ್ಯಾಕೆ ಅಡುಗೆ ಮಾಡುತ್ತೀರಿ? ಎಂದೆಲ್ಲ ಬಾಯಿಗೆ ಬಂದಂತೆ ಬೈಯ್ದು ನಿಂದಿಸಿದ್ದಾರೆ.

 Attack On Kannadigas In Goa Video Viral

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಹಲವರು ಗೋವನ್ನರ ವರ್ತನೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಈ ಕುರಿತ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಕನ್ನಡಿಗರ ಮೇಲೆ ಇದೆಂತಹ ದಬ್ಬಾಳಿಕೆ! ಅವರೇನು ಮಾಡಬಾರದ್ದು ಮಾಡಿದ್ರೆ, ಊಟ ಮಾಡೋಕೆ ಕೂತಿದ್ರು ಇದು ತಪ್ಪೇ? ಹಿಂದಿ ಬೇರೆ ಮಾತಾಡ್ಬೇಕಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೈ ಮುಗಿದು, ಕಾಲಿಗೆ ಬೀಳುತ್ತಿದ್ರು ಕರುಣೆ ಇಲ್ಲವೇ? ಗೋವಾದಲ್ಲಿರೋ ಸರ್ಕಾರಕ್ಕೆ ಇದೆಲ್ಲಾ ಕಣ್ಣಿಗೆ ಕಾಣುತ್ತಿಲ್ಲವೇ? ನಾವೆಲ್ಲ ಭಾರತೀಯರು ಅಂತ ಡೈಲಾಗ್ ಹೊಡೆಯೋರು ಬನ್ನಿ ಮಾತಾಡಿ ಈಗ. ಗೋವಾದಲ್ಲಿ ಕನ್ನಡಿಗರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ನೋಡಿ. ಗೋವಾದ ಬಿಜೆಪಿ ಸರ್ಕಾರ ಏನು ಮಾಡುತ್ತಿದೆ?. ಬೇಕಿದ್ರೆ ಅವ್ರಿಗೆ ನೀರು ಅಥವಾ ಅವಶ್ಯಕತೆ ಇರೋ ಸಾಮಗ್ರಿ ಕೊಟ್ಟು ಉಪಚರಿಸಿ ಕಳಿಸುವೆವು, ಇದು ಕನ್ನಡಿಗರ ಗುಣ. ಆದ್ರೆ ಇಲ್ಲಿ ಕನ್ನಡಿಗ ಕೈ ಮುಗಿದು ಕಾಲಿಗೆ ಬೀಳುತ್ತಿದ್ರು ಕರುಣೆ ತೋರುತ್ತಿಲ್ಲಾ ಎಂದು ಕಿಡಿಕಾರಿದ್ದಾರೆ.

ಕಡ್ಡಾಯವಾಗಿ ಹೋಟೆಲ್ ಅಲ್ಲೇ ಊಟ ತೆಗೆದುಕೊಳ್ಳಬೇಕು ಅನ್ನೋದು ಏನಾದ್ರು ನಿಯಮ ಇದಿಯೇ?. ಅವರಿಷ್ಟ ಎಲ್ಲೋ ಒಂದು ಕಡೆ ಅಡುಗೆ ಮಾಡಿ ಊಟ ಮಾಡಿ ಹೋಗ್ತಾರೆ, ಅದಕ್ಕೆ ಈ ದಬ್ಬಾಳಿಕೆ ನಾ? ಎಂದವರು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+