ನೋಯ್ಡಾ ಪತ್ರಕರ್ತೆ ಸಾವು ಪ್ರಕರಣಕ್ಕೆ ಹೊಸ ತಿರುವು
ನೋಯ್ಡಾ, ಡಿಸೆಂಬರ್ 18: ನೋಯ್ಡಾದಲ್ಲಿ ಇತ್ತೀಚೆಗಷ್ಟೇ ಮೃತರಾದ ಪತ್ರಕರ್ತೆ ರಾಧಿಕಾ ಕೌಶಿಕ್ ಅವರ ಸಾವಿಗೆ ಹೊಸ ತಿರುವು ಸಿಕ್ಕಿದೆ.
ರಾಜಸ್ಥಾನ ಮೂಲದವರಾದ ರಾಧಿಕಾ ಕೌಶಿಕ್ ಖಾಸಗಿ ಚಾನೆಲ್ ವೊಂದರಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ನೋಯ್ಡಾದ ತಮ್ಮ ಅಪಾರ್ಟ್ಮೆಂಟಿನ ನಾಲ್ಕನೇ ಮಹಡಿಯಿಂದ ಬಿದ್ದು, ಡಿಸೆಂಬರ್ 15 ರಂದು ಅವರು ಮೃತರಾಗಿದ್ದರು.
ಬೆಳಿಗ್ಗೆ 3:30 ರ ಸುಮಾರಿಗೆ ಕುಡಿದ ಮತ್ತಿನಲ್ಲಿದ್ದ ರಾಧಿಕಾ ಅವರು ಮನೆಯ ಬಾಲ್ಕನಿಯಲ್ಲಿ ನಿಂತಿದ್ದರು. ಅವರೊಂದಿಗೆ ಅವರ ಸಹೋದ್ಯೋಗಿಯೂ ಇದ್ದರು. ಸಹೋದ್ಯೋಗಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ, ತಾವು ಬಾತ್ ರೂಮಿನಲ್ಲಿದ್ದ ಸಮಯದಲ್ಲಿ ರಾಧಿಕಾ ಅವರು ಬಾಲ್ಕನಿಗೆ ಬಂದು ಆಯತಪ್ಪಿ ಬಿದ್ದಿದ್ದಾರೆ. ಅವರು ಕುಡಿದ ಮತ್ತಿನಲ್ಲಿದ್ದರು ಎಂದು ಸಹೋದ್ಯೋಗಿ ಹೇಳಿಕೆ ನೀದಿದ್ದರು.

ಆದರೆ ಅಪಾರ್ಟ್ಮೆಂಟಿನ ಭದ್ರತಾ ಸಿಬ್ಬಂದಿ ಹೇಳುವ ಪ್ರಕಾರ ಬಾಲ್ಕನಿಯಲ್ಲಿ ರಾಧಿಕಾ ಅವರೊಂದಿಗೆ ಅವರ ಸಹೋದ್ಯೋಗಿಯೂ ಇದ್ದರು. ರಾಧಿಕಾ ಬೀಳುವ ಸಮಯದಲ್ಲಿ ಬಾತ್ ರೂಮಿನಲ್ಲಿದ್ದೆ ಎಂಬ ಸಹೋದ್ಯೋಗಿಯ ಹೇಳಿಕೆ ಸುಳ್ಳು ಎಂದಿದ್ದೆ. ಭದ್ರತಾ ಸಿಬ್ಬಂದಿಯ ಹೇಳಿಕೆಯನ್ನು ಪರಿಗಣಿಸಿದ ಪೊಲೀಸರು ಸಹೋದ್ಯೋಗಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ರಾಧಿಕಾ ಅವರು ಕುಡಿದ ಮತ್ತಿನಲ್ಲಿದ್ದಿದ್ದು ನಿಜವೇ ಎಂಬ ಕುರಿತೂ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ. ಅವರದು ಸಹಜ ಸಾವಲ್ಲ, ಕೊಲೆ ಎಂದು ಆಕೆಯ ಕುಟುಂಬಸ್ಥರೂ ದೂರಿದ್ದಾರೆ.












Click it and Unblock the Notifications