ನೋಯ್ಡಾದಲ್ಲಿ ಗನ್ ತೋರಿಸಿ ಕಾರು ಕದ್ದುಕೊಂಡು ಓಡಿದ ಅಪರಿಚಿತರು

ನೋಯ್ಡಾ, ಮಾರ್ಚ್ 15: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಅಪರಿಚಿತರಿಬ್ಬರು ಗನ್ ತೋರಿಸಿ ಇಂಜಿನಿಯರ್ ಕಾರನ್ನು ಕದ್ದುಕೊಂಡು ಹೋದ ಘಟನೆ ಭಾನುವಾರ ಸಂಜೆ ಆರು ಗಂಟೆ ವೇಳೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಗ್ರೇಟರ್ ನೋಯ್ಡಾ ನಿವಾಸಿ ನಿಶಾಂತ್ ಎಂಬುವವರು ಭಾನುವಾರ ಸಂಜೆ ಸೂರಜ್ ಪುರ್ ಪ್ರದೇಶದಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ಶಾಪಿಂಗ್ ಮಾಡುವುದಕ್ಕಾಗಿ ತೆರಳಿದ್ದರು. ಈ ವೇಳೆ ಅಪರಿಚಿತ ದುಷ್ಕರ್ಮಿಗಳು ಗನ್ ತೋರಿಸಿ ಅವರ ಕಾರನ್ನು ಕದ್ದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ ಎಂದು ಗ್ರೇಟರ್ ನೋಯ್ಡಾ ಡಿಸಿಪಿ ಹರೀಶ್ ಚಂದರ್ ತಿಳಿಸಿದ್ದಾರೆ.

ಕಾರು ಕಳೆದುಕೊಂಡ ಸಂತ್ರಸ್ತರಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಎಷ್ಟು ಜನ ಆರೋಪಿಗಳು ಭಾಗಿಯಾಗಿದ್ದರು ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ಆರೋಪಿಗಳಿದ್ದರು ಎಂದು ಡಿಸಿಪಿ ಹರೀಶ್ ಚಂದರ್ ಮಾಹಿತಿ ನೀಡಿದ್ದಾರೆ.

Engineer Car Theft Under Gunpoint At Greater Noida

ಕಾರು ಕಳೆದುಕೊಂಡವರು ಹೇಳುವುದೇನು?:

ಶಾಪಿಂಗ್ ಮುಗಿಸಿಕೊಂಡು ಕಾರಿನ ಬಳಿ ಆಗಮಿಸಿದ ನಿಶಾಂತ್ ಅವರ ಬಳಿ ಧಾವಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಕಾರ್ ಕೀಲಿ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಗನ್ ತೋರಿಸಿ ಅವರಿಂದ ಕಾರಿನ ಕೀಲಿ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ನಿಶಾಂತ್ ಪತ್ನಿ ಹಾಗೂ ಮಗು ಘಟನೆಯ ಬಗ್ಗೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+