ಇನ್ಮುಂದೆ ಪೆಟ್ರೋಲ್ ಕೂಡ ಹೋಮ್ ಡಿಲಿವರಿ ಪಡೆಯಬಹುದು!
ಮೊದಲೇ ಬುಕಿಂಗ್ ಮಾಡುವ ಗ್ರಾಹಕರಿಗೆ ಪೆಟ್ರೋಲ್ ಅನ್ನು ಹೋಮ್ ಡಿಲಿವರಿ ಮಾಡುವ ವಿನೂತನ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ!
ನವದೆಹಲಿ, ಏಪ್ರಿಲ್ 22: ಪೆಟ್ರೋಲ್ ಬಂಕ್ ಮುಂದೆ ಕ್ಯೂ ನಿಂತು ಪರದಾಡಿದ್ದೀರಾ? ಹೆದರಬೇಡಿ, ಇನ್ಮುಂದೆ ನಿಮಗೆ ಈ ಕಷ್ಟ ಇರೋಲ್ಲ! ಯಾಕಂದ್ರೆ ಮೊದಲೇ ಬುಕಿಂಗ್ ಮಾಡುವ ಗ್ರಾಹಕರಿಗೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಹೋಮ್ ಡಿಲಿವರಿ ಮಾಡುವ ವಿನೂತನ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ!

ದೇಶದಾದ್ಯಂತ ಈಗಾಗಲೇ ಪ್ರತಿದಿನ 59,595 ಪೆಟ್ರೋಲ್ ಬಂಕ್ ಗಳಲ್ಲಿ 3.5 ಕೋಟಿಗೂ ಹೆಚ್ಚು ಜನ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುತ್ತಾರೆ.
“Options being explored where petro products may be door delivered to consumers on pre booking” @dpradhanbjp (1/2)
— Petroleum Ministry (@PetroleumMin) April 21, 2017
ಇದರಿಂದ ಪ್ರತಿದಿನ ಪೀಕ್ ಅವರ್ ನಲ್ಲಿ ಪೆಟ್ರೊಲ್ ಬಂಕ್ ಮುಂದೆ ಜನಜಂಗುಳಿ, ವಾಹನ ಜಂಗುಳಿ ಮಾಮೂಲೆನ್ನಿಸಿದೆ. ಹಲವೆಡೆ ಇದೇ ಟ್ರಾಫಿಕ್ ಸಮಸ್ಯೆಗೂ ನಾಂದಿ ಹಾಡಿದೆ.
“This would help consumers avoid spending excessive time and long queues at fuel stations” @dpradhanbjp (2/2)
— Petroleum Ministry (@PetroleumMin) April 21, 2017
ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಹೋಮ್ ಡಿಲಿವರಿ ಕೊಡುವ ಯೋಜನೆ ಸದ್ಯದಲ್ಲೇ ಜಾರಿಗೆ ಬರಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಇಲಾಖೆ ತಿಳಿಸಿದೆ.












Click it and Unblock the Notifications