ಪತಿ ಝೂಮ್ ಮೀಟಿಂಗ್‌ನಲ್ಲಿರುವಾಗ ಚುಂಬಿಸಲು ಬಂದ ಪತ್ನಿ: ವಿಡಿಯೋ ವೈರಲ್

ನವದೆಹಲಿ,ಫೆಬ್ರವರಿ 21: ಮನೆಯಿಂದಲೇ ಕೆಲಸ ಮಾಡುವಾಗ ಸಾಮಾನ್ಯವಾಗಿ ಕೆಲವು ಅನಿರೀಕ್ಷಿತ ಘಟನೆಗಳು ನಡೆದೇ ಹೋಗುತ್ತವೆ.

ಹಾಗೆಯೇ ಕೆಲವೊಮ್ಮೆ ಮೀಟಿಂಗ್ ವೇಳೆಯಲ್ಲಿ ಮನೆಯವರು ಮಾತನಾಡುವುದು, ನಮ್ಮ ಬಳಿ ಏನೋ ಹೇಳುವುದು, ಟಿವಿ ಸೌಂಡ್, ಮಕ್ಕಳ ಅಳು ಹೀಗೆ ಹಲವು ಅಡಚಣೆಗಳಾಗುವುದು ಸಹಜ.

ಝೂಮ್ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದ ತನ್ನ ಪತಿಗೆ ಮುತ್ತಿಕ್ಕಲು ಬಂದ್ ಮಡದಿಯೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಉದ್ಯಮಿ ಹರ್ಷ ಎಂಬುವವರು ಶೇರ್ ಮಾಡಿದ್ದಾರೆ.

Woman Tries To Kiss Husband During Zoom Call Meeting. Viral Video

ಮೀಟಿಂಗ್ ನಡೆಯುತ್ತಿದ್ದ ವೇಳೆ ಪತಿ ಜಿಡಿಪಿಗೆ ದೊಡ್ಡ ಮಟ್ಟದಲ್ಲಿ ನೆರವಾಗುವ ಎನ್ನುತ್ತಿರುವಂತೆಯೇ ಕೋಣೆಗೆ ಪ್ರವೇಶಿಸುವ ಆತನ ಪತ್ನಿ ತನ್ನ ಪತಿಗೆ ಕಿಸ್ ಮಾಡಲೆಂದೇ ಬೆಂಡ್ ಆಗುತ್ತಲೇ, ಎಂತಹ ನಾನ್‌ಸೆನ್ಸ್ ಮಾತನಾಡುತ್ತಿರುವೆ, ಕ್ಯಾಮರಾ ಆನ್ ಇದೆ ಎನ್ನುತ್ತಲೇ ಆಕೆಯನ್ನು ಬದಿಗೆ ತಳ್ಳುವುದನ್ನು ಗಮನಿಸಬಹುದಾಗಿದೆ.

ವರ್ಷದ ಪತ್ನಿಯನ್ನಾಗಿ ಈ ಮಹಿಳೆಯನ್ನು ನಾಮಿನೇಟ್ ಮಾಡಬೇಕು, ಅಲ್ಲದೆ ಪತಿಗೂ ಹೆಚ್ಚು ಆಸೆ ಇದ್ದಿದ್ದರೆ, ಈ ಇಬ್ಬರನ್ನೂ ವರ್ಷದ ಎಂದು ನಾಮಿನೇಟ್ ಮಾಡುತ್ತಿದ್ದೆ, ಆದರೆ ಆತ ಸಿಟ್ಟು ಮಾಡಿಕೊಂಡು ಅವಕಾಶ ಕಳೆದುಕೊಂಡಿದ್ದಾನೆ ಎಂದು ಉದ್ಯಮಿ ಆನಂದ್ ಮಹಿಂದ್ರಾ ಬರೆದುಕೊಂಡಿದ್ದಾರೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 3 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದಿದೆ.ಅಲ್ಲದೆ ಕಮೆಂಟ್ ಮಾಡುವ ಮೂಲಕ ಸಹ ನೆಟ್ಟಿಗರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಕೆಲವು ಯಾಂತ್ರಿಕ ಪತಿಯಂದಿರು ಇಂತಹ ಅಪರೂಪದ, ನೆನಪಿನಲ್ಲಿಟ್ಟುಕೊಳ್ಳಬಹುದಾದ ಸಿಹಿ ಕ್ಷನಗಳನ್ನು ಆನಂದಿಸಲು ಹಿಂಜರಿಯುತ್ತಾರೆ ಎನ್ನುವ ಪ್ರತಿಕ್ರಿಯೆಗಳು ಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+