ಜಹಾಂಗೀರ್ ಪುರಿ ಮೆಟ್ರೋ ನಿಲ್ದಾಣ ಬಳಿ ರುಂಡವಿಲ್ಲದ ಮಹಿಳೆಯ ಶವ ಪತ್ತೆ
ನವದೆಹಲಿ, ಜೂನ್ 9: ಅಪರಿಚಿತ ಮಹಿಳೆಯ ರುಂಡವಿಲ್ಲದ ದೇಹವು ನವದೆಹಲಿಯ ಜಹಾಂಗೀರ್ ಪುರಿ ಮೆಟ್ರೋ ನಿಲ್ದಾಣದ ಬಳಿ ಶನಿವಾರ ಸಂಜೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಹೊದಿಕೆಯಲ್ಲಿ ಸುತ್ತಲಾಗಿತ್ತು. ಅದನ್ನು ಲೋಹದ ಟ್ರಂಕ್ ನಲ್ಲಿ ಇಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಹಿಳೆಯನ್ನು ಎರಡು ಅಥವಾ ಮೂರು ದಿನಗಳ ಹಿಂದೆ ಕೊಲ್ಲಲಾಗಿದೆ. ದೇಹವು ಅದಾಗಲೇ ಕೊಳೆಯುತ್ತಾ ಬರುತ್ತಿದ್ದು, ಚರ್ಮವು ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ಹೇಳಲಾಗಿದೆ. ಶವವನ್ನು ಬಾಬು ಜಗಜೀವನ್ ರಾಮ್ ಮೆಮೋರಿಯಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಅಪರಿಚಿತ ಮಹಿಳೆಯ ರುಂಡ ಇಲ್ಲದ ಶವ ಸಿಕ್ಕಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಅಂಥ ಜನನಿಬಿಡ ಪ್ರದೇಶದಲ್ಲಿ ಶವವನ್ನು ಹೀಗೆ ಇರಿಸಿ ಹೋಗಿರುವುದರಿಂದ ರಕ್ಷಣಾ ವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆ ಎದ್ದಿದೆ.












Click it and Unblock the Notifications