• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಚಿತವಾಗಿ ಇಂಟರ್ನೆಟ್ ನೀಡಲು ಸಾಧ್ಯವಿಲ್ಲ: ಫೇಸ್ ಬುಕ್ ಸಿಇಒ

By Mahesh
|

ನವದೆಹಲಿ, ಅ.28: ಭಾರತ ಪ್ರವಾಸದಲ್ಲಿರುವ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಸಂಸ್ಥಾಪಕ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು ಮಂಗಳವಾರ ದೆಹಲಿಯ ಐಐಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಫೇಸ್ ಬುಕ್ ನ ಮಹತ್ವದ ಯೋಜನೆಯಾದ ಇಂಟರ್ನೆಟ್. ಆರ್ಗ್ ಬಗ್ಗೆ ಹೆಚ್ಚಿನ ಪ್ರಶ್ನೆಗಳು ಕೇಳಿ ಬಂದಿತ್ತು. ಈ ಮಹತ್ವದ ಯೋಜನೆ ಸಾಕಾರಗೊಳ್ಳಲು ಭಾರತದ ನೆರವು ಅಗತ್ಯ. ಭಾರತವನ್ನು ಬಿಟ್ಟು ವಿಶ್ವವನ್ನು ಸಂಪರ್ಕ ಜಾಲದಲ್ಲಿ ಬೆಸೆಯಲು ಸಾಧ್ಯವಿಲ್ಲ.ಪ್ರಪಂಚವನ್ನು ಸಂಪರ್ಕಿಸಲು ಭಾರತ ಬೀಗದ ಕೀ ಇದ್ದಂತೆ. ಭವಿಷ್ಯದಲ್ಲಿ ಭಾರತ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರು ಹೇಳಿದರು.

ನಾನು ಭಾರತಕ್ಕೆ ಬಂದಿರುವುದು ತುಂಬಾ ಸಂತೋಷ ತಂದಿದೆ. ಇಲ್ಲಿ ವಿಶಿಷ್ಟ ಶಕ್ತಿ ಇದೆ. ಫೇಸ್‌ಬುಕ್‌ನಿಂದ ಇಡೀ ವಿಶ್ವವನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದ್ದೇವೆ. ಈ ಮೂಲಕ ಎಲ್ಲಾ ಜನರನ್ನು ಒಂದುಗೂಡಿಸುವುದು ನಮ್ಮ ಉದ್ದೇಶ ಎಂದರು.

ಫೇಸ್‌ಬುಕ್‌ಗೆ ಭಾರತ ಒಂದು ಪ್ರಮುಖವಾದ ಮಾರುಕಟ್ಟೆಯಾಗಿದೆ. ಇಂಟರ್ನೆಟ್‌ನಿಂದ ಬಡತನ ನಿರ್ಮೂಲನೆ ಸಾಧ್ಯ. ಅದರೆ, ಉಚಿತವಾಗಿ ಇಂಟರ್ನೆಟ್ ನೀಡಲು ಸಾಧ್ಯವಿಲ್ಲ. ಇಂಟರ್ನೆಟ್ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು internet.org ಸ್ಥಾಪಿಸಲಾಗಿದೆ ಎಂದರು.

 ಭಾರತದ ಶಾಲೆಗಳಲ್ಲಿ ಹೂಡಿಕೆ

ಭಾರತದ ಶಾಲೆಗಳಲ್ಲಿ ಹೂಡಿಕೆ

ಭಾರತ ಹಾಗೂ ಅಫ್ರಿಕಾ ಶಾಲೆಗಳ ಅಭಿವೃದ್ಧಿಗಾಗಿ ಫೇಸ್ ಬುಕ್ ಹೂಡಿಕೆ ಮಾಡುತ್ತಿದೆ. ಈ ಬಗ್ಗೆ ಫೇಸ್ ಬುಕ್ ಕೇಂದ್ರ ಕಚೇರಿ ಪಾಲೋ ಆಲ್ಟೋದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ವಾಹ್ ! ತಾಜ್ ಎಂದ ಮಾರ್ಕ್ ಝುಕರ್ ಬರ್ಗ್

ವಾಹ್ ! ತಾಜ್ ಎಂದ ಮಾರ್ಕ್ ಝುಕರ್ ಬರ್ಗ್

ದೆಹಲಿಯ ಐಐಟಿಯಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದಕ್ಕೂ ಮುನ್ನ ಆಗ್ರಾದ ಪ್ರೇಮ ಸೌಧ ತಾಜ್ ಮಹಲ್ ನೋಡಿ ಆನಂದದಿಂದ ವಾಹ್ ! ತಾಜ್ ಎಂದ ಮಾರ್ಕ್ ಝುಕರ್ ಬರ್ಗ್

ನಾಪತ್ತೆಯಾದವರ ಪತ್ತೆಗಾಗಿ ಫೇಸ್ ಬುಕ್

ನಾಪತ್ತೆಯಾದವರ ಪತ್ತೆಗಾಗಿ ಫೇಸ್ ಬುಕ್

ನಾಪತ್ತೆಯಾದವರ ಪತ್ತೆಗಾಗಿ ಗೂಗಲ್ ಸರ್ಚ್ ನೆರವಾಗುವಂತೆ ಫೇಸ್ ಬುಕ್ ಕೂಡಾ ಇಂಥದ್ದೊಂದು ಸಾಮಾಜಿಕ ಕಳಕಳಿ ಕಾರ್ಯಕ್ಕೆ ಮುಂದಾಗಿದೆ. ಅಮೆರಿಕದಲ್ಲಿ ಮಕ್ಕಳ ನಾಪತ್ತೆ ಬಗ್ಗೆ ಈಗಾಗಲೇ ಅಲರ್ಟ್ ಸೃಷ್ಟಿಸಲಾಗಿದೆ ಎಂದರು.

ನಾನು ಫೇಸ್ ಬುಕ್ ಸೃಷ್ಟಿಸಿಲ್ಲ

ನಾನು ಫೇಸ್ ಬುಕ್ ಸೃಷ್ಟಿಸಿಲ್ಲ

ನಾನೊಬ್ಬನೇ ಫೇಸ್ ಬುಕ್ ಸಂಸ್ಥಾಪಕನಲ್ಲ. ಇದರ ಹಿಂದೆ ಹಲವಾರು ಜನರ ಪರಿಶ್ರಮವಿದೆ. ನಾನು ವ್ಯವಸ್ಥೆಯ ನಿರ್ವಾಹಕ ಮಾತ್ರ ಎಂದ ಮಾರ್ಕ್.

ನೆಟ್ ನ್ಯೂಟ್ರಾಲಿಟಿಗೆ ಬೆಂಬಲ

ನೆಟ್ ನ್ಯೂಟ್ರಾಲಿಟಿಗೆ ಬೆಂಬಲ

ನೆಟ್ ನ್ಯೂಟ್ರಾಲಿಟಿಗೆ ಬೆಂಬಲ ವ್ಯಕ್ತಪಡಿಸುತ್ತಾ ಈ ಬಗ್ಗೆ ಎಲ್ಲೆಡೆ ಅರಿವು ಮೂಡಬೇಕು. ಇಂಟರ್ನೆಟ್ ಎಲ್ಲೆಡೆ ಸುಲಭಕ್ಕೆ ಸಿಗುವಂತಾಗಬೇಕು ಎಂದಿದ್ದಾರೆ.

ಸಂವಾದ ನಿರತ ಮಾರ್ಕ್

ಸಂವಾದ ನಿರತ ಮಾರ್ಕ್

ಸಂವಾದ ನಿರತ ಮಾರ್ಕ್ ಅವರು ನೀಡಿದ ಹೇಳಿಕೆಯ ಚಿತ್ರ

ಸಂವಾದ ನಿರತ ಮಾರ್ಕ್

ಸಂವಾದ ನಿರತ ಮಾರ್ಕ್

ಸಂವಾದ ನಿರತ ಮಾರ್ಕ್ ಅವರು ನೆಟ್ ನ್ಯೂಟ್ರಾಲಿಟಿ, ಡಿಜಿಟಲ್ ಇಂಡಿಯಾ, ಇಂಟರ್ನೆಟ್. ಆರ್ಗ್, ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಸಂವಾದದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Facebook founder Mark Zuckerberg on Wednesday said the world cannot be connected without India. Facebook founder Mark Zuckerberg conducted a Townhall Q&A at the Indian Institute of Technology, Delhi. The Q&A session was attended by around 900 students and other invitees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more