6.7 ಬಿಲಿಯನ್ ಅಮೆರಿಕ ಡಾಲರ್ ದಾವೂದ್ ಸಾಮ್ರಾಜ್ಯಕ್ಕೆ ಇನ್ಯಾರು ಗತಿ?

ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂನದು ಸಾವಿರಾರು ಕೋಟಿ ರುಪಾಯಿ ಮೌಲ್ಯದ ಸಾಮ್ರಾಜ್ಯ. ಇದೀಗ ಸಾವನ್ನು ಎದುರು ನೋಡುತ್ತಿರುವ ಅತನ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ

ನವದೆಹಲಿ, ಮೇ 1: ದಾವೂದ್ ಇಬ್ರಾಹಿಂಗೆ ಕರಾಚಿಯ ಅಗಾ ಖಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯೇನೋ ನಡೆಯುತ್ತಿದೆ. ಆದರೆ ಬದುಕುವ ಸಾಧ್ಯತೆ ಇಲ್ಲ. ಆತನ ನಿಕಟವರ್ತಿ ಚೋಟಾ ಶಕೀಲ್ ಅನಾರೋಗ್ಯದ ಸುದ್ದಿಯನ್ನು ನಿರಾಕರಿಸಿದ್ದಾನೆ. ಆದರೆ ಭಾರತ ಗುಪ್ತಚರ ಇಲಾಖೆ ಅಧಿಕಾರಿಗಳ ಪ್ರಕಾರ, ದಾವೂದ್ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಏಳುತ್ತದೆ. ಅದಕ್ಕೆ ಅವಕಾಶ ನೀಡಬಾರದು ಎಂದು ಅತ ಹೀಗೆ ಹೇಳುತ್ತಿದ್ದಾನೆ.

ದಾವೂದ್ ಸಾಮ್ರಾಜ್ಯದ ಒಟ್ಟು ಮೌಲ್ಯ 6.7 ಬಿಲಿಯನ್ ಅಮೆರಿಕ ಡಾಲರ್. ಅದು ಯಾವ ಪರಿ ಶ್ರೀಮಂತ ಸಾಮ್ರಾಜ್ಯ ಅಂದರೆ 2015ರಲ್ಲಿ ಆ ಬಗ್ಗೆ ಫೋರ್ಬ್ಸ್ ನಿಯತಕಾಲಿಕೆಯಲ್ಲಿ ಒಂದು ವರದಿಯೇ ಪ್ರಕಟವಾಗಿತ್ತು. ದಾವೂದ್ ನನ್ನು ಸಾರ್ವಕಾಲಿಕ ಶ್ರೀಮಂತ ಗ್ಯಾಂಗ್ ಸ್ಟರ್ ಎಂದು ಆಗ ವ್ಯಾಖ್ಯಾನಿಸಿತ್ತು ಫೋರ್ಬ್ಸ್.[ಸಾವು ಎದುರು ನೋಡುತ್ತಾ ಕರಾಚಿಯಲ್ಲಿ ಕೊನೆ ಕ್ಷಣ ಎಣಿಸುತ್ತಿರುವ ದಾವೂದ್ ಇಬ್ರಾಹಿಂ]

With Dawood almost dead, who will succeed his 6.7 billion dollar empire

ಅಧಿಕಾರಿಗಳು ಹೇಳುವ ಪ್ರಕಾರ, ಆತನದು ವಜ್ರ, ಡ್ರಗ್ ಹಾಗೂ ಶಸ್ತ್ರಾಸ್ತ್ರ ಬಿಜಿನೆಸ್ ಇದೆ. ಕ್ರಿಕೆಟ್ ಬೆಟ್ಟಿಂಗ್ ನ ನಿಯಂತ್ರಣ ಮಾಡುವ ಜತೆಗೆ ನಕಲಿ ನೋಟು ದಂಧೆ ಕೂಡ ನಡೆಸುತ್ತಾನೆ. ಕಾಲಿನ ಗ್ಯಾಂಗ್ರಿನ್ ಜತೆಗೆ ದಿನದಿನಕ್ಕೂ ಕುಸಿಯುತ್ತಿರುವ ಆತನ ಆರೋಗ್ಯ ಸ್ಥಿತಿಯು ದಾವೂದ್ ನ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಹುಟ್ಟು ಹಾಕಿದೆ.

With Dawood almost dead, who will succeed his 6.7 billion dollar empire

ದಾವೂದ್ ನ 6.7 ಬಿಲಿಯನ್ ಅಮೆರಿಕ ಡಾಲರ್ ಮೌಲ್ಯದ ಸಾಮ್ರಾಜ್ಯಕ್ಕೆ ಮುಂದಿನ ದೊರೆ ಯಾರು ಎಂಬುದನ್ನು ಪಾಕಿಸ್ತಾನದ ಐಎಸ್ ಐ ತೀರ್ಮಾನಿಸುತ್ತದೆ. ಇನ್ನು ಪಾತಕಿ ದಾವೂದ್ ನಂಬುವುದು ಇಬ್ಬರನ್ನೇ. ಒಬ್ಬ ಅತನ ತಮ್ಮ ಅನೀಸ್. ಮತ್ತೊಬ್ಬ ಚೋಟಾ ಶಕೀಲ್. ಆತನ ಸಾವಿನ ನಂತರ ಕುಟುಂಬದವರೇ ಈ ಎಲ್ಲ ವ್ಯವಹಾರ ನಡೆಸಲಿ ಎಂಬುದು ಅತನ ಇಚ್ಛೆ.

With Dawood almost dead, who will succeed his 6.7 billion dollar empire

ಈಗಿನ ಸ್ಥಿತಿಯ ಬಗ್ಗೆ ಮಾಧ್ಯಮಗಳ ವರದಿ ಆಧರಿಸಿ ಹೇಳುವುದಾದರೆ, ದಾವೂದ್ ಗೆ ಇನ್ನು ಈ ವ್ಯವಹಾರಗಳನ್ನು ನಡೆಸುವುದು ಸಾಧ್ಯವೇ ಇಲ್ಲ. ಕಳೆದ ಎರಡು ವರ್ಷದಿಂದ ಅತನ ಆರೋಗ್ಯ ಕುಸಿಯುತ್ತಲೇ ಇದೆ. ಅತ ಈಗಾಗಲೇ ಹಿಂದೆ ಸರಿದಿದ್ದಾನೆ. ಶಕೀಲ್ ನ ಸಹಾಯ ಪಡೆದು ವ್ಯವಹಾರ ನಡೆಸುವಂತೆ ತನ್ನ ಸೋದರ ಅನೀಸ್ ಗೆ ಹೇಳಿದ್ದಾನೆ.[ದಾವೂದ್ ಇಬ್ರಾಹಿಂ ಆರೋಗ್ಯ ಸ್ಥಿರ: ಬಲಗೈ ಬಂಟ ಛೋಟಾ ಶಕೀಲ್]

With Dawood almost dead, who will succeed his 6.7 billion dollar empire

ಜಾಗತಿಕ ಭಯೋತ್ಪಾದಕ
ದಾವೂದ್ ಇಬ್ರಾಹಿಂನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಆತ ಪಾಕಿಸ್ತಾನದಲ್ಲಿ ಇದ್ದಾನೆ ಎಂದು ಖಾತ್ರಿ ಪಡಿಸಿದೆ. ಭಾರತ ಹಂಚಿಕೊಂಡ ಒಂಬತ್ತು ವಿಳಾಸದಲ್ಲಿ ಆರು ಆತನವೇ ಎಂದು ಹೇಳಿದೆ. ದಾವೂದ್ ಇಬ್ರಾಹಿಂ ಇರುವುದು ಕರಾಚಿಯ ಸಿರಿವಂತ ಕ್ಲಿಫ್ಟನ್ ಪ್ರದೇಶದಲ್ಲಿ.

ಅಲ್ಲಿ ಆತನ ಬಂಗಲೆಯು D-13, ಬ್ಲಾಕ್ 4ರಲ್ಲಿ ಆರು ಸಾವಿರ ಚದರ ಯಾರ್ಡ್ಸ್ ನಷ್ಟು ವ್ಯಾಪಿಸಿದೆ. ಇನ್ನು ಆತನ ಇತರ ಹೆಸರುಗಳು ಇಂತಿವೆ. ಶೇಖ್ ದಾವೂದ್ ಹುಸೇನ್, ಅಬ್ದುಲ್ ಹಮೀದ್ ಅಬ್ದುಲ್ ಅಜೀಜ್, ಅನೀಸ್ ಇಬ್ರಾಹಿಂ, ಅಜೀಜ್ ದಿಲೀಪ್, ದೌದ್ ಹಸನ್ ಶೇಖ್ ಇಬ್ರಾಹಿಂ ಕಸ್ಕರ್, ದೌದ್ ಇಬ್ರಾಹಿಂ ಮೆಮನ್ ಕಸ್ಕರ್, ದಾವೂದ್ ಹಸನ್ ಇಬ್ರಾಹಿಂ ಕಸ್ಕರ್, ದಾವೂದ್ ಇಬ್ರಾಹಿಂ ಮೆಮನ್, ದಾವೂದ್ ಸಬ್ರಿ.. ಹೀಗೆ ಮುಂದುವರಿಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+