ನವದೆಹಲಿ: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ
Recommended Video

ಬಿಜೆಪಿ ಪರಿವರ್ತನಾ ಯಾತ್ರೆಗೆ ಸೆಡ್ಡು ಹೊಡೆಯಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ | Oneindia Kannada
ನವದೆಹಲಿ, ಡಿಸೆಂಬರ್ 15: ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ (ಡಿ.15) ಆರಂಭವಾಗಲಿದ್ದು, ಜ.05 ರವರೆಗೆ ನಡೆಯಲಿದೆ.
ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ತ್ರಿವಳಿ ತಲಾಖ್, ಹಿಂದುಗಳಿದ ವರ್ಗಗಳ ಸಮಿತಿಗಳಿಗೆ ಸಾಂವಿಧಾನಿಕ ಸ್ಥಾನಮಾನ ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗುವ ಸಂಭವವಿದೆ. ಜಿಎಸ್ ಟಿ ಕುರಿತು ಪ್ರತಿಪಕ್ಷಗಳು ಜೋರುದನಿ ಎಬ್ಬಿಸುವ ಸಾಧ್ಯತೆ ಇದೆ.

ಅಧಿವೇಶನದ ಮೊದಲ ದಿನ, ಮುಂಗಾರು ಅಧಿವೇಶನದ ನಂಗತರ ಅಸುನೀಗಿದ ಸಂಸತ್ ಸದಸ್ಯರು ಮತ್ತು ಮಾಜಿ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ.
ಗುಜರಾತ್ ಚುನಾವಣೆಯ ಕಾರಣ ಬೇಕೆಂದೇ ಚಳಿಗಾಲದ ಅಧಿವೇಶನವನ್ನು ಕೇಂದ್ರ ಸರ್ಕಾರ ಮುಂದೂಡುತ್ತಿದೆ, ಅದಕ್ಕೆ ಪ್ರತಿಪಕ್ಷಗಳನ್ನು ಎದುರಿಸುವ ತಾಕತ್ತಿಲ್ಲ ಎಂಬೆಲ್ಲ ಸುದ್ದಿಗಳು ಎದ್ದಿದ್ದವು. ಆದರೆ ಈ ಯಾವುದರೆಡೆಗೂ ತಲೆಕೆಡಿಸಿಕೊಳ್ಳದ ಕೇಂದ್ರ ಸರ್ಕಾರ ಎಲ್ಲ ಆರೋಪಗಳನ್ನೂ ಎದುರಿಸಲು ಸನ್ನದ್ಧವಾಗಿದೆ.












Click it and Unblock the Notifications