ಪ್ರತಿಷ್ಠಿತ ವೈಲ್ಡ್‌ ಸ್ಕ್ರೀನ್ ಫೆಸ್ಟಿವಲ್ 2020: ಅಧಿಕೃತ ಆಯ್ಕೆಗೊಂಡ ಏಷ್ಯಾದ ಏಕೈಕ ಚಿತ್ರ ಫ್ಲೈಯಿಂಗ್ ಎಲಿಫೆಂಟ್ಸ್

ನವದೆಹಲಿ, ಆಗಸ್ಟ್‌ 06: ವಿಶ್ವದ ಅತ್ಯಂತ ಪ್ರತಿಷ್ಠಿತ ವನ್ಯಜೀವಿ ಚಲನಚಿತ್ರೋತ್ಸವ ವೈಲ್ಡ್‌ ಸ್ಕ್ರೀನ್ ಫೆಸ್ಟಿವಲ್‌ 2020ಗೆ ಸಿಡಬ್ಲ್ಯುಎಸ್ ಮತ್ತು ಸೇವಿಂಗ್ ನೇಚರ್ ಬೆಂಬಲಿಸುವ ಫ್ಲೈಯಿಂಗ್ ಎಲಿಫೆಂಟ್ಸ್ ಚಿತ್ರ ಅಧಿಕೃತವಾಗಿ ಆಯ್ಕೆಗೊಂಡಿದೆ.

'ಗ್ರೀನ್ ಆಸ್ಕರ್‌' ಎಂದೇ ಕರೆಯಲ್ಪಡುವ ಈ ವೈಲ್ಡ್‌ ಸ್ಕ್ರೀನ್ ಫೆಸ್ಟಿವಲ್‌ನಲ್ಲಿ ಪಾಂಡಾ ಪ್ರಶಸ್ತಿಗಳನ್ನು ಸಹ ಆಯೋಜಿಸಿದೆ. ಇದರಲ್ಲಿ ಫ್ಲೈಯಿಂಗ್ ಎಲಿಫೆಂಟ್ಸ್ ಚಿತ್ರವು ಅಧಿಕೃತವಾಗಿ ಕಾರ್ಯಕ್ರಮದಲ್ಲಿ ನಾಮನಿರ್ದೇಶನ ಮಾಡಲಾಗಿದೆ.

ಈ ಕಾರ್ಯಕ್ರಮದಲ್ಲಿ ಆಯ್ಕೆಗೊಂಡ ಏಷ್ಯಾದ ಏಕೈಕ ಚಿತ್ರ ಇದಾಗಿದ್ದು, 40 ಕ್ಕೂ ಹೆಚ್ಚು ದೇಶಗಳಿಂದ ನೂರಾರು ಸಲ್ಲಿಕೆಗಳಿಂದ 18 ಕಿರುಚಿತ್ರಗಳಲ್ಲಿ ಮತ್ತು 17 ಚಲನಚಿತ್ರಗಳಲ್ಲಿ ಒಂದಾಗಿದೆ.

Wildscreen Film Festival 2020: Flying Elephants Film Nominated

ಆ್ಯಪಲ್ ಟಿವಿ +, 'ದಿ ಎಲಿಫೆಂಟ್ ಕ್ವೀನ್', ಮತ್ತು ಬಿಬಿಸಿ ನ್ಯಾಚುರಲ್ ಹಿಸ್ಟರಿ ಯುನಿಟ್‌ನ 'ಅರ್ಥ್ ಫ್ರಮ್ ಸ್ಪೇಸ್' ಮತ್ತು 'ಪ್ಯಾಂಗೊಲಿನ್ಸ್-ದಿ ವರ್ಲ್ಡ್ಸ್ ಮೋಸ್ಟ್ ವಾಂಟೆಡ್ ಅನಿಮಲ್ಸ್' ಮೊದಲ ಸಾಕ್ಷ್ಯಚಿತ್ರ ಸೇರಿದಂತೆ ನೈಸರ್ಗಿಕ ಇತಿಹಾಸ ಪ್ರಕಾರದ ಸ್ಥಾಪಿತ ಹೆವಿವೇಯ್ಟ್‌ಗಳ ಚಲನಚಿತ್ರಗಳನ್ನು ಈ ಆಯ್ಕೆಯು ಒಳಗೊಂಡಿದೆ.

ಈ ಸಾಮೂಹಿಕ ವಿಜಯಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುವುದಾಗಿ ಚಿತ್ರದ ನಿರ್ದೇಶಕ ಪ್ರಕಾಶ್ ಹೇಳಿದ್ದಾರೆ. ಈ ಪ್ರೀತಿಯ ಯೋಜನೆಗೆ ಕೊಡುಗೆ ನೀಡಿದ ಮತ್ತು ನಂಬಿದ ಎಲ್ಲ ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ.

ಫ್ಲೈಯಿಂಗ್ ಎಲಿಫೆಂಟ್ಸ್ - ಎ ಮದರ್ಸ್ ಹೋಪ್, ಅರಣ್ಯ ವಿಘಟನೆ ಮತ್ತು ವನ್ಯಜೀವಿ ವ್ಯಾಪಾರದಂತಹ ಮಾನವ ಮಧ್ಯಸ್ಥಿಕೆಗಳು ಆನೆಗಳ ಚಲನೆ ಮತ್ತು ಜೀವನವನ್ನು ಹೇಗೆ ಅಡ್ಡಿಪಡಿಸಿದೆ ಎಂಬುದನ್ನು ಚಿತ್ರಿಸುವ ಕಿರುಚಿತ್ರವಾಗಿದೆ.

ಚಿತ್ರ ಮಾಡಲು ಸುಮಾರು ಎರಡು ವರ್ಷಗಳು ತೆಗೆದುಕೊಳ್ಳಲಾಗಿದೆ. ಈ ಕಥೆಯನ್ನು ಬೆಟ್ಟ ಕುರುಬಾ ಬುಡಕಟ್ಟು ಭಾಷೆಯಲ್ಲಿ, ತಾಯಿ ಆನೆಯ ಧ್ವನಿಯಲ್ಲಿ ನಿರೂಪಿಸಲಾಗಿದೆ. ಚಿತ್ರವು ಆಶಾವಾದಿ ಟಿಪ್ಪಣಿಯಲ್ಲಿ ಕೊನೆಗೊಳ್ಳುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+