• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

EVM ಪರಿಚಯಿಸಿದ್ದು ಯಾರು? ಸಿಬಲ್ ಗೆ ಸುಪ್ರೀಂ ಪ್ರಶ್ನೆ!

By ವಿಕಾಸ್ ನಂಜಪ್ಪ
|

ನವದೆಹಲಿ, ಏಪ್ರಿಲ್ 14: "EVM ಅನ್ನು ಪರಿಚಯಿಸಿದ್ದು ಯಾರು..? ಮೊಟ್ಟಮೊದಲ ಬಾರಿಗೆ ನಿಮ್ಮ ಪಕ್ಷವೇ ಅಲ್ಲವೆ EVM (Elctronic Voting Machine) ಅನ್ನು ಭಾರತದಲ್ಲಿ ಪರಿಚಯಿಸಿದ್ದು?" ಹೀಗೆಂದು ಕಾಂಗ್ರೆಸ್ ಮುಖಂಡ ಮತ್ತು ಹಿರಿಯ ವಕೀಲ ಕಪೀಲ್ ಸಿಬಲ್ ಅವರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಪಂಚ ರಾಜ್ಯಗಳ ಚುನಾವಣೆಯ ನಂತರ ಹಲವು ಪಕ್ಷಗಳು EVM ಕಾರ್ಯದಕ್ಷತೆಯ ಕುರಿತು ತಕರಾರೆತ್ತಿದ್ದವು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. EVM ಗಳು ದೋಷಪೂರಿತವಾಗುವ ಸಾಧ್ಯತೆ ಇರಬಹುದು ಎಂಬ ಕಾಂಗ್ರೆಸ್ ಸೇರಿದಂತೆ 10 ಕ್ಕೂ ಹೆಚ್ಚು ಪಕ್ಷಗಳ ದೂರಿಗೆ ಕಪಿಲ್ ಸಿಬಲ್ ಸಹ ಬೆಂಬಲ ಸೂಚಿಸಿದ್ದರು.[ಬಿಜೆಪಿ ಗೆಲುವಿಗೆ ಇವಿಎಂ ಲೋಪ ಎನ್ನುತ್ತಿದ್ದ ಕೇಜ್ರಿವಾಲ್ ಈಗ ಏನು ಹೇಳ್ತಾರೋ?]

EVM ಕಾರ್ಯದಕ್ಷತೆಯ ಬಗ್ಗೆ ನಮಗೆ ನಂಬಿಕೆಯಿಲ್ಲ. ಅವು ಹ್ಯಾಕ್ ಆಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಇನ್ನು ಮೇಲೆ ಮತದಾನ ದೃಢೀಕರಣ ಯಂತ್ರವನ್ನೂ (VVPAT) ಉಪಯೋಗಿಸಬೇಕು ಎಂದು ದೂರು ನೀಡಿದ ಪಕ್ಷಗಳು ನ್ಯಾಯಾಲಯದಲ್ಲಿ ಮನವಿ ಮಾಡಿದ್ದವು.

ಕುಣಿಯೋಕೆ ಬಾರದವನು ನೆಲ ಡೊಂಕು ಅಂದನಂತೆ ಎಂಬ ಟೀಕೆಯೂ ಆ ಸಂದರ್ಭದಲ್ಲಿ ಎಲ್ಲೆಡೆ ಹುಟ್ಟಿಕೊಂಡಿತ್ತು!

ಸುಪ್ರೀಂ ಗಂಭೀರ ಪ್ರಶ್ನೆ

ಸುಪ್ರೀಂ ಗಂಭೀರ ಪ್ರಶ್ನೆ

ದಕ್ಷಿಣ ಅಮೆರಿಕವನ್ನು ಬಿಟ್ಟೆ ಬೇರೆ ಯಾವ ದೇಶವೂ EVM ಬಳಸುತ್ತಿಲ್ಲ, ಇಂದಿಗೂ ಮತದಾನಕ್ಕೆ ಎಲ್ಲ ದೇಶಗಳೂ ಸಾಂಪ್ರದಾಯಿಕ ವಿಧಾನವನ್ನೇ ಬಳಸುತ್ತಿವೆ ಎಂದಿದ್ದ ಸಿಬಲ್ ಮಾತಿಗೆ ಕೋರ್ಟ್ ಛೀಮಾರಿಹಾಕಿದೆ. EVM ಅನ್ನು ನಿಮ್ಮ ಪಕ್ಷವೇ ಪರಿಚಯಿಸಿದ್ದು ಎಂಬುದು ಗೊತ್ತಿದ್ದರೂ, ಯಾವ ದೇಶವೂ EVM ಬಳಸುತ್ತಿಲ್ಲ ಎಂದು ಯಾವ ಆಧಾರದ ಮೇಲೆ ಹೇಳಿದಿರಿ ಎಂದು ಅವರನ್ನು ಗಂಭೀರವಾಗಿ ಪ್ರಶ್ನಿಸಿದೆ.[ಇವಿಎಂ ಟ್ಯಾಂಪರ್ ಮಾಡಿ ತೋರಿಸಿ - ಇಸಿ ಸವಾಲ್]

ಅಮರೀಂದರ್ ವಿರೋಧ

ಅಮರೀಂದರ್ ವಿರೋಧ

EVM ಕುರಿತು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ಆರೋಪಕ್ಕೆ ಹಲವು ಕಾಂಗ್ರೆಸ್ಸಿಗರೇ ಬೆಂಬಲ ನೀಡಿರಲಿಲ್ಲ. ಪಂಜಾಬಿನ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಅಕಸ್ಮಾತ್ EVM ನಲ್ಲಿ ದೋಷವಿದ್ದಿದ್ದರೆ ಪಂಜಾಬಿನಲ್ಲಿ ಕಾಂಗ್ರೆಸ್ ಬದಲು ಅಕಾಲಿದಳ ಅಧಿಕಾರಕ್ಕೆ ಬಂದಿರುತ್ತಿತ್ತು, ಇಂಥ ಆರೋಪಗಳಿಗೆ ಅರ್ಥವಿಲ್ಲ ಎಂದಿದ್ದರು.[EVM ನಲ್ಲಿ ಸಮಸ್ಯೆ ಇದ್ದಿದ್ದರೆ ಕಾಂಗ್ರೆಸ್ ಗೆಲ್ಲುತ್ತಿರಲಿಲ್ಲ!: ಅಮರೀಂದರ್]

ಇದು ಅನರ್ಥ ಆರೋಪ ಎಂದಿದ್ದ ಮೋಯ್ಲಿ

ಇದು ಅನರ್ಥ ಆರೋಪ ಎಂದಿದ್ದ ಮೋಯ್ಲಿ

"EVM ನಲ್ಲಿ ದೋಷವಿದೆ ಎಂಬ ಮಾತಿಗೆ ಅರ್ಥವಿಲ್ಲ. EVM ಅನ್ನು ನಾನು ಕಾನೂನು ಸಚಿವನಾಗಿದ್ದಾಗಲೇ ಕಾರ್ಯರೂಪಕ್ಕೆ ತಂದಿದ್ದು. ಆ ಸಮಯದಲ್ಲೂ ಈ ಬ್ಗಗೆ ವ್ಯಾಪಕ ಟೀಕೆ ಎದುರಾಗಿತ್ತು. ಆದರೆ ಸರಿಯಾದ ಪರೀಕ್ಷೆಯ ನಂತರವೇ ಅದನ್ನು ಕಾರ್ಯರೂಪಕ್ಕಿಳಿಸಿದ್ದೇವೆ" ಎಂದು ಮಾಜಿ ಕಾನೂನು ಸಚಿವ ವೀರಪ್ಪ ಮೋಯ್ಲಿ ಹೇಳಿದ್ದರು.[ಸೋಲಿಗೆ ಇವಿಎಂ ಹೊಣೆಯಲ್ಲ: ವೀರಪ್ಪ ಮೋಯ್ಲಿ]

ಅಪರ್ಣಾ ಯಾದವ್ ಆರೋಪ

ಅಪರ್ಣಾ ಯಾದವ್ ಆರೋಪ

ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಕಿರಿ ಸೊಸೆ ಅಪರ್ಣಾ ಯಾದವ್, ತಮ್ಮ ಸೋಲಿಗೆ EVM ಖಂಡಿತ ಕಾರಣವಲ್ಲ, ನಮ್ಮದೇ ಪಕ್ಷದ ಕೆಲ ಸದಸ್ಯರ ನಂಬಿಕೆ ದ್ರೋಹವೇ ನನ್ನ ಸೋಲಿಗೆ ಕಾರಣ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು.[ನನ್ನ ಸೋಲಿಗೆ ಕಾರಣ EVM ಅಲ್ಲ, ನಂಬಿಕೆ ದ್ರೋಹ: ಅಪರ್ಣಾ ಯಾದವ್]

EVM ದೂಷಿಸಿದ್ದವರು

EVM ದೂಷಿಸಿದ್ದವರು

ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ ಉಳಿದ ಪಕ್ಷಗಳ ಕಳಪೆ ಪ್ರದರ್ಶನದ ನಂತರ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಸೇರಿದಂತೆ ಹಲವು ಗಣ್ಯರು EVM ಯಂತ್ರದ ಕಾರ್ಯದಕ್ಷತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.[ಉಪ ಚುನಾವಣೆ ಫಲಿತಾಂಶದ ಬಗ್ಗೆ ತಕರಾರು ತೆಗೆಯುವಂತೆಯೇ ಇಲ್ಲ]

English summary
"Wasn't it your party that introduced the Electronic Voting Machines, Mr Kapil Sibal?" This is what the Supreme Court had to say to the Congressman and senior advocate Sibal who said that the concept of EVMs is only being used in South America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X