ರಾಹುಲ್ ಗಾಂಧಿ ಮದುವೆ ಆಗ್ತಾರಾ? ಉತ್ತರಕ್ಕೆ ಈ ವಿಡಿಯೋ ನೋಡಿ!
Recommended Video

ನವದೆಹಲಿ, ಅಕ್ಟೋಬರ್ 27: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮದುವೆ ಆಗ್ತಾರಾ? ಆಗೋದಾದ್ರೆ ಯಾವಾಗ? ಯಾರನ್ನ? ಎಂಬಿತ್ಯಾದಿ ಪ್ರಶ್ನೆಗಳು ಅದೆಷ್ಟೋ ಸಾರಿ ಚರ್ಚೆಯಾಗಿವೆ. ಆದರೆ ತಮ್ಮ ಮದುವೆಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರಿಸಿದ ರಾಹುಲ್ ಗಾಂಧಿಯವರ ಜಾಣ್ಮೆಯ ಹೇಳಿಕೆ ಗೊಂದಲವನ್ನುಂಟು ಮಾಡಿದೆ.
ನವದೆಹಲಿಯಲ್ಲಿ ಅ.26 ರಂದು ನಡೆದ ಪಿಎಚ್ ಡಿ ಆನ್ಯುವಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಕ್ಸರ್ ವಿಜೇಂದರ್ ಸಿಂಗ್ ಪ್ರಶ್ನೆಗೆ ಉತ್ತರಿಸಿದರು.

"ನೀವು ಯಾವಾಗ ಮದುವೆ ಆಗುತ್ತೀರಾ?" ಎಂಬ ವಿಜೇಂದರ್ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, "ಆಗಬೇಕೆಂದಿರುವುವದು ಆಗಿಯೇ ಆಗುತ್ತದೆ. ಆದರೆ ನನಗೆ ನಂಬಿಕೆ ಇರುವುವದು ಗುರಿಯ ಮೇಲೆ(ಜಬ್ ಹೋಗಿ ತೋ ಹೋಗಿ, ಐ ಬಿಲೀವ್ ಇನ್ ಡೆಸ್ಟಿನಿ)" ಎಂಬ ಅಡ್ಡಗೋಡೆಯ ಮೇಲೆ ದೀಪವಿಟ್ಟಂಥ ಉತ್ತರ ನೀಡಿದ್ದಾರೆ. ರಾಹುಲ್ ತಮ್ಮ ಮದುವೆಯ ಕುರಿತು ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.
#WATCH: Congress Vice President Rahul Gandhi responds to Boxer Vijender Singh's question on sports, also answers "When will he get married?" pic.twitter.com/uyMEO155vT
— ANI (@ANI) October 26, 2017
ಒಟ್ಟಿನಲ್ಲಿ ಕಾಂಗ್ರೆಸ್ ಯುವರಾಜ ಮದುವೆಯಾಗುತ್ತಾರಾ? ಯಾವಾಗ ಎಂಬಿತ್ಯಾದಿ ಪ್ರಶ್ನೆಗಳಿಗೆ ರಾಹುಲ್ ಅವರು ಕೊಟ್ಟ ಪ್ರತಿಕ್ರಿಯೆಯಿಂದಲೇ ಜನರು ಉತ್ತರ ಹುಡುಕಿಕೊಳ್ಳಬೇಕಷ್ಟೆ!












Click it and Unblock the Notifications