15 ಸೆಕೆಂಡ್‌ಗೆ ಇಳಿಕೆಯಾದ ವಾಟ್ಸ್ ಅಪ್ ವಿಡಿಯೋ ಸ್ಟೇಟಸ್
ನವ ದೆಹಲಿ, ಮಾರ್ಚ್ 31: ವಾಟ್ಸ್ ಅಪ್ ಕೋಟಿ ಕೋಟಿ ಜನರ ಮೆಚ್ಚಿನ ಮೆಸೆಂಜರ್ ಅಪ್ ಆಗಿದೆ. ಲಕ್ಷಾಂತರ ಜನರ ಮುಂಜಾನೆ ಶುರುವಾಗುವುದು, ರಾತ್ರಿ ಕೊನೆಯಾಗುವುದು ವಾಟ್ಸ್ ಅಪ್ ಮೂಲಕವೇ ಆಗಿಬಿಟ್ಟಿದೆ. ಇದೀಗ, ವಾಟ್ಸ್ ಅಪ್ ಸ್ಟೇಟಸ್ ಫೀಚರ್ ಕೊಂಚ ಬದಲಾವಣೆ ಆಗಿದೆ.
Recommended Video
ವಾಟ್ಸ್ ಅಪ್ ಬಳಕೆ ಮಾಡುತ್ತಿರುವವರಿಗೆ ಸ್ಟೇಟಸ್ ಬಗ್ಗೆ ತಿಳಿದಿರುತ್ತದೆ. ಇದರಲ್ಲಿ ಬಳಕೆದಾರರು ಅಕ್ಷರಗಳನ್ನು, ಫೋಟೋಗಳನ್ನು, ವಿಡಿಯೋಗಳನ್ನು ಪೋಸ್ಟ್ ಮಾಡಬಹುದಾಗಿದೆ. ಇದು 24 ಗಂಟೆಗಳು ಮಾತ್ರ ಇರಲಿದೆ. ವಾಟ್ಸ್ ಅಪ್ ವಿಡಿಯೋ ಸ್ಟೇಟಸ್‌ಗೆ ಈ ಹಿಂದೆ 30 ಸೆಕೆಂಡ್ ಕಾಲವಧಿಯನ್ನು ನೀಡಲಾಗಿತ್ತು. ಆದರೆ, ಅದು 15 ಸೆಕೆಂಡ್‌ಗೆ ಇಳಿಕೆಯಾಗಿದೆ.
ಈಗಾಗಲೇ ಫೇಸ್‌ಬುಕ್, ನೆಟ್‌ಫ್ಲಿಕ್ಸ್, ಅಮೇಜಾನ್ ವಿಡಿಯೋ, ಯೂಟ್ಯೂಬ್‌ಗಳಲ್ಲಿ ವಿಡಿಯೋ ಕ್ವಾಲಿಟಿಯನ್ನು ಇಳಿಕೆ ಮಾಡಲಾಗಿದೆ. ಕೊರೊನಾ ವೈರಸ್, ಲಾಕ್ ಡೌನ್‌ನಿಂದ ದೇಶದ ಜನರೆಲ್ಲ ಮನೆಯಲ್ಲಿ ಇದ್ದು, ಇಂಟರ್‌ನೆಟ್ ಬಳಕೆ ಮಾಡುವುದು ಹೆಚ್ಚಾಗಿದೆ. ಹೀಗಾಗಿ, ಇಂಟರ್‌ನೆಟ್ ವಿಡಿಯೋ ಕ್ವಾಲಿಟಿಯನ್ನು ಕಡಿಮೆ ಮಾಡಲಾಗಿದೆ.

ಇದೀಗ ವಾಟ್ಸ್‌ಅಪ್ ಕೂಡ ಇದೇ ನಿರ್ಧಾರಕ್ಕೆ ಬಂದಿದೆ. 15 ಸೆಕೆಂಡ್ ಸ್ಟೇಟಸ್ ಹಾಕಲು ಮಾತ್ರ ಅವಕಾಶ ನೀಡಿದೆ. ಸದ್ಯ, 15 ಸೆಕೆಂಡ್‌ಗಿಂತ ಹೆಚ್ಚಿನ ವಿಡಿಯೋವನ್ನು ಪೋಸ್ಟ್ ಮಾಡಲು ಆಗುವುದಿಲ್ಲ.
ಅಂದಹಾಗೆ, ಈ ನಿರ್ಬಂಧ ಕೊರೊನಾ ವೈರಸ್ ದಿನಗಳು ಮುಗಿಯುವವರೆಗೆ ಮಾತ್ರ ಇರಲಿದ್ದು, ಆ ನಂತರ ಹಳೆ ರೀತಿಯೇ 30 ಸೆಕೆಂಡ್ ಸ್ಟೇಟಸ್ ಹಾಕಲು ಅವಕಾಶ ನೀಡಲಿದೆ.












Click it and Unblock the Notifications